ETV Bharat / bharat

ನೀಲ್‌ಗಾಯ್‌ಗೆ ವಂದೇ ಭಾರತ್ ರೈಲು ಡಿಕ್ಕಿ; ಪ್ರಾಣಿಯ ಮೃತದೇಹ ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವು - animal

ರಾಜಸ್ಥಾನದಲ್ಲಿ ವಂದೇ ಭಾರತ್​​ ಎಕ್ಸ್​​​​ಪ್ರೆಸ್​​​ ರೈಲು ನೀಲ್​ಗಾಯ್​​ ಪ್ರಾಣಿಗೆ ಡಿಕ್ಕಿ ಹೊಡೆದಿದೆ. ಪ್ರಾಣಿಯ ದೇಹ ವ್ಯಕ್ತಿಯ ಮೇಲೆ ಬಿದ್ದು ಅವರು ಸಾವನ್ನಪ್ಪಿದ್ದಾನೆ.

rajasthan-vannde-bharat-express-train-hits-nilgai-animal-retired-rly-staffer-die-on-spot
ವಂದೇ ಭಾರತ್ ರೈಲಿಗೆ ಡಿಕ್ಕಿ ಹೊಡೆದ ನೀಲ್​ಗಾಯ್, ಸ್ಥಳದಲ್ಲೇ ವ್ಯಕ್ತಿ ಸಾವು
author img

By

Published : Apr 19, 2023, 7:57 PM IST

ಅಲ್ವಾರ್​​​ (ರಾಜಸ್ಥಾನ): ವಂದೇ ಭಾರತ್​​ ಎಕ್ಸ್​​​​ಪ್ರೆಸ್​​​ ರೈಲು ನೀಲ್​ಗಾಯ್​​ (ಬ್ಲೂ ಬಕ್​) ಪ್ರಾಣಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರಾಣಿಯ ಮೃತದೇಹ ಸ್ವಲ್ಪ ದೂರದಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಬಿದ್ದು ಅವರು ಸಾವನ್ನಪ್ಪಿದ್ದಾರೆ. ಈ ಘಟನೆ ರಾಜಸ್ಥಾನದ ದೌಸ್​​​ ರೈಲು ನಿಲ್ದಾಣದ ಬಳಿ ಮಂಗಳವಾರ ನಡೆದಿದೆ. ಮೃತ ವ್ಯಕ್ತಿಯು ನಿವೃತ್ತ ರೈಲ್ವೆ ನೌಕರ ಶಿವದಯಾಳ್​​ ಶರ್ಮಾ ಎಂದು ತಿಳಿದು ಬಂದಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವದೆಹಲಿಯಿಂದ ಹೊರಟು ಅಜ್ಮೀರ್‌ಗೆ ತೆರಳುತ್ತಿತ್ತು. ಈ ಮಧ್ಯದಲ್ಲಿ ಕಾಳಿ ಮೋರಿ ರೈಲ್ವೆ ಲೆವಲ್​​ ಕ್ರಾಸಿಂಗ್​​​ ಬಳಿ ಅತಿ ವೇಗವಾಗಿ ಚಲಿಸುತ್ತಿದ್ದಾಗ ನೀಲ್​ಗಾಯ್​​ ಪ್ರಾಣಿಗೆ ಗುದ್ದಿದೆ. ಘಟನೆ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, "ಮೃತರ ತಲೆಗೆ ಜೋರಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದರು" ಎಂದು ಹೇಳಿದರು.

ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಶಿವದಯಾಳ್ ಶರ್ಮಾ ಅವರ ಮೃತದೇಹವನ್ನು ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಅಪಘಾತದ ಬಗ್ಗೆ ಮೃತರ ಸಂಬಂಧಿಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಶಿವದಯಾಳ್ ರೈಲ್ವೆ ಇಲಾಖೆಯಲ್ಲಿ ಎಲೆಕ್ಟ್ರಿಷಿಯನ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾವಿನ ಬಗ್ಗೆ ಕುಟುಂಬಸ್ಥರಿಂದ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.

ವಂದೇ ಭಾರತ್‌ ರೈಲಿನ ಬಗ್ಗೆ..: ವಂದೇ ಭಾರತ್​​ ಎಕ್ಸ್​​ಪ್ರೆಸ್ ರೈಲು​​​ ವೇಗ, ಸುರಕ್ಷತೆ ಹಾಗೂ ಅತ್ಯುತ್ತಮ ಸೇವೆಗಳಿಂದ ಗಮನ ಸೆಳೆಯುತ್ತಿದೆ. ಚೆನ್ನೈನ ಫ್ಯಾಕ್ಟರಿಯಲ್ಲಿ ಈ ರೈಲುಗಳ ಕೋಚ್‌ಗಳು ತಯಾರಾಗುತ್ತಿವೆ. ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ದೇಶೀಯ ನಿರ್ಮಿತ ವಂದೇ ಭಾರತ್ ರೈಲಿನ 3ನೇ ಆವೃತ್ತಿ ಇದಾಗಿದ್ದು, ಮೊದಲ 2 ರೈಲುಗಳಿಗಿಂತ ವಿನೂತನ ಹಾಗೂ ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ. ಶತಾಬ್ದಿಯಷ್ಟೇ ವೇಗವಾಗಿ ಸಂಚರಿಸುತ್ತದಾದರೂ ಪ್ರಯಾಣದ ಅನುಭವ ವಿಶೇಷವಾಗಿರುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಶೇ.45ರಷ್ಟು ಕಡಿಮೆ ಇರಲಿದೆ.

ರೈಲು ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ಸ್ಲೈಡಿಂಗ್ ಡೋರ್ಸ್, ಪ್ರತ್ಯೇಕ ಲೈಟ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಅಟೆಂಡೆಂಟ್ ಕಾಲ್ ಬಟನ್‌ಗಳು, ಬಯೋ-ಟಾಯ್ಲೆಟ್‌ಗಳು, ಸ್ವಯಂಚಾಲಿತ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು, ಸಿಸಿಟಿವಿ ಕ್ಯಾಮರಾಗಳು, ಒರಗಿಕೊಳ್ಳುವ ಸೌಲಭ್ಯ ಮತ್ತು ಆರಾಮದಾಯಕ ಆಸನಗಳಂತಹ ಸೌಲಭ್ಯಗಳಿವೆ.

ಇದನ್ನೂ ಓದಿ: ಚೀನಾ ಹಿಂದಿಕ್ಕಿದ ಭಾರತ.. ಇದೀಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಇಂಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.