ETV Bharat / bharat

Punjab Election: ಪಂಜಾಬ್​ ಚುನಾವಣೆಗೆ ಸಿಎಂ ಅಭ್ಯರ್ಥಿ ಘೋಷಿಸಿದ ಕೇಜ್ರಿವಾಲ್​ - ಆಮ್ ಆದ್ಮಿ ಪಕ್ಷದಿಂದ ಪಂಜಾಬ್ ಸಿಎಂ ಅಭ್ಯರ್ಥಿ ಘೋಷಣೆ

ದೆಹಲಿಯಲ್ಲಿ ಮ್ಯಾಜಿಕ್ ಮಾಡಿದ್ದ ಸಿಎಂ ಅರವಿಂದ್​ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್​ನಲ್ಲಿಯೂ ವಿಧಾನಸಭಾ ಚುನಾವಣೆಗೆ ಅದ್ಧೂರಿ ಸಿದ್ಧತೆ ನಡೆಸುತ್ತಿದ್ದು, ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

PUNJAB ELECTION 2022 AAP ANNOUNCE BHAGWANT MANN CM CANDIDATE
Punjab Election: ಪಂಜಾಬ್​ಗೆ ಚುನಾವಣೆಗೆ ಸಿಎಂ ಅಭ್ಯರ್ಥಿ ಘೋಷಿಸಿದ ಆಪ್ ಪಕ್ಷ
author img

By

Published : Jan 18, 2022, 12:44 PM IST

Updated : Jan 18, 2022, 2:51 PM IST

ಮೊಹಾಲಿ(ಪಂಜಾಬ್)​: ಪಂಚ ರಾಜ್ಯ ಚುನಾವಣೆಗೆ ಎಲ್ಲ ರಾಜ್ಯಗಳಲ್ಲೂ ಭರ್ಜರಿ ತಯಾರಿಯನ್ನು ಪಕ್ಷಗಳು ನಡೆಸುತ್ತಿವೆ. ದೆಹಲಿಯಲ್ಲಿ ಮ್ಯಾಜಿಕ್ ಮಾಡಿದ್ದ ಸಿಎಂ ಅರವಿಂದ್​ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್​ನಲ್ಲಿಯೂ ವಿಧಾನಸಭಾ ಚುನಾವಣೆಗೆ ಅದ್ಧೂರಿ ಸಿದ್ಧತೆ ನಡೆಸುತ್ತಿದ್ದು, ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

ಅರವಿಂದ್ ಕೇಜ್ರಿವಾಲ್ ಅವರು ಮೊಹಾಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದು, ಪಂಜಾಬ್ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನಾಗಿ ಸಂಗ್ರೂರ್ ಕ್ಷೇತ್ರದ ಸಂಸದ ಭಗವಂತ್ ಮಾನ್ ಅವರನ್ನು ಘೋಷಿಸಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಕ್ಷವೂ ಇತರ ಪಕ್ಷಗಳೊಂದಿಗೆ ಮುಂಚೂಣಿಯಲ್ಲಿರುವ ಪಕ್ಷವಾಗಿ ಗುರ್ತಿಸಿಕೊಂಡಿದೆ.

ಪಂಜಾಬ್​ ಚುನಾವಣೆಗೆ ಸಿಎಂ ಅಭ್ಯರ್ಥಿ ಘೋಷಿಸಿದ ಆಪ್ ಪಕ್ಷ

ಇತ್ತೀಚೆಗಷ್ಟೇ ಅರವಿಂದ್ ಕೇಜ್ರಿವಾಲ್ ಪಂಜಾಬ್​ನ ಚುನಾವಣೆಗೆ ಆಪ್ ಪಕ್ಷದಿಂದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಪೋನ್ ಸಮೀಕ್ಷೆಯೊಂದನ್ನು ನಡೆಸಿದ್ದರು. ಜನವರಿ 17ರ ಸಂಜೆ 5 ಗಂಟೆಯವರೆಗೆ ವ್ಯಾಟ್ಸಪ್ ಮತ್ತು ಟೆಕ್ಟ್ಸ್​ ಮೆಸೇಜ್​ಗಳ ಮೂಲಕ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಜನರು ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಬಿಜೆಪಿ ನಾಯಕ 'ಕೈ' ಹಿಡಿಯುವ ಸಾಧ್ಯತೆ: ಗೋವಾದಲ್ಲಿ ಟಿಎಂಸಿಯೊಂದಿಗೆ ಮೈತ್ರಿ ಇಲ್ಲ ಎಂದ ದಿನೇಶ್ ಗುಂಡೂರಾವ್

Last Updated : Jan 18, 2022, 2:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.