ನವದೆಹಲಿ: ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಕತಾರ್ ದೊರೆ ತಮೀಮ್ ಬಿನ್ ಹಮದ್ ಅಲ್ ಥನಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಇಂದು ಗಾರ್ಡ್ ಆಫ್ ಆನರ್ ಮೂಲಕ ಸರ್ಕಾರಿ ಗೌರವಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಜೊತೆಯಲ್ಲಿ ಹಿರಿಯ ಸಚಿವರು ಕತಾರ್ ದೊರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಕತಾರ್ ನಿಯೋಗವನ್ನು ರಾಷ್ಟ್ರಪತಿ ಮುರ್ಮು ಸ್ವಾಗತಿಸಿದರು.
#WATCH | Delhi: Sheikh Tamim Bin Hamad AL Thani, Amir of the State of Qatar, receives a ceremonial welcome at the forecourt of Rashtrapati Bhavan
— ANI (@ANI) February 18, 2025
(Source: DD) pic.twitter.com/G4UFAeuGch
ಭಾರತ ಭೇಟಿಗಾಗಿ ಸೋಮವಾರ ತಮೀಮ್ ಬಿನ್ ಹಮದ್ ಅಲ್ ಥಾನಿ ಭಾರತಕ್ಕೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡು ವಿಶೇಷ ಗೌರವ ನೀಡಿದ್ದರು. ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಕೂಡ ಉಪಸ್ಥಿತರಿದ್ದರು. "ಕತಾರ್ ದೊರೆ ತನ್ನ ಸಹೋದರನಿದ್ದಂತೆ" ಎಂದು ಹೇಳಿದ್ದ ಪ್ರಧಾನಿ ಮೋದಿ, ಅವರ ಭೇಟಿ ಫಲಪ್ರದವಾಗಲಿ ಎಂದು ಹಾರೈಸಿದ್ದರು.
#WATCH | Delhi: Sheikh Tamim Bin Hamad AL Thani, Amir of the State of Qatar and President Droupadi Murmu introduce each other to their respective country's ministers and delegation at the Rashtrapati Bhavan, in Delhi.
— ANI (@ANI) February 18, 2025
(Video: DD News) pic.twitter.com/2wfTmAb42r
ಕತಾರ್ ದೊರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚೆ ನಡೆಸಲಿದ್ದು, ಅವರಿಗಾಗಿ ವಿಶೇಷ ಔತಣಕೂಟವನ್ನು ಆಯೋಜಿಸಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಹಲವು ವಿಚಾರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಕತಾರ್ ದೊರೆಯೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಉದ್ಯಮಿಗಳ ನಿಯೋಗವೂ ಆಗಮಿಸಿದೆ. ಈ ಮೊದಲು 2015ರ ಮಾರ್ಚ್ನಲ್ಲಿ ಕತಾರ್ ದೊರೆ ಭಾರತಕ್ಕೆ ಭೇಟಿ ನೀಡಿದ್ದರು. ಇದು ಅವರ ಎರಡನೇ ಭೇಟಿಯಾಗಿದೆ.
#WATCH | Delhi: Prime Minister Narendra Modi meets Sheikh Tamim Bin Hamad Al Thani, Amir of the State of Qatar, at the Hyderabad House in Delhi.
— ANI (@ANI) February 18, 2025
(Source: DD) pic.twitter.com/uopFfY2Uy2
ಕತಾರ್ನಲ್ಲಿ ಭಾರತದ ಅತೀ ದೊಡ್ಡ ವಲಸಿಗ ಸಮುದಾಯವಿದೆ. ಕತಾರ್ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಅವರ ಸಕಾರಾತ್ಮಕ ಕೊಡುಗೆಗಳು ಮೆಚ್ಚುಗೆ ಪಡೆದಿವೆ. ಈ ಭೇಟಿಯು ಎರಡು ದೇಶಗಳ ನಡುವಿನ ಹಲವು ಅಭಿವೃದ್ಧಿ ಪಾಲುದಾರಿಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಆಲಂಗಿಸಿಕೊಂಡು ಸ್ವಾಗತ ಕೋರಿದ ಅಧ್ಯಕ್ಷ ಟ್ರಂಪ್