ETV Bharat / bharat

ಕೇಂದ್ರ ಬಜೆಟ್​ 2022: ರೈತರ ಬೆಳೆ ಖರೀದಿಗಾಗಿ ಎಂಎಸ್​ಪಿಗೆ 2.37 ಲಕ್ಷ ಕೋಟಿ ಮೀಸಲು

author img

By

Published : Feb 1, 2022, 11:56 AM IST

Updated : Feb 1, 2022, 3:22 PM IST

ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಮೂಲಕ ದೇಶದಲ್ಲಿಯೇ ತೈಲ ಉತ್ಪಾದನೆ ಮಾಡಲಾಗುವುದು..

ಉತ್ತೇಜನಕ್ಕೆ ನೀತಿ

ನವದೆಹಲಿ : ರೈತರಿಂದ ಎಂಎಸ್​ಪಿ ದರದಲ್ಲಿ ದಾಖಲೆಯ ಖರೀದಿ ಮಾಡಲಾಗುವುದು. ರಾಸಾಯನಿಕ ಮುಕ್ತ ಕೃಷಿಗೆ ಉತ್ತೇಜನ ನೀಡಲಾಗುವುದು. ರೈತರು ತಮಗೆ ಅನುಕೂಲವಾಗುವಂತಹ ಹಣ್ಣು, ತರಕಾರಿ ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್​ ಮಂಡನೆ ವೇಳೆ​ ತಿಳಿಸಿದ್ದಾರೆ.

ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಮೂಲಕ ದೇಶದಲ್ಲಿಯೇ ತೈಲ ಉತ್ಪಾದನೆ ಮಾಡಲಾಗುವುದು.

ಹಣ್ಣು ಮತ್ತು ತರಕಾರಿ ಉತ್ಪಾದನೆ ಉತ್ತೇಜನಕ್ಕೆ ನೀತಿ ರೂಪಿಸಲಾಗುವುದು. ಖಾದ್ಯ ತೈಲಗಳ ಬೆಲೆ ಏರಿಕೆ ನಡುವೆ ಎಣ್ಣೆ ಬೀಜಗಳ ಉತ್ಪಾದನೆಯನ್ನು ಉತ್ತೇಜಿಸಲಾಗುವುದು. ಗೋಧಿ, ರಾಗಿ ಬೆಳೆಗಳ ಖರೀದಿಯನ್ನೂ ಸರ್ಕಾರ ಹೆಚ್ಚಿಸಲಿದೆ ಎಂದು ಕೇಂದ್ರ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ.

ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು. ಆ ಮೂಲಕ ತೈಲ ಆಮದು ಕಡಿತಗೊಳಿಸಿ, ಭಾರತದಲ್ಲಿಯೇ ತೈಲ ತಯಾರಿಕೆಗೆ ಒತ್ತು ನೀಡಲಾಗುವುದು. ಕೃಷಿ ವಿಶ್ವವಿದ್ಯಾಲಯದಲ್ಲಿ ಆಧುನಿಕ ಕೃಷಿ, ಆರ್ಗಾನಿಕ್ ಕೃಷಿಗೆ ಒತ್ತು ನೀಡುವ ಪಠ್ಯ ಹಾಗೂ ಸಂಶೋಧನೆಗೆ ಅತ್ಯಗತ್ಯ ನೆರವು ನೀಡಲಾಗುವುದು ಎಂದು ಬಜೆಟ್​ನಲ್ಲಿ ತಿಳಿಸಲಾಗಿದೆ.

ನಬಾರ್ಡ್ ಮೂಲಕ ಕೃಷಿಗೆ ಸಂಬಂಧಿಸಿದ ಸ್ಟಾರ್ಟಪ್‌ಗಳಿಗೆ ಸಹಾಯ

ನಬಾರ್ಡ್ ಮೂಲಕ ಕೃಷಿ ಕ್ಷೇತ್ರದ ಗ್ರಾಮೀಣ ಮತ್ತು ಕೃಷಿ ಸ್ಟಾರ್ಟಪ್‌ಗಳಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಸ್ಟಾರ್ಟಪ್‌ಗಳು ಎಫ್‌ಪಿಒಗಳನ್ನು ಬೆಂಬಲಿಸುತ್ತವೆ. ರೈತರಿಗೆ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುತ್ತವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದರು.

ಕೃಷಿಯಲ್ಲಿ ಡ್ರೋನ್ ಬಳಕೆ

ರೈತರು ಡ್ರೋನ್‌ಗಳ ಬಳಕೆಗೆ ಅವಕಾಶ ನೀಡಲಾಗುವುದು. ಡ್ರೋನ್​ಗಳಿಂದ ಬೆಳೆಗಳ ಮೌಲ್ಯಮಾಪನ, ಭೂ ದಾಖಲೆ, ಕ್ರಿಮಿನಾಶಕ ಸಿಂಪಡಣೆ ಕಾರ್ಯವನ್ನೂ ಈ ಮೂಲಕ ನಡೆಸಬಹುದಾಗಿದೆ.

ಎಂಎಸ್​ಪಿಗೆ 2.37 ಲಕ್ಷ ಕೋಟಿ ಮೀಸಲು

2.37 ಲಕ್ಷ ಕೋಟಿ ರುಪಾಯಿ ರೈತರ ಬೆಳೆಗಳನ್ನು ಖರೀದಿ ಮಾಡಲು ಮೀಸಲಿಡಲಾಗುವುದು. ಇದು ಏಪ್ರಿಲ್​ 2022 ರಿಂದ ಮಾರ್ಚ್​ 2023 ರವರೆಗೆ ಜಾರಿಯಲ್ಲಿರುತ್ತದೆ.

ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ರಫ್ತಿಗೆ ಒತ್ತು ನೀಡುವ ಮೂಲಕ ರಾಗಿ ಉತ್ಪಾದನೆಯನ್ನು ಉತ್ತೇಜಿಸಲು ಎಣ್ಣೆಬೀಜ ಕೃಷಿಯನ್ನು ಉತ್ತೇಜಿಸುವ ಯೋಜನೆಯನ್ನು ಅವರು ಘೋಷಿಸಿದರು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲು ಭೂ ದಾಖಲೆಗಳ ಡಿಜಿಟಲೀಕರಣವನ್ನು ತ್ವರಿತಗೊಳಿಸಲಾಗುವುದು.

2021-22 ನೇ ಸಾಲಿನಲ್ಲಿ 163 ಲಕ್ಷ ರೈತರಿಂದ 1208 ಲಕ್ಷ ಮೆಟ್ರಿಕ್ ಟನ್​ ಗೋಧಿ, ಭತ್ತವನ್ನು ಖರೀದಿಸಲಾಗುವುದು. ಇದಕ್ಕಾಗಿ 2.37 ಲಕ್ಷ ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ.

  • ಮೊದಲ ಹಂತದಲ್ಲಿ ಗಂಗಾ ನದಿಯ ಉದ್ದಕ್ಕೂ ರೈತ ಜಮೀನಿನಲ್ಲಿ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲಾಗುವುದು.
  • 2023 ಅನ್ನು ಅಂತಾರಾಷ್ಟ್ರೀಯ 'ರಾಗಿ ವರ್ಷ' ಎಂದು ಘೋಷಿಸಲಾಗಿದೆ. ರಾಗಿಯ ಮೌಲ್ಯವರ್ಧನೆ, ದೇಶೀಯ ಬಳಕೆಯನ್ನು ಹೆಚ್ಚಿಸುವುದು ಮತ್ತು ರಾಗಿ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ಬ್ರ್ಯಾಂಡಿಂಗ್ ಮಾಡಲಾಗುವುದು.
  • ಎಣ್ಣೆಬೀಜಗಳ ಆಮದನ್ನು ಕಡಿತಗೊಳಿಸಲು ದೇಶೀಯವಾಗಿ ತೈಲಬೀಜಗಳ ಉತ್ಪಾದನೆಯನ್ನು ಹೆಚ್ಚಿಸಲು ಸಮಗ್ರ ಯೋಜನೆ ಜಾರಿಗೆ ಚಿಂತನೆ.
  • ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳ ಸಿಂಪಡಣೆಗಾಗಿ ಕೃಷಿಯಲ್ಲಿ ‘ಕಿಸಾನ್ ಡ್ರೋನ್’ಗಳ ಬಳಕೆ.
  • ನೈಸರ್ಗಿಕ ಮತ್ತು ಸಾವಯವ ಕೃಷಿ, ಆಧುನಿಕ ಕೃಷಿ, ಮೌಲ್ಯವರ್ಧನೆ ಮತ್ತು ನಿರ್ವಹಣೆಯ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಈ ವಿಷಯಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತದೆ.
  • ನದಿ ಜೋಡಣೆ: 44,605 ​​ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೆನ್-ಬೆಟ್ವಾ ಲಿಂಕ್ ಯೋಜನೆಯ ಅನುಷ್ಠಾನ. ಇದು 9.08 ಲಕ್ಷ ಹೆಕ್ಟೇರ್ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ, 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆ, 103 ಮೆಗಾವ್ಯಾಟ್ ಹೈಡ್ರೋ ಮತ್ತು 27 ಮೆಗಾವ್ಯಾಟ್ ಸೌರಶಕ್ತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.