ETV Bharat / bharat

700 ಕೋಟಿ ರೂ. ವೆಚ್ಚದಲ್ಲಿ 10 ಮಿಲಿಯನ್​​ ಸ್ಪುಟ್ನಿಕ್​ ಲಸಿಕೆ: ಬಿಡ್​​ ಪಡೆದ ಮುಂಬೈ ಮುನ್ಸಿಪಲ್​​​​ - ಸ್ಪುಟ್ನಿಕ್​ ವ್ಯಾಕ್ಸಿನ್​

ರಷ್ಯಾದಲ್ಲಿ ಅಭಿವೃದ್ಧಿಗೊಂಡಿರುವ ಸ್ಪುಟ್ನಿಕ್ ವಿ ಇದೀಗ ಭಾರತದಲ್ಲೂ ಉತ್ಪಾದನೆಯಾಗಲಿದ್ದು, ಅದಕ್ಕಾಗಿ ಹೈದರಾಬಾದ್​ನ ಡಾ. ರೆಡ್ಡೀಸ್ ಜೊತೆ ಒಪ್ಪಂದವಾಗಿದೆ. ಇದರ ಬೆನ್ನಲ್ಲೇ ಮುಂಬೈ 1 ಕೋಟಿ ವ್ಯಾಕ್ಸಿನ್​ಗೋಸ್ಕರ ಬಿಡ್​​ ಪಡೆದುಕೊಂಡಿದೆ.

Sputnik vaccines
Sputnik vaccines
author img

By

Published : May 19, 2021, 7:05 PM IST

ಮುಂಬೈ(ಮಹಾರಾಷ್ಟ್ರ): ವಾಣಿಜ್ಯ ನಗರಿ ಮುಂಬೈ 1 ಕೋಟಿ ಸ್ಪುಟ್ನಿಕ್​-ವಿ ಲಸಿಕೆ ಆಮದು ಮಾಡಿಕೊಳ್ಳಲು ಮುಂದಾಗಿದ್ದು, ಅದಕ್ಕಾಗಿ 700 ಕೋಟಿ ರೂ. ಬಿಡ್​​​ ಪಡೆದುಕೊಂಡಿದೆ.

ಮುಂದಿನ ಎರಡು ತಿಂಗಳೊಳಗೆ ಮುಂಬೈ ಪುರಸಭೆ 10 ಮಿಲಿಯನ್​​ ಸ್ಪುಟ್ನಿಕ್​ ಲಸಿಕೆ ಆಮದು ಮಾಡಿಕೊಳ್ಳಲು ಬಿಡ್​ ಪಡೆದುಕೊಂಡಿದೆ ಎಂದು ಮುನ್ಸಿಪಲ್​ ಕಮಿಷನರ್​​ ಇಕ್ಬಾಲ್​​ ಸಿಂಗ್​​ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಪೊಲೊ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಚಾಲನೆ: ಪ್ರತಿ ಡೋಸ್‌ಗೆ 1,250 ರೂ. ದರ ನಿಗದಿ

ವಿಶ್ವದ ಎರಡನೇ ಅತಿ ಹೆಚ್ಚು ಜನನಿಬಿಡ ನಗರವಾಗಿರುವ ಮುಂಬೈನ ಪ್ರತಿ ನಿವಾಸಿಗಳಿಗೆ ಲಸಿಕೆ ಹಾಕುವ ಮಹತ್ವಾಕಾಂಕ್ಷೆ ಯೋಜನೆ ಇಟ್ಟುಕೊಳ್ಳಲಾಗಿದ್ದು, ಮುಂದಿನ ಎರಡು ತಿಂಗಳೊಳಗೆ ಈ ವ್ಯಾಕ್ಸಿನ್​ ಬರುವ ಸಾಧ್ಯತೆ ಇದೆ. ಕೋವಿಡ್ ಸೋಂಕು ನಿಭಾಯಿಸಲು ರಚಿಸಲಾಗಿರುವ ತಾತ್ಕಾಲಿಕ ಆಸ್ಪತ್ರೆ ನಡೆಸಲು 8 ಶತಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದ್ದು, ಮೂರನೇ ಅಲೆ ತಪ್ಪಿಸಲು ಎಲ್ಲರಿಗೂ ವೇಗವಾಗಿ ವ್ಯಾಕ್ಸಿನೇಷನ್​ ನೀಡಲಾಗುವುದು ಎಂದಿದ್ದಾರೆ.

ಮುಂಬೈನಲ್ಲಿ ವಾಸವಾಗಿರುವ 18-45 ವರ್ಷದೊಳಗಿನವರಿಗೆ ಲಸಿಕೆ ನೀಡಲು 10 ಮಿಲಿಯನ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ನೀಡಲು 5 ಮಿಲಿಯನ್​ ಲಸಿಕೆಗಳ ಅವಶ್ಯಕತೆ ಇದೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ಎರಡನೇ ಅಲೆ ಹೆಚ್ಚಾಗಿ ಮುಂಬೈನಲ್ಲಿ ಹಬ್ಬಿದ್ದು, ಕಠಿಣ ಲಾಕ್​ಡೌನ್ ಜಾರಿಗೊಳಿಸಿರುವ ಕಾರಣ ಕಳೆದ ಕೆಲ ದಿನಗಳಿಂದ ಸೋಂಕಿತ ಪ್ರಕರಣ ಅಷ್ಟೊಂದು ಕಂಡು ಬರುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.