ETV Bharat / state

ಸರ್ಕಾರಕ್ಕೆ ಯಾವಾಗ ಬುದ್ಧಿ ಬರತ್ತೋ ಆವಾಗ ದಾಸೋಹ ದಿನ ಅರ್ಥಪೂರ್ಣವಾಗಿ ಆಚರಣೆ ಮಾಡಲಿ: ವಿಜಯೇಂದ್ರ - BY VIJAYENDRA SLAMS

ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಲ್ಲಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

SHIVAKUMAR SREE 6TH PUNYA SMARANE
ಶ್ರೀಗಳ ಆಶೀರ್ವಾದ ಪಡೆದ ಬಿ.ವೈ. ವಿಜಯೇಂದ್ರ (ETV Bharat)
author img

By ETV Bharat Karnataka Team

Published : Jan 21, 2025, 4:34 PM IST

ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶಿವೈಕ್ಯ ಡಾ.ಶಿವಕುಮಾರ ಶ್ರೀಗಳ ಪುಣ್ಯ ಸಂಸ್ಮರಣೆಯಾಗಿದೆ. ಕೋಟ್ಯಂತರ ಭಕ್ತರಿಗೆ ಹರಸಿ ಹಾರೈಸಿದ‌ ಶ್ರೀಗಳ ಈ ದಿನವನ್ನು ಮಾನ್ಯ ಯಡಿಯೂರಪ್ಪ ದಾಸೋಹ ದಿನವೆಂದು ಘೋಷಣೆ ಮಾಡಿದ್ದರು. ಆದರೆ, ಈ ಸರ್ಕಾರ ಈ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕಿದೆ. ಸರ್ಕಾರಕ್ಕೆ ಯಾವಾಗ ಬುದ್ಧಿ ಬರತ್ತೋ ಆವಾಗ ದಾಸೋಹ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿವಿದರು.

ಶ್ರೀ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಬಿ.ವೈ. ವಿಜಯೇಂದ್ರ (ETV Bharat)

ಶ್ರೀಗಳ ಹುಟ್ಟೂರು ವೀರಾಪುರದಲ್ಲಿ ಪುತ್ಥಳಿ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಮುಖ್ಯಮಂತ್ರಿಗಳು ಆದಷ್ಟು ಬೇಗ ಪುತ್ಥಳಿ ನಿರ್ಮಾಣ ಕಾರ್ಯ ಮುಗಿಸುವ ಜೊತೆಗೆ ದಾಸೋಹ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಿ ಎಂದು ಮನವಿ ಮಾಡುವುದಾಗಿ ತಿಳಿಸಿದರು.

ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಗಣ್ಯರು (ETV Bharat)

ಇದಕ್ಕೂ ಮುನ್ನ ಕೇಂದ್ರ ಸಚಿವ ವಿ ಸೋಮಣ್ಣ, ಮೇಘಾಲಯ ರಾಜಪಾಲ ಸಿ ಹೆಚ್​ ವಿಜಯಶಂಕರ್ ಕೂಡ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಇವರೊಂದಿಗೆ ಸುತ್ತೂರು ಮಠದ ಶ್ರೀಗಳು, ಮಾಜಿ ಶಾಸಕ ಸೊಗಡು ಶಿವಣ್ಣ, ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಇತರರು ಹಾಜರಿದ್ದರು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗಳ ಹುಟ್ಟುಹಬ್ಬಕ್ಕೆ ನಿತಿನ್​ ಗಡ್ಕರಿ, ದ್ರೌಪತಿ ಮುರ್ಮು ಬರ್ತಾರೆ : ಕೇಂದ್ರ ಸಚಿವ ವಿ ಸೋಮಣ್ಣ - UNION MINISTER V SOMANNA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.