ETV Bharat / bharat

ರಾಜಸ್ಥಾನ: 6 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ- ಅಪರಾಧಿಗೆ ಗಲ್ಲುಶಿಕ್ಷೆ

ಇಲ್ಲಿನ ಪೋಕ್ಸೊ ನ್ಯಾಯಾಲಯ Iರ ನ್ಯಾಯಾಧೀಶ ವರ್ಮಾ ಅವರು ಮಧ್ಯಪ್ರದೇಶದ ನಿವಾಸಿ ಲಾಲಚಂದ್ ಬೈರಾಗಿ ಎಂಬಾತನಿಗೆ ಮರಣದಂಡನೆ ಶಿಕ್ಷೆ ವಿಧಿಸಿ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

author img

By

Published : Mar 7, 2022, 8:10 PM IST

ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದ ಆರೋಪಿಗೆ ಮರಣದಂಡನೆ

ಜಲವಾರ್(ರಾಜಸ್ಥಾನ): ಜಿಲ್ಲೆಯ ಹಳ್ಳಿಯೊಂದರಲ್ಲಿ ಆರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರು ಮರಣದಂಡನೆ ವಿಧಿಸಿದ್ದಾರೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಮಹೇತಾರ್ ಗುರ್ಜಾರ್ ಈ ಸಂಬಂಧ ಮಾತನಾಡಿ, ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಲಾಲಚಂದ್ ಬೈರಾಗಿ ಎಂಬಾತ ಆರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರವೆಸಗಿ ನಂತರ ಶವವನ್ನು ಚೀಲದಲ್ಲಿ ತುಂಬಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ. ಈ ಸಂಬಂಧ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ವಿವರಿಸಿದರು.

ಇದನ್ನೂ ಓದಿ: ಜಾತಿ ನಿಂದನೆ ಪ್ರಕರಣ: ವಕೀಲ ಜಗದೀಶ್‌ಗೆ ಜಾಮೀನು ಮಂಜೂರು

ಮಾರ್ಚ್ 11 ರಂದು 6 ವರ್ಷದ ಅಪ್ರಾಪ್ತ ಮಗಳು ಮನೆಗೆ ಬಂದಿಲ್ಲ ಎಂದು ದೂರುದಾರರು 2020 ರ ಮಾರ್ಚ್ 12 ರಂದು ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಾಲಕಿ ಲಾಲಚಂದ್ ವಾಸಿಸುವ ಬಾಡಿಗೆ ಮನೆ ಕಡೆ ಹೋಗುತ್ತಿದ್ದಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಆ ವೇಳೆ ಮನೆಗೆ ಬೀಗ ಹಾಕಲಾಗಿದ್ದು, ಮನೆಯ ಬೀಗ ಒಡೆದು ನೋಡಿದಾಗ ಅಡುಗೆ ಕೋಣೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.

ಅಪರಾಧಿ ಸಮಾಜದ ಮುಖ್ಯವಾಹಿನಿಗೆ ಸೇರಲು ಯೋಗ್ಯನಲ್ಲ. ಲಾಲ್‌ಚಂದ್‌ಗೆ ಮರಣದಂಡನೆಗಿಂತ ಕಡಿಮೆ ಶಿಕ್ಷೆಯನ್ನು ನೀಡಿದರೆ, ಅದು ನ್ಯಾಯದ ಉದ್ದೇಶವನ್ನು ನಾಶಪಡಿಸುವುದಲ್ಲದೆ, ಸಮಾಜದಲ್ಲಿ ಇಂತಹ ಕ್ರೌರ್ಯದ ವರ್ತನೆಗಳು ಮತ್ತು ಅಪರಾಧ ಕೃತ್ಯಗಳನ್ನು ಎಸಗುವ ಅಪರಾಧಿಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.