ETV Bharat / bharat

ಪ್ರಧಾನಿ ಮೋದಿ ತಂಗಲಿರುವ ಗೆಸ್ಟ್​​ಹೌಸ್​​​​​ ಕೊಠಡಿಗೆ ಹೊಸ ರೂಪ.. ಇಲ್ಲಿ ಏನೇನಿದೆ ಗೊತ್ತೇ? - ವಿಶ್ವನಾಥ್ ಕಾರಿಡಾರ್​ ಯೋಜನೆ

ವಿಶ್ವನಾಥ ಕಾರಿಡಾರ್​ ಯೋಜನೆ ಲೋಕಾರ್ಪಣೆಗೆ ವಾರಾಣಸಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಅವರು ಉಳಿದುಕೊಳ್ಳುತ್ತಿರುವ ಅತಿಥಿ ಗೃಹ ಸಹ ಹೊಸದರಂತೆ ಕಂಗೊಳಿಸುತ್ತಿದೆ.

pm-modis-usual-stay-in-varanas
ಪ್ರಧಾನಿ ಮೋದಿ ಉಳಿದುಕೊಳ್ಳುತ್ತಿರುವ ಬನಾರಸ್​ ಗೆಸ್ಟ್​​ಹೌಸ್
author img

By

Published : Dec 6, 2021, 5:31 PM IST

ವಾರಾಣಸಿ (ಉ.ಪ್ರ): ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಕನಸಿನ ಯೋಜನೆಯಾದ ‘ವಿಶ್ವನಾಥ ಕಾರಿಡಾರ್’​ ಯೋಜನೆಯು ಡಿ.13ರಂದು ಲೋಕಾರ್ಪಣಗೊಳ್ಳುತ್ತಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಹ ಭಾಗಿಯಾಗಲಿದ್ದಾರೆ. ಜತೆಗೆ ಎರಡು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಪ್ರಧಾನಿ ಮೋದಿ ತಂಗಲಿರುವ ಬನಾರಸ್​ ಗೆಸ್ಟ್​​ಹೌಸ್​​​​​ ಕೋಠಡಿ

ಪ್ರಧಾನಿ ಮೋದಿ ವಾಸ್ತವ್ಯ ಹಿನ್ನೆಲೆ ಅವರ ಅತಿಥಿ ಗೃಹವು ವಿಶೇಷವಾಗಿ ತಯರಾಗುತ್ತಿದೆ. ಬನಾರಸ್​ನಲ್ಲಿರುವ ಲೋಕೋಮೋಟಿವ್ ವರ್ಕ್​ಶಾಪ್​​​​ನ ಅತಿಥಿ ಗೃಹದಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ. ಈ ಹಿಂದೆ ಭೇಟಿ ನೀಡಿದಾಗಲೂ ಸಹ ಅವರು ಇದೇ ಕೊಠಡಿಯಲ್ಲಿ ಉಳಿದಿದ್ದರು. ಆದರೆ, ಈ ಬಾರಿ ವಿಶೇಷವಾಗಿ ಸಿದ್ಧಗೊಳ್ಳುತ್ತಿದೆ.

ಈ ಅತಿಥಿ ಗೃಹದ ಒಂದು ಕೊಠಡಿಯನ್ನು ಪ್ರಧಾನಿಯವರಿಗಾಗಿಯೇ ಮೀಸಲಿಡಲಾಗಿದೆಯಂತೆ. ಹಾಗಾಗಿ ಈ ಕೊಠಡಿಗೆ ಯಾವುದೇ ನಂಬರ್​ ಅನ್ನು ನೀಡಿಲ್ಲ. ಜೊತೆಗೆ ಬೇರೆ ಯಾರಿಗೂ ಈ ಕೊಠಡಿಯನ್ನ ವಾಸ್ತವ್ಯಕ್ಕಾಗಿ ನೀಡುತ್ತಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

3 ಕೊಠಡಿಗಳು, 2 ಸ್ನಾನಗೃಹ, ಲಾಬಿ ಮತ್ತು ಊಟದ ಸ್ಥಳ ಹೊಂದಿರುವ ವಿಶಾಲವಾದ ಕೊಠಡಿ ಇದಾಗಿದೆ. ಅವರು ವಾರಾಣಸಿಯಲ್ಲಿ ತಂಗಿರುವಾಗ ಈ ಕೊಠಡಿ ಪ್ರಧಾನ ಮಂತ್ರಿ ಕಚೇರಿಯಂತೆ ಕಾರ್ಯನಿರ್ವಹಿಸುತ್ತದೆ.

ಇಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿ ಮೋದಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕರೊಂದಿಗೆ ಸಭೆ ನಿಗದಿಪಡಿಸಿದ್ದಾರೆ. ಇದರ ಜೊತೆಗೆ ಅತಿಥಿ ಗೃಹದ ಒಳಾಂಗಣದಲ್ಲಿರುವ ಉದ್ಯಾನ ಪ್ರದೇಶದಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮವೊಂದರಲ್ಲಿಯೂ ಅವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಮೋದಿ, ನಟಿ ಪ್ರಿಯಾಂಕಾ, ಸೋನಿಯಾ, ಅಮಿತ್​ ಶಾ ಕೋವಿಡ್​​ ವ್ಯಾಕ್ಸಿನ್​ ಪಡೆದಿದ್ದು ಈ ಕೇಂದ್ರದಲ್ಲೇ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.