ಭೀಂಡ್(ಮಧ್ಯ ಪ್ರದೇಶ): ಡಂಪರ್ ಟ್ರಕ್‌ವೊಂದು ನಿಯಂತ್ರಣ ಕಳೆದುಕೊಂಡು ವ್ಯಾನ್ಗೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸಾವನ್ನಪ್ಪಿ, 12 ಮಂದಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ಮಧ್ಯ ಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಸಂಭವಿಸಿತು.
ಮದುವೆ ಸಂಭ್ರಮ ಮುಗಿಸಿ ವ್ಯಾನ್ನಲ್ಲಿ 8 ಮಂದಿ ವಾಪಸಾಗುತ್ತಿದ್ದರು. ಭೀಂಡ್‌ನ ಜವಾಹರಪುರ ಗ್ರಾಮದ ಬಳಿ ಮುಂಜಾನೆ 5 ಗಂಟೆಗೆ ರಸ್ತೆ ಬದಿಯಲ್ಲಿ ವ್ಯಾನ್ ನಿಲ್ಲಿಸಿದ್ದರು. ಕೆಲವರು ವಾಹನದಿಂದ ಇಳಿದು ರಸ್ತೆ ಬದಿ ನಿಂತಿದ್ದರೆ, ಇನ್ನು ಕೆಲವರು ವ್ಯಾನ್ನಲ್ಲೇ ಕುಳಿತಿದ್ದರು. ಈ ವೇಳೆ ವೇಗವಾಗಿ ಬಂದ ಡಂಪರ್ ಟ್ರಕ್ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದರು ಎಂದು ಎಸ್ಪಿ ಅಸಿತ್ ಯಾದವ್ ತಿಳಿಸಿದ್ದಾರೆ.
#WATCH | Bhind, Madhya Pradesh | 5 dead and around 20 injured in a road accident where a dumper truck collided with a loading vehicle. pic.twitter.com/p48xrs7IhR
— ANI (@ANI) February 18, 2025
ಗಾಯಾಳುಗಳನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ 7 ಮಂದಿಯನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಸ್ಥರಿಂದ ರಸ್ತೆ ತಡೆ: ಐವರ ಸಾವಿನ ಬೆನ್ನಲ್ಲೇ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ರಸ್ತೆ ಅಗಲೀಕರಣ ಹಾಗೂ ಆಡಳಿತ ದೋಷದ ಕುರಿತು ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
24 ಗಂಟೆಯಲ್ಲಿ ಎರಡನೇ ಭೀಕರ ಅಪಘಾತ: ಈ ಪ್ರದೇಶದಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎರಡನೇ ದುರಂತ ಇದು. ಇಲ್ಲಿನ ಕಿರಿದಾದ ರಸ್ತೆಗಳೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಭಾನುವಾರ ಮದುವೆ ಮುಗಿಸಿ ಮರಳುತ್ತಿದ್ದ ಯುವಕನೊಬ್ಬನಿಗೆ ಟ್ರಕ್ ಗುದ್ದಿ, ಆತ ಭೀಕರವಾಗಿ ಸಾವನ್ನಪ್ಪಿದ್ದ. ಈ ಘಟನೆಯಿಂದಾಗಿ ಜವಾಹರಪುರ ಗ್ರಾಮದ ಬಾಸ್ ಹೆದ್ದಾರಿಯ ಎರಡೂ ಬದಿಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: ಕಾಲ್ತುಳಿತದ ನಂತರ ದೆಹಲಿ ರೈಲು ನಿಲ್ದಾಣದಲ್ಲಿ ಜನದಟ್ಟಣೆ ನಿರ್ವಹಣೆಗೆ CRPF ನಿಯೋಜನೆ