ETV Bharat / bharat

Pornography case: ರಾಜ್​ಕುಂದ್ರಾ ಪೊಲೀಸ್ ಕಸ್ಟಡಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು! - ಅಶ್ಲೀಲ ಚಿತ್ರಗಳ ನಿರ್ಮಾಣ

ಉದ್ಯಮಿ ರಾಜ್​ಕುಂದ್ರಾ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

Raj Kundra
Raj Kundra
author img

By

Published : Jul 27, 2021, 9:59 AM IST

ಮುಂಬೈ (ಮಹಾರಾಷ್ಟ್ರ): ಅಶ್ಲೀಲ ಚಿತ್ರ ನಿರ್ಮಾಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾಶೆಟ್ಟಿ ಪತಿ, ಉದ್ಯಮಿ ರಾಜ್​ಕುಂದ್ರಾ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಪ್ರಕರಣ ಸಂಬಂಧ ರಾಜ್​ಕುಂದ್ರಾ ಪೊಲೀಸ್​ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.

ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ಜುಲೈ 19 ರಂದು ಮುಂಬೈ ಪೊಲೀಸರು ರಾಜ್​ಕುಂದ್ರಾ ಸೇರಿ 11 ಜನರನ್ನು ಬಂಧಿಸಿದ್ದರು. ಈ ಮಧ್ಯೆ ರಾಜ್​ ಕುಂದ್ರಾ ಮತ್ತು ಶಿಲ್ಪಾಶೆಟ್ಟಿ ಅವರ ಆರ್ಥಿಕ ಮೂಲ ಮತ್ತು ಅಶ್ಲೀಲ ಚಿತ್ರಗಳ ದಂಧೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲು ಮುಂಬೈ ಕ್ರೈಂ ಬ್ರಾಂಚ್​ ಹಣಕಾಸು ಲೆಕ್ಕ ಪರಿಶೋಧಕರನ್ನು ನೇಮಿಸಿದೆ.

ತನಿಖೆಯಲ್ಲಿ ಶಿಲ್ಪಾಶೆಟ್ಟಿ ಮತ್ತು ರಾಜ್​ಕುಂದ್ರಾ ಅವರ ಜಂಟಿ ಖಾತೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ. ಅಶ್ಲೀಲ ವಿಡಿಯೋ ಅಪ್ಲೋಡ್​​ ಮಾಡುತ್ತಿದ್ದ ಆ್ಯಪ್​ಗಳಿಂದ ಈ ಆದಾಯ ಬಂದಿದೆ ಎಂದು ಅಪರಾಧ ಶಾಖೆ ಶಂಕಿಸಿದೆ.

ಆ್ಯಪ್‌ಗಳಿಂದ ಗಳಿಸಿದ ಹಣವನ್ನು ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಕುಂದ್ರಾ ಅವರ ನಾಲ್ವರು ನೌಕರರು ಆತನ ವಿರುದ್ಧ ಸಾಕ್ಷಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ BJYM ರಾಜ್ಯ ಉಪಾಧ್ಯಕ್ಷ ರಾಜು ಸರ್ಕಾರ್​ ನಿಧನ!

ರಾಜ್​ಕುಂದ್ರಾ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್​​ 420, 34, 292, 293 ರ ಅಡಿ ಹಾಗೂ ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳು ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.