ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಇಂದು ಬೆಳಗ್ಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದಲ್ಲಿ ಬರೆದ ಟಿಪ್ಪಣಿ (ಪೇಪರ್ ನೋಟ್ಸ್) ಬಳಸಿ ಮಾತನಾಡಿರುವುದು ಗಮನ ಸೆಳೆಯಿತು.
-
अमृतकाल में हमारे मानव संसाधन और प्राकृतिक संपदा का Optimum Outcome कैसे हो, हमें इस लक्ष्य को लेकर आगे बढ़ना है। #IndiaAt75 pic.twitter.com/VIJoXnbEIF
— Narendra Modi (@narendramodi) August 15, 2022 " class="align-text-top noRightClick twitterSection" data="
">अमृतकाल में हमारे मानव संसाधन और प्राकृतिक संपदा का Optimum Outcome कैसे हो, हमें इस लक्ष्य को लेकर आगे बढ़ना है। #IndiaAt75 pic.twitter.com/VIJoXnbEIF
— Narendra Modi (@narendramodi) August 15, 2022अमृतकाल में हमारे मानव संसाधन और प्राकृतिक संपदा का Optimum Outcome कैसे हो, हमें इस लक्ष्य को लेकर आगे बढ़ना है। #IndiaAt75 pic.twitter.com/VIJoXnbEIF
— Narendra Modi (@narendramodi) August 15, 2022
ಸತತ 9ನೇ ಬಾರಿಗೆ ಧ್ವಜಾರೋಹಣ ಮಾಡಿರುವ ಪ್ರಧಾನಿ ಮೋದಿ ನಿರಂತರವಾಗಿ 83 ನಿಮಿಷಗಳ ಕಾಲ ಭಾಷಣ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಧೀರ ನಾಯಕರು, ನಾರಿ ಶಕ್ತಿ, ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಸೇರಿದಂತೆ ವಿವಿಧ ವಿಷಯಗಳನ್ನು ತಮ್ಮ ಭಾಷಣದಲ್ಲಿ ಅವರು ಪ್ರಸ್ತಾಪಿಸಿದರು. ಆದರೆ, ಈ ಬಾರಿ ತಮ್ಮ ಭಾಷಣಕ್ಕೆ ಟೆಲಿಪ್ರಾಂಪ್ಟರ್ ಬಳಸಲಿಲ್ಲ. ಇದರ ಬದಲು ಕಾಗದದಲ್ಲಿ ಮಾಡಿಟ್ಟುಕೊಂಡ ಟಿಪ್ಪಣಿಯನ್ನೇ ನೆಚ್ಚಿಕೊಂಡಿದ್ದರು.
ಕಳೆದ ಜನವರಿಯಲ್ಲಿ ದಾವೋಸ್ ಶೃಂಗದಲ್ಲಿ ಪಾಲ್ಗೊಂಡು ವರ್ಚುವಲ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಟೆಲಿಪ್ರಾಂಪ್ಟರ್ ಕೈಕೊಟ್ಟು ಮಧ್ಯದಲ್ಲೇ ಪ್ರಧಾನಿ ಮಾತು ನಿಲ್ಲಿಸಿದ್ದರು ಎನ್ನಲಾಗಿತ್ತು. ಅಲ್ಲದೇ, ಈ ಬಗ್ಗೆ ಆಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಟೀಕಿಸುತ್ತಾ, 'ಟೆಲಿಪ್ರೊಂಪ್ಟರ್ಗೆ ಕೂಡ ಇಷ್ಟೊಂದು ಸುಳ್ಳುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ.. 100ನೇ ವರ್ಷದ ಸ್ವಾತಂತ್ರ್ಯ ದಿನಕ್ಕೆ ಪಂಚ ಪ್ರಾಣ ಪ್ರತಿಪಾದಿಸಿದ ಮೋದಿ