ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪರಸ್ಪರ ಭೇಟಿ ಮಾಡಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಕುರಿತು ಚರ್ಚೆನಡೆಸಿ ಮುಂಬರುವ ವರ್ಷಕ್ಕೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
"2020 ಅಂತ್ಯಗೊಳ್ಳುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಈ ವೇಳೆ ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಬಗ್ಗೆ ವಿವರಿಸಿದರು. ಬಳಿಕ ಇಬ್ಬರೂ 2021 ರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹೊಸ ವರ್ಷ ಭಾರತದ ಜನರಿಗೆ ಉಜ್ವಲ ಭವಿಷ್ಯವನ್ನು ನೀಡುತ್ತದೆ" ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.
-
As the year 2020 draws to its end, Prime Minister @narendramodi called on President Ram Nath Kovind and briefed him on domestic and international affairs. They exchanged good wishes for the year 2021 which promises a brighter future for the people of India. pic.twitter.com/QOd2eDb8hc
— President of India (@rashtrapatibhvn) December 30, 2020 " class="align-text-top noRightClick twitterSection" data="
">As the year 2020 draws to its end, Prime Minister @narendramodi called on President Ram Nath Kovind and briefed him on domestic and international affairs. They exchanged good wishes for the year 2021 which promises a brighter future for the people of India. pic.twitter.com/QOd2eDb8hc
— President of India (@rashtrapatibhvn) December 30, 2020As the year 2020 draws to its end, Prime Minister @narendramodi called on President Ram Nath Kovind and briefed him on domestic and international affairs. They exchanged good wishes for the year 2021 which promises a brighter future for the people of India. pic.twitter.com/QOd2eDb8hc
— President of India (@rashtrapatibhvn) December 30, 2020
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2020ರ ವರ್ಷ ವಿಶ್ವದಾದ್ಯಂತ ಜನರಿಗೆ ಕಷ್ಟಕರವಾಗಿದೆ. ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಕೊರೊನಾ ವೈರಸ್ ಕಾರಣದಿಂದಾಗಿ ಸಾವಿಗೀಡಾಗುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿದ್ದು, ಭಾರತ ಈಗ ಚೇತರಿಕೆಯ ಹಾದಿಯಲ್ಲಿದೆ. ನಾಲ್ಕು ರಾಜ್ಯಗಳಲ್ಲಿ ಡ್ರೈ ರನ್‌ಔಟ್ ನಡೆಸಿ ಲಸಿಕೆಯನ್ನು ಹೊರತರಲು ಭಾರತ ಸರ್ಕಾರ ಯೋಜಿಸುತ್ತಿದೆ.
ಓದಿ ರಾಜ್ಕೋಟ್ನಲ್ಲಿ ಏಮ್ಸ್ ನಿರ್ಮಾಣಕ್ಕೆ ಇಂದು ಪ್ರಧಾನಿ ಮೋದಿಯಿಂದ ಅಡಿಗಲ್ಲು
"ಕೋವಿಡ್ -19 ಜಾಗತಿಕ ಆರ್ಥಿಕತೆಯ ಮೇಲೆ ಪ್ರಭಾವ ಬೀರಿರುವುದರಿಂದ ಭಾರತವನ್ನು ಹೆಚ್ಚು ಸ್ವಾವಲಂಬಿಯನ್ನಾಗಿ ಮಾಡಲು ನಾವು ವಾಗ್ದಾನ ಮಾಡಿದ್ದೇವೆ. ಅದೇ ಆತ್ಮನಿರ್ಭರ್ ಭಾರತ ಯೋಜನೆಗೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನವು ಪ್ರಮುಖ ಸಹಾಯಕರಾಗಲಿದೆ" ಎಂದು ರಾಷ್ಟ್ರಪತಿಗಳು ಈ ಹಿಂದೆ ಹೇಳಿದ್ದರು.