ETV Bharat / bharat

ತಂತ್ರ ವಿದ್ಯೆ.. ದೇವಿ ಮೂರ್ತಿ ಮುಂದೆ 4 ತಿಂಗಳ ಮಗು ಬಲಿ ಕೊಟ್ಟ ಅಮ್ಮ! - ತಂತ್ರ ವಿದ್ಯೆಯಲ್ಲಿ ಇಚ್ಛೆ ಈಡೇರಿಕೆ

ನಾಲ್ಕು ತಿಂಗಳ ಮಗುವನ್ನು ಬಲಿ ಕೊಟ್ಟ ತಾಯಿ - ತಂತ್ರ ವಿದ್ಯೆಯಲ್ಲಿ ಇಚ್ಛೆ ಈಡೇರಿಕೆಗಾಗಿ ಮಹಿಳೆಯ ಕೃತ್ಯ - ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಬೆಬ್ಬಿಬೀಳಿಸುವ ಕೃತ್ಯ ಮೂರ್ತಿ

mother-killed-her-four-months-old-child-by-chopping-shovels-in-uttar-pradesh
ದೇವಿ ಮೂರ್ತಿ ಮುಂದೆ 4 ತಿಂಗಳ ಮಗು ಬಲಿ ಕೊಟ್ಟ ಅಮ್ಮ!
author img

By

Published : Jan 8, 2023, 8:05 PM IST

ಸುಲ್ತಾನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ, ಅಮಾನುಷ ಘಟನೆ ಬೆಳಕಿಗೆ ಬಂದಿದೆ. ತಂತ್ರ ವಿದ್ಯೆ ವಿಚಾರದಲ್ಲಿ ತನ್ನ ಆಸೆ ಪೂರೈಸಿಕೊಳ್ಳಲು ಮಹಿಳೆಯೊಬ್ಬರು ತಾನೇ ಹೆತ್ತ, ಕೇವಲ ನಾಲ್ಕು ತಿಂಗಳ ಮಗುವನ್ನು ಬಲಿ ಕೊಟ್ಟಿದ್ದಾರೆ. ದೇವಿಯ ಮೂರ್ತಿ ಮುಂದೆಯೇ ತನ್ನ ಪುಟ್ಟ ಮಗವನ್ನು ಪಾಪಿ ತಾಯಿ ಸಲಿಕೆಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ತಂತ್ರ-ಮಂತ್ರ ವಿದ್ಯೆಯ ಮೂಢನಂಬಿಕೆಗೆ ಕಟ್ಟುಬಿದ್ದು, ಈ ಮಹಿಳೆ ಎಸಗಿರುವ ಘಟನೆಯು ಜನರನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: ಮಾನವೀಯತೆ ಮರೆತ ಪತಿ: ಪತ್ನಿ ಮೇಲೆ ಸ್ಕ್ರೂ ಡ್ರೈವರ್‌ನಿಂದ ಹಲ್ಲೆ, ಮೂಗನ್ನೂ ಕಚ್ಚಿದ!

ಸುಲ್ತಾನ್‌ಪುರ ಜಿಲ್ಲೆಯ ಗೋಸೈಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಧನೌದಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಈ ಅಮಾನುಷ ಘಟನೆ ಜರುಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಈಗಾಗಲೇ ಆರೋಪಿ ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಂಪೂರ್ಣ ತನಿಖೆಯ ನಂತರ ಇತರ ಆರೋಪಿಗಳನ್ನು ಪತ್ತೆ ಹಚ್ಚಿ, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೋಮೆನ್ ವರ್ಮಾ ತಿಳಿಸಿದ್ದಾರೆ.

ತಂತ್ರ ವಿದ್ಯೆಯಲ್ಲಿ ತೊಡಗಿದ್ದ ಮಹಿಳೆ: ಚಿಕ್ಕ ಕಂದಮ್ಮನನ್ನು ಬಲಿಕೊಟ್ಟ ಪಾಪಿ ತಾಯಿಯನ್ನು ಮಂಜುದೇವಿ ಎಂದು ಗುರುತಿಸಲಾಗಿದೆ. ಪತಿ ಶಿವಕುಮಾರ್ ಕೂಲಿ ಕೆಲಸಕ್ಕಾಗಿ ಕಾನ್ಪುರಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ನಾಲ್ಕು ತಿಂಗಳ ಪ್ರೀತಮ್‌ ಎಂಬ ಮಗುವೇ ತಾಯಿ ಕೈಯಿಂದ ಹತ್ಯೆಯಾದ ನತದೃಷ್ಟ ಎಂದು ಹೇಳಲಾಗಿದೆ. ಬಹಳ ದಿನಗಳಿಂದ ಮಾಟ, ಮಂತ್ರ ಮತ್ತು ತಂತ್ರ ವಿದ್ಯೆಯಲ್ಲಿ ಮಂಜುದೇವಿ ತೊಡಗಿಸಿಕೊಂಡಿದ್ದರು. ಇದೇ ವಿದ್ಯೆಯಲ್ಲಿ ತನ್ನ ಆಸೆಯನ್ನು ಪೂರೈಸಿಕೊಳ್ಳಬೇಕಾದರೆ ತಂತ್ರಿಯೊಬ್ಬರು ತನ್ನ ಮಗುವನ್ನು ತ್ಯಾಗ ಮಾಡುವಂತೆ ಹೇಳಿದ್ದ ಎಂಬುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಪ್ರತಿಮೆ ಮುಂದೆ ಮಗು ಬಲಿ: ತಂತ್ರ ವಿದ್ಯೆಯಲ್ಲಿ ತನ್ನ ಇಚ್ಛೆ ಈಡೇರಿಸಿಕೊಳ್ಳಬೇಕಾದರೆ ನರಬಲಿ ಕೊಡುವಂತೆ ಹೇಳಿದ ಮಾತು ನಂಬಿಯೇ ಮಂಜುದೇವಿ ಈ ಕೃತ್ಯ ಎಸಗಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಗ್ರಾಮದ ದೇವಿಯ ಪ್ರತಿಮೆ ಎದುರು ಮಂಜುದೇವಿ ತನ್ನ ಮಗ, ನಾಲ್ಕು ತಿಂಗಳ ಪ್ರೀತಮ್‌ನನ್ನು ಸಲಿಕೆಯಿಂದ ಕತ್ತರಿಸಿ ಬಲಿ ನೀಡಿದ್ದಾರೆ. ಈ ಮಹಿಳೆ ವಿಕೃತಿಯನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಗ ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ: ಹೆತ್ತ ಕಂದಮ್ಮಗಳನ್ನು ಬಾವಿಗೆ ತಳ್ಳಿ ವ್ಯಕ್ತಿ ಆತ್ಮಹತ್ಯೆ!

ಮಗುವಿನ ಹತ್ಯೆ ಘಟನೆ ಸಂಬಂಧಿಸಿದಂತೆ ಆರೋಪಿ ಮಂಜುದೇವಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕೃತ್ಯದಲ್ಲಿ ಮಂಜುದೇವಿಯೊಂದಿಗೆ ಬೇರೆ ಯಾರಾದರೂ ಭಾಗಿಯಾಗಿದ್ದರಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇಡೀ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಗೋಸೈಗಂಜ್ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ರಾಘವೇಂದ್ರ ರಾವತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ದೇವಾಲಯದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಿ ಧರ್ಮದರ್ಶಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.