ಬಾರ್ವಾನಿ. ಬುಡಕಟ್ಟು ಪ್ರಾಬಲ್ಯವಿರುವ ಈ ಜಿಲ್ಲೆಯಲ್ಲಿ ಇಂದಿಗೂ ಅಲ್ಲಿ ಮಣ್ಣಿನ ರಸ್ತೆಗಳೆ ಹೆಚ್ಚು. ಇದರಿಂದಾಗಿ ಅನಾರೋಗ್ಯ ಪೀಡಿತರನ್ನು ಸಂಬಂಧಿಕರು ಮತ್ತು ಗ್ರಾಮಸ್ಥರು ಹೊತ್ತುಕೊಂಡು ನದಿ ದಾಟಿ ಆಸ್ಪತ್ರೆಗೆ ಕರೆದೊಯ್ಯುವ ಸ್ಥಿತಿಯೇ ಹೆಚ್ಚು. ಇತ್ತೀಚೆಗೆ ಪ್ಯಾನ್‌ಸೆಮಲ್ ವಿಧಾನಸಭಾ ಕ್ಷೇತ್ರದಲ್ಲಿ ಇಂತಹದೊಂದು ಘಟನೆ ನಡೆದಿದೆ.
ಮಳೆಯ ಮಧ್ಯೆ ಗ್ರಾಮಸ್ಥರು ಎಂಟು ಕಿಲೋಮೀಟರ್ ಕಾಲ್ನಡಿಗೆಯ ದಾರಿಯಲ್ಲಿ ತುಂಬ ಗರ್ಭಿಣಿಯನ್ನು ಹೊತ್ತು ಆಂಬ್ಯುಲೆನ್ಸ್ನ ಮೂಲಕ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಬಾರ್ವಾನಿ ಜಿಲ್ಲೆಯ ಖಮ್‌ಗಾಂವ್‌ನಲ್ಲಿ ನಡೆದಿದೆ.
ಖಮ್‌ಗಾಂವ್‌ನಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಈ ಗ್ರಾಮಕ್ಕೆ ಸುಮಾರು ಎಂಟು ಕಿ.ಮೀ ಕಾಲು ದಾರಿಯಿಂದ ನಡೆದುಕೊಂಡು ಬಂದರೆ ಮಾತ್ರವೇ ಅವರಿಗೆ ಹೆದ್ದಾರಿ ಸಿಗುವುದು. ಅಲ್ಲಿಂದ ಅವರಿಗೆ ವಾಹನದ ವ್ಯವಸ್ತೆಯ ಸೌಲಭ್ಯ ದೊರಕುವುದು. ಈಗ ಮಳೆಗಾಲ ಆರಂಭವಾಗಿದ್ದು, ಮಳೆಯ ಮಧ್ಯೆದಲ್ಲಿ ಇಲ್ಲಿನ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಇಂತಹ ಸ್ಥಿತಿಯಲ್ಲಿ ಗರ್ಭಿಣಿಯನ್ನು ಎಂಟು ಕಿ.ಮೀ ಹೊತ್ತುಕೊಂಡು ಹೆದ್ದಾರಿಗೆ ತಂದಿದ್ದಾರೆ. ಬಳಿಕ ಅಲ್ಲಿಂದ ಆ ಗರ್ಭಿಣಿಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರಿಯಾದ ಸಮಯಕ್ಕೆ ಮಹಿಳೆ ಆಸ್ಪತ್ರೆಗೆ ದಾಖಲಾಗಿರುವುದರಿಂದ ಗರ್ಭಿಣಿ ಸುರಕ್ಷಿತವಾಗಿದ್ದಾರೆ. ಇನ್ನು ಪರಿಸ್ಥಿತಿ ರಾತ್ರಿಯಲ್ಲಿ ನಡೆದ್ರೆ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತೆ ಎಂದು ಗ್ರಾಮಸ್ಥರ ಮಾತಾಗಿದೆ.
ಇನ್ನು ರಾಜಕಾರಣಿ, ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ತಿಳಿದು ಬಂದಿದೆ. ಜನ ನಾಯಕರು ಇಲ್ಲಿಂದ ಹಾರಿಸಿ ಬಂದ್ರೂ ಯಾವುದೇ ಉಪಯೋಗವಿಲ್ಲ ಎಂದು ಗ್ರಾಮಸ್ಥರ ಅಳಲಾಗಿದೆ.