ETV Bharat / bharat

ಬಸವೇಶ್ವರರ ಚಿಂತನೆಗಳು ಮಾನವೀಯತೆಯ ಸೇವೆಗೆ ಸ್ಫೂರ್ತಿ: ಕನ್ನಡದಲ್ಲಿ ಟ್ವೀಟ್​ ಮಾಡಿದ ಪ್ರಧಾನಿ ಮೋದಿ

ಇಂದು ಬಸವ ಜಯಂತಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್​ ದಾರ್ಶನಿಕನಿಗೆ ನಮನ ಸಲ್ಲಿಸಿದ್ದಾರೆ.

ಕನ್ನಡದಲ್ಲಿ ಟ್ವೀಟ್​ ಮಾಡಿದ ಪ್ರಧಾನಿ ಮೋದಿ
ಕನ್ನಡದಲ್ಲಿ ಟ್ವೀಟ್​ ಮಾಡಿದ ಪ್ರಧಾನಿ ಮೋದಿ
author img

By

Published : Apr 23, 2023, 11:22 AM IST

ನವದೆಹಲಿ: ಜಾತಿ ವಿಷಬೀಜವನ್ನು ನಾಶ ಮಾಡಲು 12ನೇ ಶತಮಾನದಲ್ಲೇ ಕ್ರಾಂತಿ ಮಾಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಇಂದು. ವಿಶ್ವ ಮಾನವತಾವಾದಿಯ ಜಯಂತಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಟ್ವೀಟ್​ ಮಾಡಿ, ಅವರ ಸಂದೇಶಗಳನ್ನು ಸಾರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ಇಂದು ನಾಡಿನೆಲ್ಲೆಡೆ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ಕವಿ ಮತ್ತು ಸಮಾಜ ಸುಧಾರಕ ಬಸವೇಶ್ವರರ ಚಿಂತನೆಗಳು ಮತ್ತು ಆದರ್ಶಗಳು ಮಾನವೀಯತೆಯ ಸೇವೆಗೆ ಸ್ಫೂರ್ತಿ ನೀಡುತ್ತವೆ ಎಂದು ಮೋದಿ ಬಣ್ಣಿಸಿದ್ದಾರೆ.

ಬಸವ ಜಯಂತಿಯ ಇಂದಿನ ಪವಿತ್ರ ದಿನದಂದು ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ವಂದಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಮತ್ತು ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.

  • ಬಸವ ಜಯಂತಿಯ ಇಂದಿನ ಈ ಪವಿತ್ರ ಸಂದರ್ಭದಲ್ಲಿ, ನಾನು ಜಗದ್ಗುರು ಬಸವೇಶ್ವರರಿಗೆ ಶಿರಸಾ ನಮಿಸುತ್ತೇನೆ. ಅವರ ಆಲೋಚನೆಗಳು ಮತ್ತು ಚಿಂತನೆಗಳು ಮನುಕುಲಕ್ಕೆ ಸೇವೆ ಮಾಡಲು ಪ್ರೇರಣೆ ನೀಡುತ್ತವೆ. ದಮನಿತರನ್ನು ಸಬಲಗೊಳಿಸಲು ಒತ್ತು ನೀಡುತ್ತಾ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಿದ್ದಾರೆ. pic.twitter.com/rgqoyql5qg

    — Narendra Modi (@narendramodi) April 23, 2023 " class="align-text-top noRightClick twitterSection" data=" ">

ಇಂಗ್ಲೆಂಡ್​ನಲ್ಲಿ 2015 ರಲ್ಲಿ ಬಸವೇಶ್ವರ ಪುತ್ಥಳಿಯನ್ನು ಪ್ರಧಾನಿ ಮೋದಿ ಅವರು ಅನಾವರಣ ಮಾಡಿದ್ದರು. ಈ ವಿಡಿಯೋವನ್ನು ಬಿಜೆಪಿ ನಾಯಕ ಶಿವಕುಮಾರ್​ ಉದಾಸಿ ಅವರು ಹಂಚಿಕೊಂಡಿದ್ದರು. ಇದನ್ನು ಮರು ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಜಗದ್ಗುರು ಬಸವೇಶ್ವರರು ತೋರಿದ ಮಾರ್ಗದಲ್ಲಿ ನಾವು ಸದಾ ಸಾಗುತ್ತೇವೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಲವು ಅವಕಾಶಗಳು ಸಿಕ್ಕಿರುವುದು ನನಗೆ ಗೌರವ ತಂದಿದೆ ಎಂದಿದ್ದಾರೆ.

ಇಂಗ್ಲೆಂಡ್​ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಥೇಮ್ಸ್ ನದಿಯ ದಡದ ಮೇಲೆ ನಿರ್ಮಾಣ ಮಾಡಲಾಗಿದ್ದ ಜಗದ್ಗುರು ಬಸವೇಶ್ವರರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ವೇಳೆ ಅಂದಿನ ಬ್ರಿಟನ್​ ಪ್ರಧಾನಿಯಾಗಿದ್ದ ಡೇವಿಡ್​ ಕ್ಯಾಮರೂನ್​ ಕೂಡ ಇದ್ದರು.

  • ಜಗದ್ಗುರು ಬಸವೇಶ್ವರರು ತೋರಿಸಿಕೊಟ್ಟ ಹಾದಿಯನ್ನು ನಾವು ಸದಾ ಪಾಲಿಸುತ್ತೇವೆ. ಅವರಿಗೆ ಗೌರವ ಸಲ್ಲಿಸಲು ಅನೇಕ ಅವಕಾಶಗಳು ಒದಗಿರುವುದು ನನ್ನ ಸೌಭಾಗ್ಯ. https://t.co/mTT5P8ZvUa

ಜಗಜ್ಯೋತಿ ಬಸವೇಶ್ವರರು ಲಿಂಗ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್​ ದಾರ್ಶನಿಕರು. ಲಿಂಗಾಯತ ಧರ್ಮದ ಉದಯಕ್ಕೆ ಪ್ರೇರಕ ಶಕ್ತಿಯಾಗಿದ್ದ ಬಸವಣ್ಣನವರು, ಸಂಕೀರ್ಣವಾದ ಜಾತಿ ನಾಶಕ್ಕಾಗಿ ಶ್ರಮಿಸಿದ್ದರು.

ಓದಿ: ಸರಳವಾಗಿ ನೆರವೇರಿದ ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿ ಪಟ್ಟಾಭಿಷೇಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.