ನವದೆಹಲಿ: ಪುನರಾಭಿವೃದ್ಧಿಗೊಂಡ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಸಂಕೀರ್ಣ ಜು.26 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇಲ್ಲಿ ಸೆಪ್ಟೆಂಬರ್‌ನಲ್ಲಿ ಜಿ 20 ನಾಯಕರ ಸಭೆ ನಡೆಯಲಿದೆ.
ಪ್ರಗತಿ ಮೈದಾನ ಸಂಕೀರ್ಣ ಎಂದೂ ಕರೆಯಲ್ಪಡುವ ಈ ಸ್ಥಳವು ಸರಿಸುಮಾರು 123 ಎಕರೆಗಳ ಕ್ಯಾಂಪಸ್ ಪ್ರದೇಶ ಹೊಂದಿದೆ. ಇದು ಭಾರತದ ಅತಿದೊಡ್ಡ ಎಂಐಸಿಇ (Meetings, incentives, conferences and exhibitions tourism) ತಾಣ. ಈವೆಂಟ್‌ಗಳಿಗೆ ಲಭ್ಯವಿರುವ ಪುನರಾಭಿವೃದ್ಧಿ ಮತ್ತು ಆಧುನಿಕ ಐಇಸಿಸಿ (ಇಂಟರ್ನ್ಯಾಷನಲ್ ಎನರ್ಜಿ ಕನ್ಸರ್ವೇಶನ್ ಕೋಡ್) ಕಾಂಪ್ಲೆಕ್ಸ್ ವಿಶ್ವದ ಟಾಪ್ 10 ಪ್ರದರ್ಶನ ಮತ್ತು ಸಮಾವೇಶ ಸಂಕೀರ್ಣಗಳಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಳ್ಳಲಿದೆ. ಜರ್ಮನಿಯ ಹ್ಯಾನೋವರ್ ಎಕ್ಸಿಬಿಷನ್ ಸೆಂಟರ್, ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಷನ್ ಮತ್ತು ಕನ್ವೆನ್ಷನ್ ಸೆಂಟರ್ (ಎನ್‌ಇಸಿಸಿ) ನಂತಹ ಬೃಹತ್ ಹೆಸರುಗಳಿಗೆ ಇದು ಪ್ರತಿಸ್ಪರ್ಧಿಯಾಗಿದೆ.
ಐಇಸಿಸಿಯ ಹಿರಿಮೆ ಮತ್ತು ಮೂಲಸೌಕರ್ಯ ವಿಶ್ವ ದರ್ಜೆಯ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಯೋಜಿಸುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕನ್ವೆನ್ಷನ್ ಸೆಂಟರ್‌ನ 3ನೇ ಹಂತದಲ್ಲಿ 7 ಸಾವಿರ ವ್ಯಕ್ತಿಗಳು ಕೂರಬಹುದಾದ ಭವ್ಯ ಆಸನಗಳನ್ನು ಹೊಂದಿದೆ. ಇದು ಆಸ್ಟ್ರೇಲಿಯಾದ ಸಿಡ್ನಿ ಒಪೇರಾ ಹೌಸ್‌ನ ಸರಿಸುಮಾರು 5,500 ಆಸನ ಸಾಮರ್ಥ್ಯಕ್ಕಿಂತ ದೊಡ್ಡದಾಗಿದೆ. ಈ ಪ್ರಭಾವಶಾಲಿ ವೈಶಿಷ್ಟ್ಯವು ಜಾಗತಿಕ ಮಟ್ಟದಲ್ಲಿ ಬೃಹತ್ ಸಮ್ಮೇಳನಗಳು, ಅಂತಾರಾಷ್ಟ್ರೀಯ ಶೃಂಗಸಭೆಗಳು ಮತ್ತು ಸಾಂಸ್ಕೃತಿಕ ಸಂಭ್ರಮಗಳನ್ನು ಆಯೋಜಿಸಲು ಸೂಕ್ತ ಸ್ಥಳವಾಗಿದೆ. ಪ್ರದರ್ಶನ ಸಭಾಂಗಣಗಳು ಉತ್ಪನ್ನಗಳು, ನಾವೀನ್ಯತೆಗಳು ಮತ್ತು ಆಲೋಚನೆಗಳನ್ನು ಪ್ರದರ್ಶಿಸಲು ಏಳು ಹೊಸ ವೇದಿಕೆಯನ್ನು ಹೊಂದಿದೆ.
-
Absolutely Stellar & Spectacular!
— Dr Mansukh Mandaviya (@mansukhmandviya) July 23, 2023 " class="align-text-top noRightClick twitterSection" data="
Take a look at the redeveloped ITPO complex.
It will be inaugurated on 26th July. pic.twitter.com/ugTYoIUEIc
">Absolutely Stellar & Spectacular!
— Dr Mansukh Mandaviya (@mansukhmandviya) July 23, 2023
Take a look at the redeveloped ITPO complex.
It will be inaugurated on 26th July. pic.twitter.com/ugTYoIUEIcAbsolutely Stellar & Spectacular!
— Dr Mansukh Mandaviya (@mansukhmandviya) July 23, 2023
Take a look at the redeveloped ITPO complex.
It will be inaugurated on 26th July. pic.twitter.com/ugTYoIUEIc
ವ್ಯಾಪಾರ ಬೆಳವಣಿಗೆ, ನೆಟ್‌ವರ್ಕಿಂಗ್‌ಗೆ ಅವಕಾಶ: ಅತ್ಯಾಧುನಿಕ ಸಭಾಂಗಣಗಳು ಪ್ರದರ್ಶಕರು ಮತ್ತು ಕಂಪನಿಗಳಿಗೆ ತಮ್ಮ ಗುರಿ ಪ್ರೇಕ್ಷಕರೊಂದಿಗೆ ತೊಡಗಿಸಿಕೊಳ್ಳಲು ಸೂಕ್ತವಾದ ವೇದಿಕೆಯನ್ನು ಒದಗಿಸುತ್ತವೆ. ವ್ಯಾಪಾರ ಬೆಳವಣಿಗೆ ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಉತ್ತೇಜಿಸುತ್ತವೆ. ಜತೆಗೆ ಐಇಸಿಸಿ 3 ಸಾವಿರ ವ್ಯಕ್ತಿಗಳ ಆಸನ ಸಾಮರ್ಥ್ಯದೊಂದಿಗೆ ಭವ್ಯವಾದ ಆಂಫಿಥಿಯೇಟರ್ ಅನ್ನು ಹೊಂದಿದೆ. ಮೂರು ಪಿವಿಆರ್ ಥಿಯೇಟರ್‌ಗಳಿಗೆ ಸಮಾನವಾದ ಈ ಗ್ರ್ಯಾಂಡ್ ಆಂಫಿಥಿಯೇಟರ್ ಆಕರ್ಷಕ ಪ್ರದರ್ಶನಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ವೇದಿಕೆಯಾಗಿವೆ. ಐಇಸಿಸಿಯಲ್ಲಿ ಸಂದರ್ಶಕರ ಅನುಕೂಲ ಕೂಡ ಪ್ರಮುಖ ಆದ್ಯತೆಯಾಗಿದೆ. ಇದು 5,500 ಕ್ಕೂ ಹೆಚ್ಚು ವಾಹನ ನಿಲುಗಡೆ ಸ್ಥಳಗಳನ್ನು ಹೊಂದಿದೆ. ಸಿಗ್ನಲ್-ಮುಕ್ತ ರಸ್ತೆಗಳ ಮೂಲಕ ಸುಲಭವಾಗಿ ಪ್ರವೇಶಿಸುವುದರಿಂದ ಸಂದರ್ಶಕರು ಯಾವುದೇ ತೊಂದರೆಯಿಲ್ಲದೆ ಸ್ಥಳವನ್ನು ತಲುಪಬಹುದು.
ಭಾರತ ವ್ಯಾಪಾರ ಪ್ರಚಾರ ಸಂಸ್ಥೆ ಬಗ್ಗೆ ಒಂದಿಷ್ಟು..: ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಭಾರತದ ಪ್ರಮುಖ ವ್ಯಾಪಾರ ಪ್ರಚಾರ ಸಂಸ್ಥೆ. ಇದು ವ್ಯಾಪಾರ ಮತ್ತು ಉದ್ಯಮಕ್ಕೆ ಅಮೋಘ ಕೊಡುಗೆ ನೀಡಿದೆ. ಭಾರತದ ವ್ಯಾಪಾರದ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ನವದೆಹಲಿಯ ಪ್ರಗತಿ ಮೈದಾನದಲ್ಲಿ ಇದರ ಪ್ರಧಾನ ಕಛೇರಿ ಇದೆ. ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ.