ETV Bharat / bharat

ನಿತೀಶ್ ಕುಮಾರ್​​​ಗೆ ಮತ್ತೊಂದು​ ಶಾಕ್​.. ಬಿಜೆಪಿ ಸೇರಿದ 15 ಜಿಲ್ಲಾ ಪಂಚಾಯ್ತಿ ಸದಸ್ಯರು

ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆದ ಬಳಿಕ ಒಂದಿಲ್ಲೊಂದು ಸಂಕಷ್ಟ ಎದುರಾಗ್ತಿದ್ದು, ಇದೀಗ ಮತ್ತೊಂದು ಶಾಕ್​ ಎದುರಿಸುವಂತಾಗಿದೆ.

author img

By

Published : Sep 13, 2022, 9:04 AM IST

Panchayat Members
Panchayat Members

ನವದೆಹಲಿ: ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ+ಕಾಂಗ್ರೆಸ್ ಜೊತೆ ಕೈಜೋಡಿಸಿರುವ ನಿತೀಶ್​​ ಕುಮಾರ್​ ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಮಾಡಿದ್ದಾರೆ. ಇದರ ಮಧ್ಯೆ ವಿವಿಧ ರಾಜ್ಯಗಳಲ್ಲಿ ನಿತೀಶ್ ಕುಮಾರ್​ಗೆ ದೊಡ್ಡ ಶಾಕ್​ ಎದುರಾಗ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮಣಿಪುರದಲ್ಲಿ ಜೆಡಿಯು ಪಕ್ಷದ ಐವರು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ದಮನ್ ಮತ್ತು ದಿಯುನಲ್ಲಿ 15 ಪಂಚಾಯ್ತಿ ಸದಸ್ಯರು ಕಮಲ ಮುಡಿದಿದ್ದಾರೆ.

ನಿತೀಶ್ ಕುಮಾರ್​​ ಅವರು ಬಿಜೆಪಿ ತೊರೆದಿರುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ದಮನ್​ ಮತ್ತು ದಿಯುನ ಜೆಡಿಯು ಘಟಕದ 17 ಜಿಲ್ಲಾ ಪಂಚಾಯ್ತಿ ಸದಸ್ಯರ ಪೈಕಿ 15 ಮಂದಿ ನಿನ್ನೆ ಬಿಜೆಪಿ ಸೇರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿ ಖುದ್ದಾಗಿ ಟ್ವೀಟ್ ಮಾಡಿದ್ದು, ಫೋಟೋ ಹಂಚಿಕೊಂಡಿದೆ. ಬಿಹಾರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡ್ತಿದ್ದ ಬಿಜೆಪಿ ತೊರೆದು, ಭ್ರಷ್ಟರಾಗಿರುವ ಕಾಂಗ್ರೆಸ್ ಹಾಗೂ ಆರ್​ಜೆಡಿ ಜೊತೆ ನಿತೀಶ್ ಕುಮಾರ್​ ಕೈಜೋಡಿಸಿದ್ದಾರೆ. ಅವರ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಜಿಪಂ ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ ಐವರು ಜೆಡಿಯು ಶಾಸಕರು.. ನಿತೀಶ್ ಕುಮಾರ್​​​ಗೆ ಬಿಗ್​ ಶಾಕ್​

ಕಳೆದ ಕೆಲ ದಿನಗಳ ಹಿಂದೆ ಅರುಣಾಚಲ ಪ್ರದೇಶದ ಜೆಡಿಯು ಶಾಸಕರು ಕೇಸರಿ ಪಾಳಯ ಸೇರಿದ್ದರು. ಇದಾದ ಬಳಿಕ ಮಣಿಪುರದ 7 ಶಾಸಕರ ಪೈಕಿ ಐವರು ಕಮಲ ಮುಡಿದಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೋಸ್ಕರ ಈಗಿನಿಂದಲೇ ಭಾರತೀಯ ಜನತಾ ಪಾರ್ಟಿ ಪಕ್ಷ ಬಲವರ್ಧನೆ ಕಾರ್ಯದಲ್ಲಿ ಮಗ್ನವಾಗಿದೆ. ಪಕ್ಷ ದುರ್ಬಲವಾಗಿರುವ ಪ್ರದೇಶಗಳಲ್ಲಿ ತಳಮಟ್ಟದಿಂದ

  • नितीश कुमार द्वारा बिहार में विकास को गति देने वाली भाजपा का साथ छोड़कर बाहुबली, भ्रष्ट एवं परिवारवादी पार्टी का साथ देने के विरोध में दानह एवं दमन दीव के जेडीयू के 17 में से 15 जिला पंचायत सदस्य एवं प्रदेश जेडीयू की पूरी ईकाई आज भाजपा में शामिल हुई। pic.twitter.com/YXn3WhxEKR

    — BJP (@BJP4India) September 12, 2022 " class="align-text-top noRightClick twitterSection" data=" ">

ಪಕ್ಷ ದುರ್ಬಲವಾಗಿರುವ ಪ್ರದೇಶಗಳ ಮೇಲೆ ಕಣ್ಣಿಟ್ಟು, ಈ ನಿರ್ಧಾರ ಕೈಗೊಂಡಿದೆ. ಇದೇ ಕಾರಣಕ್ಕಾಗಿ ಶುಕ್ರವಾರ ಮಹತ್ವದ ಸಭೆ ನಡೆಸಿ, ಉಸ್ತುವಾರಿಗಳನ್ನು ಸದೃಢ ಮಾಡುವ ನಿರ್ಧಾರಕ್ಕೆ ಕೈಹಾಕಿದೆ. ಹೀಗಾಗಿ, ಈಶಾನ್ಯ ರಾಜ್ಯಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.

ಇದನ್ನೂ ಓದಿ: ಚುನಾವಣೆ ಮೇಲೆ ಕಣ್ಣು.. 15 ರಾಜ್ಯಗಳ ಉಸ್ತುವಾರಿ ಘೋಷಿಸಿದ ಬಿಜೆಪಿ

ಮುಂದಿನ ಕೆಲ ದಿನಗಳಲ್ಲಿ ಗುಜರಾತ್​, ಹಿಮಾಚಲ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಬಿಜೆಪಿ ಹೈಕಮಾಂಡ್ ಕಳೆದ ಕೆಲ ದಿನಗಳ ಹಿಂದೆ​​ 15 ರಾಜ್ಯಗಳಿಗೆ ಹೊಸ ಉಸ್ತುವಾರಿಗಳನ್ನು ನೇಮಕ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.