ETV Bharat / bharat

'ಒಸಿಐ ಕಾರ್ಡುದಾರರಿಗೆ ಮಿಷನರಿ, ಪತ್ರಿಕೋದ್ಯಮ ಚಟುವಟಿಕೆಗಳಿಗೆ ವಿಶೇಷ ಅನುಮತಿ ಕಡ್ಡಾಯ'

ಯಾವುದೇ ಸಂಶೋಧನಾ ಕಾರ್ಯ ಕೈಗೊಳ್ಳಬೇಕಾದರೆ, ನಿರ್ಬಂಧಿತ ಎಂದು ಗುರುತಿಸಲ್ಪಟ್ಟ ಪ್ರದೇಶಗಳಿಗೆ ಭೇಟಿ ನೀಡಲು, ಅನುಮತಿ ಬೇಕಾಗುತ್ತದೆ ಎಂದು ಗೃಹ ಇಲಾಖೆ ಹೇಳಿದೆ.

author img

By

Published : Mar 6, 2021, 4:58 AM IST

oci-need-special-permission-for-missionary-and-journalistic-activities-mha
'ಒಸಿಐ ಕಾರ್ಡುದಾರರಿಗೆ ಮಿಷನರಿ, ಪತ್ರಿಕೋದ್ಯಮ ಚಟುವಟಿಕೆಗಳಿಗೆ ವಿಶೇಷ ಅನುಮತಿ ಕಡ್ಡಾಯ'

ನವದೆಹಲಿ: ಸಾಗರೋತ್ತರ ಭಾರತೀಯ ಪೌರತ್ವ (ಒಐಸಿ) ಮಿಷನರಿ ಸಂಸ್ಥೆಗಳನ್ನು ನಡೆಸುವುದು, ತಬ್ಲಿಘಿಯಂಥಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಹಾಗೂ ಪತ್ರಿಕೋದ್ಯಮ ಚಟುವಟಿಕೆಗಳಲ್ಲಿ ಭಾಗಿಯಾಗಲು ವಿಶೇಷ ಅನುಮತಿ ಪಡೆಯಬೇಕೆಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಗುರುವಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಈ ಚಟುವಟಿಕೆಗಳನ್ನು ಕೈಗೊಳ್ಳಲು ಬಯಸುವ ಒಸಿಐ ಕಾರ್ಡ್‌ಗಳನ್ನು ಹೊಂದಿರುವವರಿಗೆ ವಿಶೇಷ ಅನುಮತಿ ಕಡ್ಡಾಯ ಎಂದು ಸೂಚನೆ ನೀಡಿದೆ.

ಇದನ್ನೂ ಓದಿ: ಮುತ್ತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ.ಜಾರ್ಜ್​ ಮುತ್ತೂಟ್ ಮೃತ

ಯಾವುದೇ ಸಂಶೋಧನಾ ಕಾರ್ಯ ಕೈಗೊಳ್ಳಬೇಕಾದರೆ, ನಿರ್ಬಂಧಿತ ಎಂದು ಗುರುತಿಸಲ್ಪಟ್ಟ ಪ್ರದೇಶಗಳಿಗೆ ಭೇಟಿ ನೀಡಲು, ಅನುಮತಿ ಬೇಕಾಗುತ್ತದೆ ಎಂದು ಗೃಹ ಇಲಾಖೆ ಹೇಳಿದೆ.

ಕಳೆದ ವರ್ಷ ಕೋವಿಡ್-19 ವೇಳೆ ತಬ್ಲಿಘಿ ಜಮಾತ್ ವಿಚಾರ ಮುನ್ನೆಲೆಗೆ ಬಂದಿದ್ದು, ಭದ್ರತಾ ವಿಚಾರದಲ್ಲಿ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು ಎಂಬುದು ಅರಿವಿಗೆ ಬಂದಿದ್ದು, ಅಂತಹ ಕಾರ್ಯಕ್ರಮಗಲ್ಲೂ ಭಾಗವಹಿಸುವವರಿಗೆ ವಿಶೇಷ ಅನುಮತಿ ಅಗತ್ಯವಿದೆ.

ಈ ಎಲ್ಲಾ ನಿಯಮಗಳು 2019ರ ನವೆಂಬರ್ 15ರಂದು ಪ್ರಕಟವಾದ ಅಧಿಸೂಚನೆಯ ಭಾಗವಾಗಿದ್ದು, ಎಲ್ಲವನ್ನೂ ಕ್ರೋಡಿಕರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.