ETV Bharat / bharat

ರಾಜ್ ​ಕುಂದ್ರಾಗೆ ಜೈಲೇ ಗತಿ..14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್​​ ಆದೇಶ - ಬಾಂಬೆ ಹೈಕೋರ್ಟ್ ಸುದ್ದಿ

ಮಾಡೆಲ್‌ಗಳನ್ನು ಬಳಸಿಕೊಂಡು ನೀಲಿ ಚಿತ್ರ ನಿರ್ಮಿಸಿ ಅವುಗಳನ್ನು ಆ್ಯಪ್​ಗಳಿಗೆ ಮಾರಾಟ ಮಾಡುತ್ತಿದ್ದ ಗಂಭೀರ ಪ್ರಕರಣದಲ್ಲಿ ರಾಜ್‌ ಕುಂದ್ರಾ ಸಿಕ್ಕಿ ಹಾಕಿಕೊಂಡಿದ್ದು, ಮುಂಬೈನ ಕಿಲಾ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಆದೇಶ ಹೊರಡಿಸಿದೆ.

raj-kundra
ರಾಜ್‌ ಕುಂದ್ರಾ
author img

By

Published : Jul 27, 2021, 1:38 PM IST

Updated : Jul 27, 2021, 1:54 PM IST

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರ ವಶದಲ್ಲಿರುವ ಉದ್ಯಮಿ ರಾಜ್​ ಕುಂದ್ರಾ ಅವರನ್ನು ಕಿಲಾ ನ್ಯಾಯಾಲಯ​​ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇನ್ನೊಂದೆಡೆ, ಕುಂದ್ರಾನನ್ನು 7 ದಿನ ಕಸ್ಟಡಿಗೆ ನೀಡುವಂತೆ ಕೋರಿದ ಮುಂಬೈ ಪೊಲೀಸರ​ ಮನವಿಯನ್ನು ಕೋರ್ಟ್​​ ತಳ್ಳಿ ಹಾಕಿ, ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಮಾಡೆಲ್‌ಗಳನ್ನು ಬಳಸಿಕೊಂಡು ನೀಲಿ ಚಿತ್ರ ನಿರ್ಮಿಸಿ ಅವುಗಳನ್ನು ಆ್ಯಪ್​ಗಳಿಗೆ ಮಾರಾಟ ಮಾಡುತ್ತಿದ್ದ ಗಂಭೀರ ಪ್ರಕರಣದಲ್ಲಿ ರಾಜ್‌ ಕುಂದ್ರಾ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಆರೋಪಿಯನ್ನು ಇನ್ನೂ ಹೆಚ್ಚಿನ ತನಿಖೆಗೆ ಒಳಪಡಿಸಲಿದ್ದಾರೆ.

ಮುಂಬೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ರಾಜ್ ಕುಂದ್ರಾ ಮತ್ತು ಆತನ ಸಹೋದರ ಬ್ರಿಟನ್​ನಲ್ಲಿ ಕೆನ್ರಿನ್ ಎಂಬ ಹೆಸರಿನ ಕಂಪನಿ ಸ್ಥಾಪಿಸಿದ್ದಾರೆ. ಈ ಕಂಪನಿಗೆ​ ಭಾರತದಲ್ಲಿ ಚಿತ್ರೀಕರಣ ಮಾಡಿದ ನೀಲಿ ಚಿತ್ರಗಳನ್ನು ರವಾನಿಸಲಾಗುತ್ತಿತ್ತಂತೆ. ಕುಂದ್ರಾ ವಿಯಾನ್​ ಇಂಡಸ್ಟ್ರೀಸ್​ ನಡೆಸುತ್ತಿದ್ದು, ವಿ ಟ್ರಾನ್ಸ್​​​ಫರ್​ ಮೂಲಕ ವಿಡಿಯೋಗಳನ್ನು ಸಹೋದರನಿಗೆ ವಿದೇಶಕ್ಕೆ ಕಳುಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

Last Updated : Jul 27, 2021, 1:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.