ETV Bharat / bharat

ಮೋದಿ, ನಟಿ ಪ್ರಿಯಾಂಕಾ, ಸೋನಿಯಾ, ಅಮಿತ್​ ಶಾ ಕೋವಿಡ್​​ ವ್ಯಾಕ್ಸಿನ್​ ಪಡೆದಿದ್ದು ಈ ಕೇಂದ್ರದಲ್ಲೇ!?

ಬಿಹಾರದ ಅರ್ವಾಲ್​​ನಲ್ಲಿರುವ ಕೋವಿಡ್​ ವ್ಯಾಕ್ಸಿನೇಷನ್ ಸೆಂಟರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಕೆಲ ಪ್ರಮುಖರು ವ್ಯಾಕ್ಸಿನೇಷನ್​ ಪಡೆದುಕೊಂಡಿದ್ದಾರೆಂಬ ಪಟ್ಟಿ ಹೊರಬಿದ್ದಿದೆ.

Priyanka Chopra took corona vaccine in Arwal

author img

By

Published : Dec 6, 2021, 4:59 PM IST

ಅರ್ವಾಲ್​​​(ಬಿಹಾರ): ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು 18 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ವ್ಯಾಕ್ಸಿನ್​​ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಕೆಲವರು ವ್ಯಾಕ್ಸಿನ್​ ಪಡೆದುಕೊಂಡಿಲ್ಲವಾದರೂ ಮೊಬೈಲ್​ಗೆ ಲಸಿಕೆ ಪಡೆದುಕೊಂಡಿರುವ ಸಂದೇಶ ರವಾನೆ ಆಗುವುದು ಕಾಮನ್​​​ ಆಗಿ ಬಿಟ್ಟಿದೆ. ಇದರ ಮಧ್ಯೆ ಬಿಹಾರದ ಅರ್ವಾಲ್​​​ನಲ್ಲಿರುವ ಕೋವಿಡ್​ ಸೆಂಟರ್​​ನಲ್ಲಿ ಮತ್ತೊಂದು ಅವಘಡ ನಡೆದಿದೆ.

PM Modi took corona vaccine in Arwal
ವ್ಯಾಕ್ಸಿನ್ ಪಟ್ಟಿಯಲ್ಲಿ ಪ್ರಮುಖರು ಹೆಸರು ದಾಖಲು

ಅರ್ವಾಲ್​​​ನಲ್ಲಿರುವ ಕೋವಿಡ್​​ ಸೆಂಟರ್​​​ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಟಿ ಪ್ರಿಯಾಂಕಾ ಗಾಂಧಿ ಜೊತೆಗೆ ಗೃಹ ಸಚಿವ ಅಮಿತ್​​ ಶಾ ಮತ್ತು ಸೋನಿಯಾ ಗಾಂಧಿ ವ್ಯಾಕ್ಸಿನ್​ ಪಡೆದುಕೊಂಡಿದ್ದಾರಂತೆ. ಅಲ್ಲಿನ ಲಿಸ್ಟ್​​ನಲ್ಲಿ ಇವರ ಹೆಸರುಗಳು ದಾಖಲಾಗಿವೆ.

ಮೋದಿ, ಅಮಿತ್​ ಶಾ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಚೋಪ್ರಾ ಹೆಸರಿನಲ್ಲಿ ಲಸಿಕೆ ಹಾಕಿರುವ ನಕಲಿ ಪ್ರಕರಣ ಇದಾಗಿದೆ. ಎಚ್ಚೆತ್ತುಕೊಂಡಿರುವ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಕ್ರಮ ಕೈಗೊಂಡಿದ್ದು, ಡಾಟಾ ಎಂಟ್ರಿ ಆಪರೇಟರ್​​​ ಅನ್ನು ಸೇವೆಯಿಂದ ತೆಗೆದು ಹಾಕಲಾಗಿದೆ.

PM Modi took corona vaccine in Arwal
ವ್ಯಾಕ್ಸಿನೇಷನ್​​ ಪಟ್ಟಿಯಲ್ಲಿ ನರೇಂದ್ರ ಮೋದಿ ಹೆಸರು

ಅಕ್ಟೋಬರ್​​ 27ರಂದು ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರ್​​ಟಿ-ಪಿಸಿಆರ್ ತನಿಖೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದು ಸಹ ಬೆಳಕಿಗೆ ಬಂದಿದೆ. ವ್ಯಾಕ್ಸಿನ್​ ಪಟ್ಟಿಯಲ್ಲಿ ದೊಡ್ಡ ದೊಡ್ಡ ನಾಯಕರ ಹೆಸರು ನಮೂದಿಸಲಾಗಿದ್ದು, ಅವರ ಮೊಬೈಲ್​​​ ಸಂಖ್ಯೆ, ವಿಳಾಸ ಸಂಪೂರ್ಣವಾಗಿ ತಪ್ಪಾಗಿ ನಮೋದು ಮಾಡಲಾಗಿದೆ. ಮೊಬೈಲ್​ ಸಂಖ್ಯೆ ಆಧಾರದ ಮೇಲೆ ಇವರ ಮಾಹಿತಿ ಕಲೆ ಹಾಕಲಾಗಿದ್ದು, ಎಲ್ಲರೂ ಬಕ್ಸಾರ್​​​ನ ನಿವಾಸಿಗಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: Civilian killing in Nagaland: ಉಗ್ರರೆಂದು ತಪ್ಪಾಗಿ ಅರ್ಥೈಯಿಸಿ ಗುಂಡಿನ ದಾಳಿ: ಪ್ರಕರಣ SITಗೆ ನೀಡಿದ ಅಮಿತ್​​ ಶಾ

ಡೇಟಾ ಆಪರೇಟರ್​​​ ವ್ಯಕ್ತಿ ಮೇಲೆ ಒತ್ತಡ ಹೇರಿ ವ್ಯಾಕ್ಸಿನ್​​​ನೇಷನ್​ ಲಿಸ್ಟ್​​ನಲ್ಲಿ ಕೆಲ ಪ್ರಮುಖರ ಹೆಸರು ನಮೋದಿಸಿ, ಅವ್ಯವಹಾರ ನಡೆಸಿರುವ ಸಾಧ್ಯತೆ ಇದೆ. ಇದರ ಬಗ್ಗೆ ಗಂಭೀರವಾದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಪ್ರಿಯದರ್ಶಿನಿ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.