ನವದೆಹಲಿ: ಭಾರತದ ಜಾವೆಲಿನ್ ಥ್ರೋ ಕ್ರೀಡಾಪಟು ಹಾಗೂ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇದೀಗ ಹೊಸ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕದೊಂದಿಗೆ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್ ಬಳಿಕ ನೀರಜ್ ಚೋಪ್ರಾ ಪಾಲ್ಗೊಂಡ ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ಇದಾಗಿದೆ. 2021, ಆಗಸ್ಟ್ 7ರಂದು ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ದೂರಕ್ಕೆ ಭರ್ಜಿ ಎಸೆದು ಐತಿಹಾಸಿಕ ಚಿನ್ನದ ಪದಕ ಸಂಪಾದಿಸಿದ್ದರು.
-
Olympic Champion Neeraj Chopra settles for a Silver Medal with a New National Record Throw of 89.30m at the Paavo Nurmi Games in Finland.@afi We can see several performance hikes in various events this season. Hope for more further. @Adille1 @Media_SAI @SPORTINGINDIAtw pic.twitter.com/cBLg4Ke8nh
— Athletics Federation of India (@afiindia) June 14, 2022 " class="align-text-top noRightClick twitterSection" data="
">Olympic Champion Neeraj Chopra settles for a Silver Medal with a New National Record Throw of 89.30m at the Paavo Nurmi Games in Finland.@afi We can see several performance hikes in various events this season. Hope for more further. @Adille1 @Media_SAI @SPORTINGINDIAtw pic.twitter.com/cBLg4Ke8nh
— Athletics Federation of India (@afiindia) June 14, 2022Olympic Champion Neeraj Chopra settles for a Silver Medal with a New National Record Throw of 89.30m at the Paavo Nurmi Games in Finland.@afi We can see several performance hikes in various events this season. Hope for more further. @Adille1 @Media_SAI @SPORTINGINDIAtw pic.twitter.com/cBLg4Ke8nh
— Athletics Federation of India (@afiindia) June 14, 2022
ಈ ಕ್ರೀಡಾಕೂಟದಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ನೀರಜ್ ದ್ವೀತಿಯ ಸ್ಥಾನ ಪಡೆದರೆ, ಓಲಿವರ್ ಹೆಲಂದರ್ 89.83 ಮೀ ದೂರಕ್ಕೆ ಭರ್ಜಿ ಎಸೆದು ಮೊದಲ ಸ್ಥಾನ ಪಡೆದರು. ಗ್ರೆನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ 86.60 ಮೀಟರ್ ದೂರಕ್ಕೆ ಭರ್ಜಿ ಎಸೆದು ಮೂರನೇ ಸ್ಥಾನ ಪಡೆದರು.
ಇದನ್ನೂ ಓದಿ: ಪ್ಯಾರಾ ಶೂಟಿಂಗ್ ವಿಶ್ವಕಪ್: ಮತ್ತೊಂದು ಚಿನ್ನದ ಪದಕ ಗೆದ್ದ ಅವನಿ ಲೇಖರಾ