ನವದೆಹಲಿ: 'ಆಪರೇಷನ್ ಮಾಸೂಮ್' ಅಡಿ ಮಕ್ಕಳ ಅಶ್ಲೀಲ ಚಿತ್ರಗಳ ಅಥವಾ ಮಕ್ಕಳ ಮೇಲಿನ ಲೈಂಗಿಕ ಅಪರಾಧ ವಿರುದ್ಧ ನಡೆಸಿದ ವಿಶೇಷ ಅಭಿಯಾನದ ವೇಳೆ ದೆಹಲಿ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಲ್ಲಿ 160ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕವು ಮಾಸೂಮ್ (MASOOM -Mitigation of Adolescent Sexually Offensive Online Material) ಅನ್ನು ಪ್ರಾರಂಭಿಸಿದ್ದು, ಎಲ್ಲ ಜಿಲ್ಲೆಗಳು ಮಕ್ಕಳ ಅಶ್ಲೀಲತೆ ನಿಗ್ರಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.
ಇದನ್ನೂ ಓದಿ: ಮಕ್ಕಳ ಮೇಲಿನ ಲೈಂಗಿಕ ಅಪರಾಧ: 'ಪಿ-ಹಂಟ್ 'ಮೂಲಕ ಗೊತ್ತಾಗಿದ್ದು ಭಯಾನಕ ಮಾಹಿತಿ !
ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರದಡಿ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆ ದಳ ನೀಡುವ ಮಾಹಿತಿ ಪಡೆದು ಐಎಫ್ಎಸ್ಒ ಘಟಕವು ಮಕ್ಕಳಿಗೆ ಸಂಬಂಧಿಸಿದ ಗೌಪ್ಯತೆ/ಅಶ್ಲೀಲ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಬಳಕೆದಾರರ ಐಪಿ ವಿಳಾಸದ ವಿವರಗಳನ್ನು ಅವರು ಸಂಗ್ರಹಿಸುತ್ತಾರೆ.
ಇಂತಹ 160 ಪ್ರಕರಣಗಳನ್ನು ಪತ್ತೆ ಮಾಡಿರುವ ಐಎಫ್ಎಸ್ಒ ಘಟಕ, ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ ಹಾಗೂ 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.