ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)ನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ರಾಷ್ಟ್ರಾದ್ಯಂತ ಈ ನೇಮಕಾತಿ ನಡೆಯಲಿದ್ದು, ಗ್ರೇಡ್ ಎ ಮಟ್ಟದ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 150 ಹುದ್ದೆಗಳ ಭರ್ತಿ ನಡೆಯಲಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ವಿವರಗಳು ಇಲ್ಲಿದೆ.
ಹುದ್ದೆ ವಿವರ: ಒಟ್ಟು 150 ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಾಮಾನ್ಯಕ್ಕೆ 77, ಕಂಪ್ಯೂಟರ್/ ಇನ್ಫಾರ್ಮೆಷನ್ ಟೆಕ್ನಾಲಜಿ 40, ಫೈನಾನ್ಸ್ 15, ಕಂಪನಿ ಸೆಕ್ರೆಟರಿ 3, ಸಿವಿಲ್ ಇಂಜಿನಿಯರಿಂಗ್ 3, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ 3, ಜಿಯೋ ಇನ್ಫಾರ್ಮೆಟಿಕ್ಸ್ 2, ಅರಣ್ಯಶಾಸ್ತ್ರ 2, ಆಹಾರ ಸಂಸ್ಕರಣೆ 2, ಅಂಕಿ ಅಂಶ 2, ಮೀಡಿಯಾ ಸ್ಪೆಷಲಿಸ್ಟ್ 1 ಹುದ್ದೆಗಳನ್ನು ನಿಗದಿಸಲಾಗಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ಗರಿಷ್ಠ 30 ವರ್ಷಗಳ ವಯೋಮಿತಿ ಮೀರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 150 ರೂ. ಮತ್ತು ಇತರೆ ಅಭ್ಯರ್ಥಿಗಳು 800 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೂರು ಹಂತದ ಮೂಲಕ ಅಯ್ಕೆ ಮಾಡಲಾಗುವುದು. ಪ್ರಿಲಿಮನರಿ, ಮೇನ್ಸ್ ಮತ್ತು ಸಂದರ್ಶನವಾಗಿದೆ.
ವೇತನ: ಹುದ್ದೆಗೆ ಅನುಸಾರವಾಗಿ ಮಾಸಿಕ 44500-89150 ರೂ.ವರೆಗೆ ವೇತನ ನಿಗದಿಸಲಾಗಿದೆ. ಈ ಹುದ್ದೆಗೆ ಸೆಪ್ಟೆಂಬರ್ 2ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 23 ಆಗಿದೆ. ಅರ್ಜಿ ಸಲ್ಲಿಕೆಗೆ ಮುನ್ನ ನಬಾರ್ಡ್ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ, ಅರ್ಥೈಸಿಕೊಂಡು ಮುಂದುವರೆಯುವುದು ಅವಶ್ಯವಾಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ nabard.org ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: SSC Recruitment: 7547 ಕಾನ್ಸ್ಟೇಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ