ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದಿಂದ ಆರನೇ ತಿಂಗಳ ಪೋಸ್ಟ್ ಡೆವೊಲ್ಯೂಷನ್ ರೆವೆನ್ಯೂ ಡೆಫಿಸಿಟ್ (PDRD)ನ ಹಣ ರಿಲೀಸ್ ಮಾಡಿದೆ. ಸೆಪ್ಟೆಂಬರ್ ತಿಂಗಳ ಮೊತ್ತವಾಗಿ ಒಟ್ಟು 9,871 ಕೋಟಿ ರೂ. ಬಿಡುಗಡೆ ಆಗಿದ್ದು, ಕರ್ನಾಟಕಕ್ಕೆ 135.92 ಕೋಟಿ ರೂಪಾಯಿ ಸಿಗಲಿದೆ.
ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರದಿಂದ ಒಟ್ಟು 59,226 ಕೋಟಿ ರೂಪಾಯಿ ಬಿಡುಗಡೆ ಆಗಿದ್ದು, ಈ ಬಾರಿ ಆಂಧ್ರಪ್ರದೇಶ, ಅಸ್ಸೋಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ ಹಾಗೂ ಪಶ್ಚಿಮ ಬಂಗಾಳಕ್ಕೆ ಅನುದಾನ ಸಿಕ್ಕಿದೆ.
ಕೇಂದ್ರ ಸರ್ಕಾರದಿಂದ ಸಿಕ್ಕಿರುವ ಅನುದಾನದಲ್ಲಿ ಇಲ್ಲಿಯವರೆಗೆ ಕೇರಳ ಅತಿ ಹೆಚ್ಚು ಅಂದರೆ 9,945.50 ಕೋಟಿ ರೂ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ 8,628.50 ಕೋಟಿ ರೂ ಪಡೆದುಕೊಂಡಿದೆ. ಆದರೆ ಕರ್ನಾಟಕಕ್ಕೆ ಇಲ್ಲಿಯವರೆಗೆ 815.50 ಕೋಟಿ ರೂ. ಮಾತ್ರ ದೊರೆತಿದೆ. ವಿಶೇಷವೆಂದರೆ, ತೃಣಮೂಲ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಪಶ್ಚಿಮ ಬಂಗಾಳಕ್ಕೆ 8,803.50 ಕೋಟಿ ರೂ. ಅನುದಾನ ನೀಡಲಾಗಿದೆ.
ಭಾರತೀಯ ಸಂವಿಧಾನ ಪರಿಚ್ಛೇಧ 275ರ ಅಡಿಯಲ್ಲಿ ಈ ಅನುದಾನ ಕೇಂದ್ರದಿಂದ ನೀಡಲಾಗುತ್ತಿದ್ದು, ರಾಜ್ಯಗಳ ಆದಾಯದಲ್ಲಿನ ವ್ಯತ್ಯಾಸ ಗಮನದಲ್ಲಿಟ್ಟುಕೊಂಡು ಈ ಅನುದಾನ ಬಿಡುಗಡೆ ಮಾಡಲಾಗಿದೆ. ಇದರ ಬಗ್ಗೆ 15ನೇ ಹಣಕಾಸು ಆಯೋಗ ತೀರ್ಮಾನ ಮಾಡುತ್ತದೆ.
ಇದನ್ನೂ ಓದಿ: ಭಾರತ ಯಾವುದೇ ಸವಾಲು ಎದುರಿಸಲು ಸಮರ್ಥವಾಗಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಾವ ರಾಜ್ಯಕ್ಕೆ ಎಷ್ಟು ಹಣ ಬಿಡುಗಡೆ? ಮಾಹಿತಿ..
ಕ್ರ.ಸಂಖ್ಯೆ | ರಾಜ್ಯಗಳು | ಯಾವ ರಾಜ್ಯಕ್ಕೆ ಎಷ್ಟು? (ಸೆಪ್ಟೆಂಬರ್ ತಿಂಗಳು) | 2021-22ನೇ ಆರ್ಥಿಕ ಹಣಕಾಸು ವರ್ಷದಲ್ಲಿ ಸಿಕ್ಕಿರುವ ಅನುದಾನ |
1 | ಆಂಧ್ರಪ್ರದೇಶ | 1438.08 ಕೋಟಿ ರೂ. | 8628.50 ಕೋಟಿ ರೂ |
2 | ಅಸ್ಸೋಂ | 531.33 | 3188.00 |
3 | ಹರಿಯಾಣ | 11.00 | 66.00 |
4 | ಹಿಮಾಚಲ ಪ್ರದೇಶ | 854.08 | 5124.50 |
5 | ಕರ್ನಾಟಕ | 135.92 | 815.50 |
6 | ಕೇರಳ | 1657.58 | 9945.50 |
7 | ಮಣಿಪುರ | 210.33 | 1262.00 |
8 | ಮೇಘಾಲಯ | 106.58 | 639.50 |
9 | ಮಿಜೋರಾಂ | 149.17 | 895.00 |
10 | ನಾಗಾಲ್ಯಾಂಡ್ | 379.75 | 2278.50 |
11 | ಪಂಜಾಬ್ | 840.08 | 5040.50 |
12 | ರಾಜಸ್ಥಾನ | 823.17 | 4939.00 |
13 | ಸಿಕ್ಕಿಂ | 56.50 | 339.00 |
14 | ತಮಿಳುನಾಡು | 183.67 | 1102.00 |
15 | ತ್ರಿಪುರಾ | 378.83 | 2273.00 |
16 | ಉತ್ತರಾಖಂಡ | 647.67 | 3886.00 |
17 | ಪಶ್ಚಿಮ ಬಂಗಾಳ | 1467.25 ಕೋಟಿ ರೂ. | 8803.50 |
ಒಟ್ಟು | 9,871.00 | 59,226.00 |