ETV Bharat / bharat

ನಾಳೆ ನಡೆಯುವ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಶಾಂತಿ ಕಾಪಾಡಿ: ರೈತರಿಗೆ ಪಂಜಾಬ್ ಸಿಎಂ ಕರೆ

ನಾಳೆ ದೆಹಲಿ ರಸ್ತೆಗಳಲ್ಲಿ ರೈತರ ಟ್ರ್ಯಾಕ್ಟರ್​ಗಳ ನೋಟವು ಭಾರತೀಯ ಸಂವಿಧಾನದ ನೀತಿಗಳು ಮತ್ತು ನಮ್ಮ ಗಣರಾಜ್ಯದ ಮೂಲತತ್ವವು ರಾಜಿಯಾಗದ ಸಂಗತಿಯಾಗಿದೆ ಎಂಬುದನ್ನು ಒತ್ತಿಹೇಳುತ್ತದೆ. ರೈತರ ಉಳಿವಿಗಾಗಿ ಕಠಿಣ ಹೋರಾಟ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಎಂದಿರುವ ಪಂಜಾಬ್​ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ನಾಳಿನ ಱಲಿ ವೇಳೆ ಶಾಂತಿ ಕಾಪಾಡಿ ಎಂದು ರೈತರಿಗೆ ಕರೆ ನೀಡಿದ್ದಾರೆ.

Punjab CM appeals to farmers to ensure peace during R-Day tractor rally
ರೈತರಿಗೆ ಪಂಜಾಬ್ ಸಿಎಂ ಕರೆ
author img

By

Published : Jan 25, 2021, 3:51 PM IST

ಚಂಡೀಗಢ: ನಾಳೆ ನಡೆಯುವ ಟ್ರ್ಯಾಕ್ಟರ್ ಮೆರವಣಿಗೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರೈತರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಟ್ರ್ಯಾಕ್ಟರ್ ಪರೇಡ್ ತಪ್ಪಿಸಲು ಪಾಕ್​​ನಿಂದ 300 ಕ್ಕೂ ಹೆಚ್ಚು ಟ್ವಿಟರ್ ಹ್ಯಾಂಡಲ್ ರಚನೆ​​

ಈ ಎಲ್ಲಾ ತಿಂಗಳುಗಳಲ್ಲಿ ಶಾಂತಿ ನಿಮ್ಮ (ರೈತರ) ಪ್ರಜಾಪ್ರಭುತ್ವ ಪ್ರತಿಭಟನೆಯ ವಿಶಿಷ್ಟ ಲಕ್ಷಣವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಗಣ ರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್​ ಮುಂದಿನ ದಿನಗಳಲ್ಲಿ ನಿಮ್ಮ ಆಂದೋಲನಕ್ಕೆ ಅವಿಭಾಜ್ಯವಾಗಿರಬೇಕು ಎಂದು ಕರೆ ನೀಡಿದರು.

ನಾಳೆ ದೆಹಲಿ ರಸ್ತೆಗಳಲ್ಲಿ ರೈತರ ಟ್ರ್ಯಾಕ್ಟರ್​ಗಳ ನೋಟವು ಭಾರತೀಯ ಸಂವಿಧಾನದ ನೀತಿಗಳು ಮತ್ತು ನಮ್ಮ ಗಣರಾಜ್ಯದ ಮೂಲತತ್ವವು ರಾಜಿಯಾಗದ ಸಂಗತಿಯಾಗಿದೆ ಎಂಬುದನ್ನು ಒತ್ತಿಹೇಳುತ್ತದೆ. ರೈತರ ಉಳಿವಿಗಾಗಿ ಕಠಿಣ ಹೋರಾಟ ನೆನಪಿಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಜ.26ಕ್ಕೆ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ಪೊಲೀಸರ ಅನುಮತಿ

ಭಾರತದ ರಾಜಕೀಯವನ್ನು ಸ್ಥಾಪಿಸಿದ ಫೆಡರಲ್ ರಚನೆಯು ಪ್ರಸ್ತುತ ಭಾರತೀಯ ಆಡಳಿತದಲ್ಲಿ ತನ್ನ ಅತಿದೊಡ್ಡ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೃಷಿ ಎಂಬ ರಾಜ್ಯ ವಿಷಯದ ಬಗ್ಗೆ ಶಾಸನ ಮಾಡಲು ಕೇಂದ್ರಕ್ಕೆ ಸಂಪೂರ್ಣ ಅಧಿಕಾರವಿಲ್ಲ. ಕೃಷಿ ಶಾಸನಗಳ ಅನುಷ್ಠಾನವು ನಮ್ಮ ಸಂವಿಧಾನದ ಪ್ರತಿಯೊಂದು ತತ್ವ ಮತ್ತು ಅದು ನಿಂತಿರುವ ಫೆಡರಲ್ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.