ETV Bharat / bharat

ಕೋವಿಡ್​ ಕುರಿತು ಪಿಎಂ ಮೋದಿ ಸಭೆ : ಲಸಿಕೆ ಉತ್ಪಾದನೆ, ಆಸ್ಪತ್ರೆಯಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲು ಕರೆ

ಕಳೆದ ರಾತ್ರಿ ಮಹತ್ವದ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಔಷಧಿಗಳು, ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು.

PM Modi chairs meeting on COVID-19,
ಕೋವಿಡ್​ ಕುರಿತು ಪಿಎಂ ಮೋದಿ ಸಭೆ
author img

By

Published : Apr 18, 2021, 9:35 AM IST

ನವದೆಹಲಿ: ಕೊರೊನಾ ರೋಗಿಗಳಿಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹಾಗೂ ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಗೊಂಡಿದ್ದು, ಪರಿಸ್ಥಿತಿ ಪರಿಶೀಲಿಸಲು ಉನ್ನತ ಅಧಿಕಾರಿಗಳು, ತಜ್ಞರು, ವಿವಿಧ ರಾಜ್ಯಗಳ ಸಚಿವರ ಜೊತೆ ಪಿಎಂ ಮೋದಿ ನಿನ್ನೆ ರಾತ್ರಿ ಮಹತ್ವದ ಸಭೆ ನಡೆಸಿದ್ದರು. ಸಭೆಯಲ್ಲಿ ಔಷಧಿಗಳು, ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಚರ್ಚಿಸಲಾಯಿತು. ಕೇಂದ್ರ ಆರೋಗ್ಯ ಹಾಗೂ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ನೀತಿ ಆಯೋಗದ ಸದಸ್ಯ ಡಾ ವಿ ಕೆ ಪಾಲ್, ಸಂಪುಟ ಕಾರ್ಯದರ್ಶಿಗಳು ಸಹ ಸಭೆಯಲ್ಲಿ ಉಪಸ್ಥಿತರಿದ್ದರು.

ಸೋಂಕಿತರಿಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ತಾತ್ಕಾಲಿಕ ಕೋವಿಡ್​ ಆಸ್ಪತ್ರೆಗಳು ಹಾಗೂ ಕ್ವಾರಂಟೈ​ನ್​ ಕೇಂದ್ರಗಳಿಗೂ ಹೆಚ್ಚುವರಿ ಹಾಸಿಗೆಗಳ ಪೂರೈಸಬೇಕು. ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಇಡೀ ರಾಷ್ಟ್ರದ ಸಾಮರ್ಥ್ಯವನ್ನು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಮೋದಿ ಸೂಚಿಸಿದರು.

ಇದನ್ನೂ ಓದಿ: ರೆಮ್​​ಡೆಸಿವಿರ್ ಲಸಿಕೆ ದರದಲ್ಲಿ ಇಳಿಕೆ.. ಸರ್ಕಾರದ ಹಸ್ತಕ್ಷೇಪಕ್ಕೆ ಮಣಿದ ತಯಾರಕರು

ಕಳೆದ ವರ್ಷ ಭಾರತವು ಒಟ್ಟಾಗಿ ಕೊರೊನಾ ಸಾಂಕ್ರಾಮಿಕವನ್ನು ಸೋಲಿಸಿತ್ತು. ಈ ಬಾರಿ ಕೂಡ ಅದೇ ರೀತಿಯಲ್ಲಿ ಎಲ್ಲರೂ ಸಹಕರಿಸಿದರೆ ಗೆಲ್ಲಬಹುದು. ಮರಣ ಪ್ರಮಾಣವನ್ನು ಕಡಿಮೆ ಮಾಡಲು ಕೋವಿಡ್​ ಟೆಸ್ಟ್​ ಮತ್ತು ಟ್ರ್ಯಾಕಿಂಗ್ ವೇಗವನ್ನು ಹೆಚ್ಚಿಸಬೇಕಿದೆ. ಸ್ಥಳೀಯ ಆಡಳಿತಗಳು ಪೂರ್ವಭಾವಿಯಾಗಿ ಕಾರ್ಯ ನಿರ್ವಹಿಸಬೇಕು ಹಾಗೂ ಸೂಕ್ಷ್ಮವಾಗಿರಬೇಕು ಎಂದು ತಿಳಿಸಿದರು.

ಆಮ್ಲಜನಕದ ಪೂರೈಕೆ, ರೆಮ್​​ಡೆಸಿವಿರ್ ಸೇರಿದಂತೆ ಇತರ ಔಷಧಿಗಳ ಪೂರೈಕೆ ಕುರಿತೂ ಪ್ರಧಾನಿ ಪರಿಶೀಲಿಸಿದ್ದಾರೆ. ಜನವರಿ - ಫೆಬ್ರವರಿಯಲ್ಲಿ ಪ್ರತಿ ತಿಂಗಳಿಗೆ ಕೇವಲ 27-29 ಲಕ್ಷ ರೆಮ್​​ಡೆಸಿವಿರ್ ಡೋಸ್​ ಉತ್ಪಾದಿಸಲಾಗುತ್ತಿತ್ತು. ಆದರೆ ಮೇ ತಿಂಗಳಿನಿಂದ ಸರ್ಕಾರದ ಬೆಂಬಲದೊಂದಿಗೆ ಸುಮಾರು 74.10 ಲಕ್ಷ ಡೋಸ್ ಉತ್ಪಾದಿಸಲಾಗುವುದು ಎಂದು ಪಿಎಂಗೆ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.