ETV Bharat / bharat

CUET-UG 2022 ಪರೀಕ್ಷಾ ಫಲಿತಾಂಶ ಪ್ರಕಟ

author img

By

Published : Sep 16, 2022, 7:33 AM IST

ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶಕ್ಕಾಗಿ ನಡೆದ ಪರೀಕ್ಷೆಯ (ಸಿಯುಇಟಿ - ಯುಜಿ 2022) ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ.

ಫಲಿತಾಂಶ ಪ್ರಕಟ
result

ನವ ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಪದವಿ ಪೂರ್ವ) 2022 ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ವಿಶ್ವವಿದ್ಯಾನಿಲಯಗಳಿಗೆ ಪದವಿಪೂರ್ವ ಪ್ರವೇಶಕ್ಕಾಗಿ ಎನ್‌ಟಿಎಯು ಜುಲೈ 15 ರಿಂದ ಆಗಸ್ಟ್ 30 ರ ನಡುವೆ ಆರು ಹಂತಗಳಲ್ಲಿ (ಸಿಯುಇಟಿ-ಯುಜಿ) 2022 ಪರೀಕ್ಷೆ ನಡೆಸಿತ್ತು. ಪ್ರವೇಶ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಅಧಿಕೃತ CUET UG ವೆಬ್‌ಸೈಟ್ cuet.samarth.ac.in ನಲ್ಲಿ ಡೌನ್‌ಲೋಡ್ ಮಾಡಬಹುದು.

ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಅನ್ನು ದೇಶದ 259 ನಗರಗಳಲ್ಲಿ ಮತ್ತು 489 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಯನ್ನು ದೇಶದ 43 ಕೇಂದ್ರೀಯ ವಿಶ್ವವಿದ್ಯಾಲಯಗಳು, 13 ರಾಜ್ಯ ವಿಶ್ವವಿದ್ಯಾಲಯಗಳು, 12 ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು 18 ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಮಾಡಲಾಗಿದೆ.

ಇದನ್ನೂ ಓದಿ: ಸಿಇಟಿ ಬಿಕ್ಕಟ್ಟು: ಸರ್ಕಾರದ ಮೇಲ್ಮನವಿ ವಿಚಾರಣೆ ಮುಂದೂಡಿದ ಹೈಕೋರ್ಟ್

ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ 6 ನೇ ಹಂತದ ನಾಲ್ಕನೇ ಮತ್ತು ಕೊನೆಯ ದಿನ ಮಸ್ಕತ್, ರಿಯಾದ್, ದುಬೈ ಮತ್ತು ಶಾರ್ಜಾ ಸೇರಿದಂತೆ ಭಾರತದ 239 ನಗರಗಳಲ್ಲಿ 444 ಪರೀಕ್ಷಾ ಕೇಂದ್ರಗಳಲ್ಲಿ 1,40,559 ಅಭ್ಯರ್ಥಿಗಳಿಗೆ ಯಶಸ್ವಿಯಾಗಿ ನಡೆಸಲಾಯಿತು. ಸರಿಸುಮಾರು 14,90,000 ಅಭ್ಯರ್ಥಿಗಳಿಗೆ CUET UG ಅನ್ನು ನಿಗದಿಪಡಿಸಲಾಗಿತ್ತು. ಎನ್‌ಟಿಎ ಪ್ರಕಾರ, ಮೊದಲ ಸ್ಲಾಟ್‌ನಲ್ಲಿ 8,10,000 ಮತ್ತು ಎರಡನೇ ಸ್ಲಾಟ್‌ನಲ್ಲಿ 6,80,000 ಭಾಗವಹಿಸಿದ್ದರು.

ಇನ್ನು ತಾಂತ್ರಿಕ ಕಾರಣಗಳಿಂದ ಜಾರ್ಖಂಡ್​ನ ರಾಮಗಢ್​ನಲ್ಲಿರುವ ರಾಧಾ ಗೋವಿಂದ್ ವಿಶ್ವವಿದ್ಯಾನಿಲಯ ಕೇಂದ್ರದಲ್ಲಿ ಪರೀಕ್ಷೆಯನ್ನು ನಡೆಸಲಾಗಲಿಲ್ಲ. ಪರೀಕ್ಷೆಯಿಂದ ವಂಚಿತರಾದ 103 ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಎಕ್ಸಾಂ ನಡೆಸಲಾಗುವುದು ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಎಂ ಜಗದೇಶ್ ಕುಮಾರ್ ಗುರುವಾರ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.