ETV Bharat / bharat

ಸೈಫ್ ಮೇಲಿನ ದಾಳಿಕೋರ 7 ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದ, ಬೇರೋಬ್ಬರ ಹೆಸರಲ್ಲಿ ಸಿಮ್ ಕೂಡ ಪಡೆದಿದ್ದ! - ATTACK ON SAIF

ಸೈಫ್ ಅಲಿ ಖಾನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿ 7 ತಿಂಗಳ ಹಿಂದೆಯೇ ಭಾರತಕ್ಕೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಫಕೀರ್
ಫಕೀರ್ (ians)
author img

By PTI

Published : Jan 21, 2025, 1:44 PM IST

ಮುಂಬೈ: ಜನವರಿ 16ರಂದು ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಬಂಧಿತನಾಗಿರುವ ಬಾಂಗ್ಲಾದೇಶದ ಪ್ರಜೆ ಏಳು ತಿಂಗಳ ಹಿಂದೆಯೇ ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದ್ದ ಮತ್ತು ಮುಂಬೈಗೆ ಬರುವ ಮೊದಲು ಪಶ್ಚಿಮ ಬಂಗಾಳ ನಿವಾಸಿಯೊಬ್ಬನ ಆಧಾರ್ ಕಾರ್ಡ್ ಬಳಸಿ ಸಿಮ್ ಪಡೆದುಕೊಂಡಿದ್ದ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬಾಂದ್ರಾದಲ್ಲಿರುವ ಬಾಲಿವುಡ್ ತಾರೆ ಸೈಫ್ ನಿವಾಸದಲ್ಲಿ ಚೂರಿ ಇರಿತ ಘಟನೆಗೆ ಸಂಬಂಧಿಸಿದಂತೆ ನೆರೆಯ ಥಾಣೆ ನಗರದ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿಕೊಂಡ ಫಕೀರ್ ಏಳು ತಿಂಗಳ ಹಿಂದೆ ದವ್ಕಿ ನದಿಯನ್ನು ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾನೆ.

ಭಾರತಕ್ಕೆ ನುಸುಳಿದ ಆರೋಪಿಯು ಪಶ್ಚಿಮ ಬಂಗಾಳದಲ್ಲಿ ಕೆಲ ವಾರಗಳ ಕಾಲ ವಾಸವಿದ್ದ. ನಂತರ ಸ್ಥಳೀಯ ವ್ಯಕ್ತಿಯೊಬ್ಬನ ಆಧಾರ್ ಕಾರ್ಡ್ ಬಳಸಿ ಸಿಮ್ ಪಡೆದುಕೊಂಡು ಉದ್ಯೋಗ ಹುಡುಕಲು ಮುಂಬೈಗೆ ಬಂದಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಬಳಸಿದ ಸಿಮ್ ಕಾರ್ಡ್ ಪಶ್ಚಿಮ ಬಂಗಾಳದ ಖುಕುಮೋನಿ ಜಹಾಂಗೀರ್ ಶೇಖಾ ಎಂಬುವರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದರು. ಫಕೀರ್ ಸ್ವತಃ ತನ್ನ ಹೆಸರಲ್ಲೇ ಆಧಾರ್ ಕಾರ್ಡ್ ಪಡೆಯಲು ಪ್ರಯತ್ನಿಸಿದನಾದರೂ ವಿಫಲನಾಗಿದ್ದ ಎಂದು ಅಧಿಕಾರಿ ಹೇಳಿದರು.

ಮುಂಬೈನಲ್ಲಿ ಆರೋಪಿಯು ಯಾವುದೇ ದಾಖಲೆಗಳನ್ನು ಕೇಳದ ಸ್ಥಳಗಳಲ್ಲಿ ಮಾತ್ರ ಕೆಲಸ ಮಾಡಿದ್ದಾನೆ. ಕಾರ್ಮಿಕ ಗುತ್ತಿಗೆದಾರ ಅಮಿತ್ ಪಾಂಡೆ ಎಂಬಾತ ಈತನಿಗೆ ವರ್ಲಿ ಮತ್ತು ಥಾಣೆಯ ಪಬ್​ಗಳು ಮತ್ತು ಹೋಟೆಲ್​ಗಳಲ್ಲಿ ಹೌಸ್ ಕೀಪಿಂಗ್ ಕೆಲಸ ಕೊಡಿಸಲು ಸಹಾಯ ಮಾಡಿದ್ದ. ಫಕೀರ್​ನ ಸೆಲ್ ಫೋನ್ ಅನ್ನು ಪರಿಶೀಲಿಸಿದಾಗ, ಆತ ಬಾಂಗ್ಲಾದೇಶಕ್ಕೆ ಹಲವಾರು ಬಾರಿ ಕರೆ ಮಾಡಿರುವುದು ಮತ್ತು ಅಲ್ಲಿನ ತನ್ನ ಕುಟುಂಬದವರೊಂದಿಗೆ ಮಾತನಾಡಲು ಅನೇಕ ಮೊಬೈಲ್ ಅಪ್ಲಿಕೇಶನ್​ಗಳನ್ನು ಬಳಸಿರುವುದು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯು ಜನವರಿ 16ರಂದು ನಟ ಸೈಫ್ ಅಲಿ ಖಾನ್ ಅವರ ಅಪಾರ್ಟ್​ಮೆಂಟ್​ಗೆ ನುಗ್ಗಿ ಸೈಫ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡ ಸೈಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಚೇತರಿಕೆಯಾಗಿದೆ. ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿ ಫಕೀರ್​ನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಇದನ್ನೂ ಓದಿ : ಸೈಫ್​ಗೆ ಚಾಕುವಿನಿಂದ ಇರಿದ ಬಳಿಕ ಆರೋಪಿ ಚೆನ್ನಾಗಿ ನಿದ್ರಿಸಿದ್ದ, ಬಟ್ಟೆ ಬದಲಿಸಿ ಪ್ರಯಾಣ ಬೆಳೆಸಿದ್ದ: ಪೊಲೀಸ್ - SAIF ALI KHAN

ETV Bharat Logo

Copyright © 2025 Ushodaya Enterprises Pvt. Ltd., All Rights Reserved.