ETV Bharat / bharat

"ಚಂದ್ರಯಾನ 3 ರಾಷ್ಟ್ರದ ಭರವಸೆ, ಕನಸುಗಳನ್ನು ಹೊತ್ತೊಯ್ಯಲಿದೆ": ಉಡಾವಣೆಗೂ ಮುನ್ನ ವಿಜ್ಞಾನಿಗಳಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ - ಪ್ರಧಾನಿ ಮೋದಿ

ಭಾರತದ ಚಂದ್ರಯಾನದ ಇತಿಹಾಸ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ ಅವರು ಚಂದ್ರಯಾನ 3ರ ಹಿಂದಿರುವ ವಿಜ್ಞಾನಿಗಳಿಗೆ ಫ್ರಾನ್ಸ್​ನಿಂದಲೇ ಶುಭಾಶಯಗಳನ್ನು ತಿಳಿಸಿದ್ದಾರೆ.

pm modi wished scientists
ಉಡಾವಣೆಗೂ ಮುನ್ನ ವಿಜ್ಞಾನಿಗಳಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ
author img

By

Published : Jul 14, 2023, 2:01 PM IST

ನವದೆಹಲಿ: ಕೋಟ್ಯಾಂತರ ಕಂಗಳು ಎದುರು ನೋಡುತ್ತಿರುವ ಚಂದ್ರಯಾನ 3 ಉಡಾವಣೆಗೆ ಇನ್ನೇನು ಕೆಲವೇ ಕ್ಷಣಗಳಿರುವಾಗ ಪ್ರಧಾನಿ ಮೋದಿ ಅವರು ಯೋಜನೆಯ ಹಿಂದಿರುವ ಎಲ್ಲಾ ಭಾರತದ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ. ಎರಡು ದಿನಗಳ ಫ್ರಾನ್ಸ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ''ಈ ಚಂದ್ರಯಾನ 3 ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯಲಿದೆ" ಎಂದು ಬಣ್ಣಿಸಿದ್ದಾರೆ.

'ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2023 ಜುಲೈ 14 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುತ್ತದೆ. ನಮ್ಮ ಚಂದ್ರಯಾನ-3 ತನ್ನ ಪ್ರಯಾಣವನ್ನು ಪ್ರಾರಂಭಿಲಿದೆ. ಕಕ್ಷೆ ಏರಿಸುವ ತಾಂತ್ರಿಕ ಕೆಲಸಗಳ ನಂತರ ಚಂದ್ರಯಾನ-3 ಅನ್ನು ಚಂದ್ರನ ವರ್ಗಾವಣೆ ಪಥಕ್ಕೆ ಸೇರಿಸಲಾಗುವುದು' ಎಂದು ಹೇಳಿದ್ದಾರೆ.

'ಇಂದು ಮಧ್ಯಾಹ್ನ 2.35ಕ್ಕೆ ಉಡಾವಣೆಯಾಗಲಿರುವ ಚಂದ್ರಯಾನ 3 300,000 ಕಿ.ಮೀ.ಗೂ ಹೆಚ್ಚು ದೂರವನ್ನು ಬಾಹ್ಯಾಕಾಶದಲ್ಲಿ ಕ್ರಮಿಸಲಿರುವ ಕಾರಣ ಕೆಲವು ವಾರಗಳ ನಂತ ಚಂದ್ರನನ್ನು ತಲುಪಲಿದೆ. ಆನ್‌ಬೋರ್ಡ್‌ನಲ್ಲಿರುವ ವೈಜ್ಞಾನಿಕ ಉಪಕರಣಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲಿವೆ. ಈ ಅಧ್ಯಯನ ನಮ್ಮ ಚಂದ್ರನ ಬಗೆಗಿನ ಜ್ಞಾನವನ್ನು ಹೆಚ್ಚಿಸಲಿದೆ' ಎಂದು ಅವರು ಹೇಳಿದರು.

  • 14th July 2023 will always be etched in golden letters as far as India’s space sector is concerned. Chandrayaan-3, our third lunar mission, will embark on its journey. This remarkable mission will carry the hopes and dreams of our nation. pic.twitter.com/EYTcDphaES

    — Narendra Modi (@narendramodi) July 14, 2023 " class="align-text-top noRightClick twitterSection" data=" ">

'ಭಾರತದ ದೇಶದ ಕನಸನ್ನು, ತಮ್ಮ ಕನಸಂತೆ ಭಾವಿಸಿ, ಚಂದ್ರಯಾನ 3 ರ ಉಡಾವಣೆಗೆ ಕೆಲಸ ಮಾಡಿರುವ ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಚಂದ್ರಯಾನ-1 ಅನ್ನು ಜಾಗತಿಕ ಚಂದ್ರನ ಕಾರ್ಯಾಚರಣೆಗಳಲ್ಲಿ ಪಾಥ್ ಬ್ರೇಕರ್ ಎಂದು ಪರಿಗಣಿಸಲಾಗಿದೆ. ಏಕೆಂದರೆ ಚಂದ್ರಯಾನ 1 ಚಂದ್ರನ ಮೇಲೆ ನೀರಿನ ಅಣುಗಳ ಉಪಸ್ಥಿತಿಯನ್ನು ದೃಢಪಡಿಸಿತ್ತು. ಈ ಮಾಹಿತಿ ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿತ್ತು' ಎಂದು ಮೋದಿ ಹೇಳಿದರು.

ಭಾರತದ ಚಂದ್ರಯಾನದ ಇತಿಹಾಸದ ವಿವರಗಳನ್ನು ನೀಡಿದ ಪ್ರಧಾನಮಂತ್ರಿ, 'ಚಂದ್ರಯಾನ-2 ಕೂಡ ಪಾತ್​​ ಬ್ರೇಕಿಂಗ್​ಗೆ ಸಮಾನ, ಏಕೆಂದರೆ ಅದಕ್ಕೆ ಹೊಂದಿಸಿದ್ದ ಆರ್ಬಿಟರ್‌ ದತ್ತಾಂಶವು ರಿಮೋಟ್ ಸೆನ್ಸಿಂಗ್ ಮೂಲಕ ಮೊದಲ ಬಾರಿಗೆ ಕ್ರೋಮಿಯಂ, ಮ್ಯಾಂಗನೀಸ್ ಮತ್ತು ಸೋಡಿಯಂ ಇರುವಿಕೆಯನ್ನು ಪತ್ತೆ ಮಾಡಿತ್ತು. ಮತ್ತು ಇದು ಚಂದ್ರನ ಮ್ಯಾಗ್ಮ್ಯಾಟಿಕ್ ವಿಕಾಸದ ಬಗ್ಗೆ ಹೆಚ್ಚಿನ ಒಳನೋಟಗಳನ್ನು ಒದಗಿಸುತ್ತದೆ.' ಎಂದು ವಿವರಿಸಿದ್ದಾರೆ.

'ಚಂದ್ರಯಾನ 2 ರ ಪ್ರಮುಖ ವೈಜ್ಞಾನಿಕ ಫಲಿತಾಂಶಗಳೆಂದರೆ ಚಂದ್ರನ ಸೋಡಿಯಂಗಾಗಿ ಮೊಟ್ಟಮೊದಲ ಜಾಗತಿಕ ನಕ್ಷೆ, ಕುಳಿ ಗಾತ್ರ ವಿತರಣೆಯ ಜ್ಞಾನವನ್ನು ಹೆಚ್ಚಿಸುವುದು, IIRS ಉಪಕರಣದಿಂದ ಚಂದ್ರನ ಮೇಲ್ಮೈಯ ನೀರಿನ ಮಂಜುಗಡ್ಡೆಯನ್ನು ಪತ್ತೆ ಹಚ್ಚುವಿಕೆ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿವೆ. ಚಂದ್ರಯಾನ 2 ರಲ್ಲಿ ಕಂಡುಕೊಂಡ ಈ ಮಾಹಿತಿ ಸುಮಾರು 50 ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದೆ' ಎಂದು ಅವರು ಹೇಳಿದರು.

'ಚಂದ್ರಯಾನ 1 ಆಗುವವರೆಗೆ ಚಂದ್ರನ ಮೇಲ್ಮೈ ಒಣಜಾಗ, ಭೌಗೋಳಿಕವಾಗಿ ನಿಷ್ಕ್ರಿಯ ಮತ್ತು ವಾಸಯೋಗ್ಯವಲ್ಲದ ಆಕಾಶಕಾಯ ಎಂದು ನಂಬಲಾಗಿತ್ತು. ಆದರೆ ಈಗ ಚಂದ್ರನ ಮೇಲ್ಮೈಯಲ್ಲಿ ನೀರು ಹಾಗೂ ಉಪಮೇಲ್ಮೈಯಲ್ಲಿ ಮಂಜುಗಡ್ಡೆಯಿದ್ದು, ಕ್ರಿಯಾತ್ಮಕ ಮತ್ತು ಭೌಗೋಳಿಕವಾಗಿ ಸಕ್ರಿಯವಾಗಿರುವ ಆಕಾಶಕಾಯ ಎನ್ನುವುದು ಗೊತ್ತಾಗಿದೆ. ಬಹುಶಃ ಭವಿಷ್ಯದಲ್ಲಿ ಚಂದ್ರನ ಮೇಲ್ಮೈ ವಾಸಿಸಲು ಯೋಗ್ಯವಾಗಬಹುದು.' ಎಂದು ಹೇಳಿದ್ದಾರೆ.

ಇದಷ್ಟೇ ಅಲ್ಲದೆ ಈ ಮಿಷನ್ ಮತ್ತು ಬಾಹ್ಯಾಕಾಶ, ವಿಜ್ಞಾನ ಮತ್ತು ನಾವೀನ್ಯತೆಗಳಲ್ಲಿ ನಮ್ಮ ಭಾರತ ಮಾಡಿರುವ ಸಾಧನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ, ಇದು ನಿಮ್ಮನ್ನು ದೇಶದ ಬಗ್ಗೆ ನಮ್ಮ ವಿಜ್ಞಾನಿಗಳ ಬಗ್ಗೆ ಇನ್ನಷ್ಟು ಹೆಮ್ಮೆ ಪಡುವಂತೆ ಮಾಡುತ್ತದೆ' ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Chandrayaan-3: ಚಂದ್ರಯಾನಕ್ಕೆ ಎರಡು ದಶಕ... 2003 ರಿಂದ ಸಾಗಿ ಬಂದ ದಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.