ETV Bharat / bharat

ಒಡಿಶಾ ರೈಲು ದುರಂತ: ಮೊದಲ FIR​ ದಾಖಲಿಸಿದ ಸಿಬಿಐ; ತಪ್ಪು ಸಾಬೀತಾದರೆ ಗರಿಷ್ಠ ಶಿಕ್ಷೆ ಎಷ್ಟು ಗೊತ್ತೇ!

ಒಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ರೈಲು ದುರಂತದ ಬಗ್ಗೆ ತನಿಖೆ ಆರಂಭಿಸಿರುವ ಸಿಬಿಐ, ಐಪಿಸಿ ಮತ್ತು ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್​ಗಳಲ್ಲಿ ಐಎಫ್​ಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಒಡಿಶಾ ರೈಲು ದುರಂತ... ಐಎಫ್ಆರ್​ ದಾಖಲಿಸಿಕೊಂಡ ಸಿಬಿಐ
Odisha train tragedy: CBI begins probe, collects first-hand report at crash site
author img

By

Published : Jun 6, 2023, 6:59 PM IST

ಬಾಲಸೋರ್​ (ಒಡಿಶಾ): ದೇಶ ಕಂಡ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾದ ಒಡಿಶಾದ ತ್ರಿವಳಿ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮಂಗಳವಾರ ಆರಂಭಿಸಿದೆ. 10 ಜನ ಸದಸ್ಯರನ್ನು ಒಳಗೊಂಡ ತನಿಖಾ ತಂಡವು ಘಟನಾ ಸ್ಥಳವಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಇಲ್ಲಿನ ಹಳಿಗಳು ಮತ್ತು ಸಿಗ್ನಲ್ ರೂಂ ಬಗ್ಗೆ ರೈಲ್ವೆ ಅಧಿಕಾರಿಗಳಿಂದ ತನಿಖಾ ಅಧಿಕಾರಿಗಳು ವಿವರವಾದ ಮಾಹಿತಿ ಸಂಗ್ರಹಿಸಿದರು.

ಜೂನ್ 2ರಂದು ರೈಲು ಕೋಲಮಂಡಲ್ ಎಕ್ಸ್​ಪ್ರೆಸ್​, ಬೆಂಗಳೂರು - ಹೌರಾ ಎಕ್ಸ್​ಪ್ರೆಸ್​ ಹಾಗೂ ಗೂಡ್ಸ್​ ರೈಲಿಂದ ಉಂಟಾದ ಅಪಘಾತದಲ್ಲಿ ಒಟ್ಟು 288 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂದಾಜು 1,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದುರ್ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಅಪಘಾತದ ಹಿಂದೆ ವಿಧ್ವಂಸಕ ಕೃತ್ಯ ಮತ್ತು ಹೊರಗಿನವರ ಕೈವಾಡವಿರುವ ಬಗ್ಗೆ ರೈಲ್ವೆ ಇಲಾಖೆ ಶಂಕಿಸಿದೆ. ಅಲ್ಲದೇ, ಖುರ್ದಾ ರಸ್ತೆ ವಿಭಾಗದ ಡಿಆರ್‌ಎಂ ರಿಂಕೇಶ್ ರಾಯ್ ಎಲೆಕ್ಟ್ರಾನಿಕ್ ಸಿಗ್ನಲಿಂಗ್ ವ್ಯವಸ್ಥೆಯ ವಿರೂಪದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಇಡೀ ಅಪಘಾತದಲ್ಲಿ ಕ್ರಿಮಿನಲ್ ಆಯಾಮಗಳ ತನಿಖೆ ಬಗ್ಗೆ ರೈಲ್ವೆ ಮಂಡಳಿಯು ಸಿಬಿಐ ತನಿಖೆಗೆ ಭಾನುವಾರ ಶಿಫಾರಸು ಮಾಡಿದೆ. ಇಂದಿನಿಂದ ಸಿಬಿಐ ಅಧಿಕಾರಿಗಳು ತನಿಖೆಯ ಅಖಾಡಕ್ಕೆ ಇಳಿದಿದ್ದಾರೆ. ತನಿಖಾ ಅಧಿಕಾರಿಗಳ ಜೊತೆಗೆ ವಿಧಿವಿಜ್ಞಾನ ತಂಡವು ರೈಲು ಅಪಘಾತದ ಸ್ಥಳಕ್ಕೆ ತೆರಳಿತು. ಈ ವೇಳೆ ಸಿಗ್ನಲ್ ರೂಂ ಸಿಬ್ಬಂದಿಯೊಂದಿಗೆ ಮಾತನಾಡಿ, ವಿವಿಧ ಉಪಕರಣಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಸಿಬಿಐ ಹಾಗೂ ವಿಧಿವಿಜ್ಞಾನ ತಂಡ ಪಡೆಯಿತು.

ಅಪಘಾತ ಬಗ್ಗೆ ಜೂನ್ 3ರಂದು ಒಡಿಶಾ ಪೊಲೀಸರು ದಾಖಲಿಸಿಕೊಂಡ (ಬಾಲಸೋರ್ ಜಿಆರ್‌ಪಿ ಪ್ರಕರಣ ಸಂಖ್ಯೆ 64) ಪ್ರಾಥಮಿಕ ಮಾಹಿತಿ ವರದಿಯನ್ನು ಕೇಂದ್ರ ತನಿಖಾ ತಂಡ ತೆಗೆದುಕೊಂಡಿದೆ. ಸಿಬಿಐ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದೆ. ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಿದ್ದು, ಇದಕ್ಕೆ ರೈಲ್ವೆ ಇಲಾಖೆ ಪೂರ್ಣ ಸಹಕಾರ ನೀಡಲಿದೆ ಎಂದು ಆಗ್ನೇಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಚೌಧರಿ ಹೇಳಿದರು.

ಸೋಮವಾರ ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತ ಶೈಲೇಶ್ ಕುಮಾರ್ ಪಾಠಕ್ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಪಘಾತದ ಕುರಿತು ಜನರೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದರು. ಸಿಬಿಐ ಮತ್ತು ಸಿಸಿಆರ್‌ಎಸ್ ತನಿಖೆ ಪೂರ್ಣಗೊಂಡ ನಂತರ ಅಪಘಾತದ ಹಿಂದಿನ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಪ್ಪಿತಸ್ಥರಿಗೆ ಶಿಕ್ಷೆ ಎಷ್ಟು?: ರೈಲು ದುರಂತದ ತನಿಖೆಗೆ ಸಿಬಿಐ ಇಂದು ಮೊದಲ ಎಫ್‌ಐಆರ್ ದಾಖಲಿಸಿಕೊಂಡಿದೆ. ಐಪಿಸಿ ಸೆಕ್ಷನ್ 337, 338, 304 ಎ, ಮತ್ತು 34 ಮತ್ತು ರೈಲ್ವೆ ಕಾಯ್ದೆಯ ಸೆಕ್ಷನ್ 153, 154 ಮತ್ತು 175ರಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಎಲ್ಲ ಸೆಕ್ಷನ್‌ಗಳ ಪೈಕಿ ರೈಲ್ವೆ ಕಾಯ್ದೆಯ ಸೆಕ್ಷನ್ 153 ರಲ್ಲಿ ಗರಿಷ್ಠ ಐದು ವರ್ಷಗಳ ಶಿಕ್ಷೆ ಒದಗಿಸುತ್ತದೆ. ಆದರೆ ಇತರ ವಿಭಾಗಗಳು ಎರಡು ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಯ ನಿಬಂಧನೆಗಳನ್ನು ಹೊಂದಿವೆ.

ಇದನ್ನೂ ಓದಿ: ಅಪಘಾತ ಸಂತ್ರಸ್ತರಿಗೆ ರಿಲಯನ್ಸ್​ ಫೌಂಡೇಶನ್ ನೆರವು: 10 ಅಂಶಗಳ ಯೋಜನೆ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.