ETV Bharat / bharat

ಅತ್ಯಾಚಾರ ಸಂತ್ರಸ್ತೆ , ಆರೋಪಿಯನ್ನ ಹಗ್ಗದಿಂದ ಕಟ್ಟಿ ಮೆರವಣಿಗೆ ಮಾಡಿದ ಗ್ರಾಮಸ್ಥರು - ಆರೋಪಿಯ ಮೆರವಣಿಗೆ

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಹಾಗೂ ಅತ್ಯಾಚಾರ ಎಸಗಿದ ಆರೋಪಿಯನ್ನು ಗ್ರಾಮಸ್ಥರು ಹಗ್ಗದಿಂದ ಕಟ್ಟಿ ಮೆರವಣಿಗೆ ಮಾಡಿದ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

paraded with accused in Madhya Pradesh
ಅತ್ಯಾಚಾರ ಸಂತ್ರಸ್ತೆ
author img

By

Published : Mar 29, 2021, 6:30 AM IST

ಅಲಿರಾಜ್​ಪುರ/ಮಧ್ಯಪ್ರದೇಶ:ಅತ್ಯಾಚಾರಕ್ಕೊಳಗಾದ 16 ವರ್ಷದ ಸಂತ್ರಸ್ತೆ ಹಾಗೂ ಅತ್ಯಾಚಾರವೆಸಗಿದ 23 ವರ್ಷದ ಆರೋಪಿಯನ್ನು ಗ್ರಾಮಸ್ಥರು ಹಗ್ಗದಿಂದ ಕಟ್ಟಿ, ಇಬ್ಬರಿಗೂ ಹೊಡೆಯುತ್ತಾ ಮೆರವಣಿಗೆ ಮಾಡಿರುವ ವಿಚಿತ್ರ ಘಟನೆಯೊಂದು ಅಲಿರಾಜ್​ಪುರದ ಬುಡಕಟ್ಟು ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ಅತ್ಯಾಚಾರ ಸಂತ್ರಸ್ತೆಯನ್ನ ರಕ್ಷಿಸಿದ್ದಾರೆ. ಅತ್ಯಾಚಾರ ಆರೋಪಿ ಹಾಗೂ ಈ ರೀತಿ ಮೆರವಣಿಗೆ ಮಾಡಿದ ಯುವತಿಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿ ,ಎಫ್​ಐಆರ್​ ದಾಖಲಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು SDOP ದಿಲೀಪ್​ ಸಿಂಗ್​ ಬಿಲ್ವಾಲ್​ ತಿಳಿಸಿದ್ದಾರೆ.

ಬಂಧಿತ ಅತ್ಯಾಚಾರ ಆರೋಪಿ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈತನ ವಿರುದ್ಧ POCSO ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಸೇರಿ ಮೂವರಿಗೆ ನೋಟಿಸ್: ಸೋಮವಾರ ಪ್ರತ್ಯಕ್ಷವಾಗ್ತಾಳಾ ಸಿಡಿ ಲೇಡಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.