ಪ್ರಯಾಗ್ರಾಜ್, ಉತ್ತರಪ್ರದೇಶ: ಮಹಾಕುಂಭವೂ ಜಗತ್ತಿನ ವೈವಿಧ್ಯತೆಯ ವಿಶಿಷ್ಟತೆಗಳಲ್ಲಿ ಒಂದು. ಇಲ್ಲಿ ಧರ್ಮ ಮತ್ತು ಆಧ್ಯಾತ್ಮಿಕತೆಯ ಸಂಗಮವನ್ನು ಕಾಣಬಹುದು. ಹಾಗೇ ಐಐಟಿ ಬಾಬಾ, ಹರ್ಷ ರಿಚಾರಿಯಾ, ಜಪೆ ಮಾಲೆ ಮಾರಾಟಗಾರ್ತಿ ಮೊನಾಲಿಸರಂತಹ ವ್ಯಕ್ತಿತ್ವವನ್ನು ಕಾಣಬಹುದಾಗಿದೆ. ಇಷ್ಟು ಮಾತ್ರವಲ್ಲದೇ, ಇಲ್ಲಿ ದೇಶ ಮತ್ತು ಜಗತ್ತಿನೆಲ್ಲೆಡೆ ವಿಶಿಷ್ಟ ಮತ್ತು ವಿಚಿತ್ರ ಬಾಬಾಗಳನ್ನು ಕೂಡ ಕಾಣಬಹುದಾಗಿದೆ.
ಆರು ವರ್ಷಗಳಿಂದ ಒಂದೇ ಕೈ ಎತ್ತಿ ನಿಂತಿರುವ ಹಠ ಯೋಗಿ ಬಾಬಾ, ಕೇವಲ ಹಣ್ಣು ಮತ್ತು ಟೀಯಿಂದ ಜೀವನ ನಡೆಸುವ ಬಾಬಾ ಅಂತಹವರು. ಹಾಗೇ ನಾಗಸಾಧು ಮತ್ತು ಸನ್ಯಾಸಿಯಂತಹ ವಿಚಿತ್ವ ಅದ್ಬುತ ಸಂಪ್ರದಾಯ ಅನುಸರಿಸುವುವವರನ್ನು ಕಾಣಬಹುದು. ಇದೆಲ್ಲದರ ಮಧ್ಯೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದು 7 ಅಡಿ ಎತ್ತರದ ರಷ್ಯಾದ ಬಾಬಾ. ರಷ್ಯಾದಲ್ಲೇ ನೆಲೆಸಿರುವ ಇವರು ಕಳೆದ 30 ವರ್ಷಗಳ ಹಿಂದೆಯೇ ಸನಾತನ ಧರ್ಮ ಸ್ವೀಕರಿಸಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕಟ್ಟುಮಸ್ತಾದ ದೇಹ, ಮುಖದಲ್ಲಿ ಹೊಳೆಯುವ ಕಾಂತಿ ಹೊಂದಿರುವ ಈ ಬಾಬಾ ನೋಡಿದಾಕ್ಷಣ ಒಮ್ಮೆ ಮಹಾಭಾರತದ ಭೀಮ ಕಣ್ಮುಂದೆ ಬಂದು ಹೋದಂತಾಗುತ್ತದೆ. ಮಸ್ಕ್ಯೂಲರ್ ಬಾಬಾ ಎಂದೇ ಜನಪ್ರಿಯವಾಗಿರುವ ಇವರು ಆತ್ಮ ಪ್ರೇಮ ಗಿರಿ ಮಹಾರಾಜ್. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಕೆಲವರು ಇವರಿಗೆ ಭೀಮ ಎಂದು ಕರೆದರೆ, ಮತ್ತೆ ಕೆಲವರು ಪರಶುರಾಮ ಎಂದು ಕರೆಯುತ್ತಿದ್ದಾರೆ.
ಯಾರಿದು ಆತ್ಮ ಪ್ರೇಮ ಗಿರಿ ಮಹಾರಾಜ್: ರಷ್ಯಾ ನಿವಾಸಿಯಾಗಿರುವ ಇವರು 30 ವರ್ಷದಿಂದ ಸನಾತನ ಧರ್ಮದ ಅನುಯಾಯಿಯಾಗಿದ್ದಾರೆ. ನೇಪಾಳಕ್ಕೆ ತೆರಳಿ ಅಲ್ಲಿ ಕೂಡ ಸನಾತನ ಧರ್ಮದ ಕುರಿತು ಪ್ರಚಾರ ಮಾಡಿದ ಇವರು ಅಲ್ಲಿಯೇ ಕೆಲಕಾಲ ವಾಸವಾಗಿದ್ದರು. ಬಳಿಕ ಇದೀಗ ರಷ್ಯಾಗೆ ತೆರಳಿ ಅಲ್ಲಿಯೇ ಶಿಕ್ಷಕರಾಗಿದ್ದಾರೆ.
ಆಧುನಿಕ ಕಾಲದ ಪರಶುರಾಮ: 7 ಅಡಿ ಎತ್ತರವಿರುವ ಈ ಬಾಬಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅನೇಕರು ಇವರನ್ನು ಆಧುನಿಕ ಕಾಲದ ಪರಶುರಾಮ ಎನ್ನುತ್ತಿದ್ದಾರೆ. ಹಿಂದೂ ಪುರಾಣದ ಪ್ರಕಾರ, ವಿಷ್ಣುವಿನ ಆರನೇ ಅವತಾರ ಪರಶುರಾಮ ಆಗಿದ್ದಾರೆ.
ಕಟ್ಟುಮಸ್ತಾದ ದೇಹ: ಸದ್ಯ ಆತ್ಮ ಪ್ರೇಮ ಗಿರಿ ಇನ್ಸ್ಟಾ ಪ್ರೋಫೈಲ್ ವೈರಲ್ ಆಗಿದೆ. ಇವರ ದೇಹ ನೋಡಿದ ಅನೇಕರು ಬೆರಗಾಗಿದ್ದಾರೆ. ಇವರು ಧ್ಯಾನ, ಯೋಗ ಮತ್ತು ವ್ಯಾಯಾಮ ಮಾಡುವುದು ಕಂಡಿದ್ದು, ಆಹಾರ ಮತ್ತು ಪಾನೀಯ ವಿಚಾರದಲ್ಲಿ ಕೂಡ ಇವರು ಹೆಚ್ಚಿನ ಗಮನ ಹೊಂದಿದ್ದಾರೆ.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ : ಕಿನ್ನರ್ ಅಖಾಡ ಶಿಬಿರಕ್ಕೆ ಹೊತ್ತಿಕೊಂಡ ಅಗ್ನಿ
ಇದನ್ನೂ ಓದಿ: ಮಹಾ ಕುಂಭಕ್ಕಾಗಿ 2,000 ಕಿ.ಮೀ ಬೈಕ್ನಲ್ಲಿ ಪ್ರಯಾಣಿಸಲಿರುವ ಬುಲೆಟ್ ರಾಣಿ