ಲಖನೌ(ಉತ್ತರಪ್ರದೇಶ) : 43 ವರ್ಷಗಳ ಹಿಂದೆ ಅಂದರೆ 1980 ರಲ್ಲಿ ನಡೆದ ಮೊರಾದಾಬಾದ್ ಗಲಭೆಯಲ್ಲಿ 80 ಕ್ಕೂ ಅಧಿಕ ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ನನೆಗುದಿಗೆ ಬಿದ್ದಿದ್ದ ಸಂಘರ್ಷಕ್ಕೆ ಸಂಬಂಧಿಸಿದ ವರದಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಸದನದಲ್ಲಿ ಮಂಡಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ.
-
#WATCH | Deputy CM of UP, Keshav Prasad Maurya speaks on the 1980 Moradabad Riots report; says, “This report was hidden and it needs to be presented. This will help the citizens know the truth about the Moradabad Riots...One should welcome this report as it will bring out who… pic.twitter.com/yL8tRHUBDk
— ANI UP/Uttarakhand (@ANINewsUP) August 8, 2023 " class="align-text-top noRightClick twitterSection" data="
">#WATCH | Deputy CM of UP, Keshav Prasad Maurya speaks on the 1980 Moradabad Riots report; says, “This report was hidden and it needs to be presented. This will help the citizens know the truth about the Moradabad Riots...One should welcome this report as it will bring out who… pic.twitter.com/yL8tRHUBDk
— ANI UP/Uttarakhand (@ANINewsUP) August 8, 2023#WATCH | Deputy CM of UP, Keshav Prasad Maurya speaks on the 1980 Moradabad Riots report; says, “This report was hidden and it needs to be presented. This will help the citizens know the truth about the Moradabad Riots...One should welcome this report as it will bring out who… pic.twitter.com/yL8tRHUBDk
— ANI UP/Uttarakhand (@ANINewsUP) August 8, 2023
ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಅವರು ಮೊರಾದಾಬಾದ್ ಗಲಭೆಗೆ ಸಂಬಂಧಿಸಿದ ವರದಿಯನ್ನು ಸದನದಲ್ಲಿ ಮಂಡಿಸಿದರು. ಗಲಭೆ ನಡೆದು 43 ವರ್ಷ ಕಳೆದರೂ ಈ ಬಗ್ಗೆ ಯಾವುದೇ ಸರ್ಕಾರಗಳು ಕ್ರಮಕ್ಕೆ ಮುಂದಾಗಿರಲಿಲ್ಲ. ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಘಟನೆಯ ಮೇಲೆ ಬೆಳಕು ಚೆಲ್ಲಿದೆ.
ಮೂಲಗಳ ಪ್ರಕಾರ, ಮುಸ್ಲಿಂ ಲೀಗ್‌ನ ನಾಯಕನನ್ನು ಗಲಭೆಯಲ್ಲಿ ಪ್ರಾಥಮಿಕವಾಗಿ ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇದೆ. ಇದೇ ವೇಳೆ, ಗಲಭೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದ ಪೊಲೀಸರಿಗೆ ಪ್ರಕರಣದಲ್ಲಿ ಕ್ಲೀನ್ಚಿಟ್ ನೀಡಲಾಗಿದೆ ಎಂದು ತಿಳಿದುಬಂದಿದೆ. ವರದಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿಕೆ ನೀಡಿದ್ದು, ಮೊರಾದಾಬಾದ್ ಗಲಭೆಯ ವರದಿಯನ್ನು ಮಂಡಿಸಲಾಗಿದೆ. ಅಂದು ನಡೆದ ಹಾನಿಯ ಬಗ್ಗೆ ಈಗಲಾದರೂ ಜನರಿಗೆ ತಿಳಿಯಬೇಕು ಎಂದು ಹೇಳಿದರು.
ಸರ್ಕಾರ ಗಲಭೆಯ ವರದಿಯನ್ನು ಸದನದಲ್ಲಿ ಮಂಡಿಸಿದೆ. ಮೊರಾದಾಬಾದ್ ಗಲಭೆಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಅವಕಾಶ ರಾಜ್ಯ ಹಾಗೂ ದೇಶದ ಜನತೆಗೆ ಸಿಗಲಿದೆ. ಗಲಭೆ ಬಳಿಕ 15 ಮುಖ್ಯಮಂತ್ರಿಗಳು ಬದಲಾದರು. ಅವರು ಈ ಬಗ್ಗೆ ಚಕಾರವೇ ಎತ್ತಿಲ್ಲ. ಈ ಕುರಿತು ಅವರನ್ನು ಮೊದಲು ಪ್ರಶ್ನಿಸಬೇಕಿದೆ. ಯೋಗಿ ಸರ್ಕಾರದ ನಡೆ ಸ್ವಾಗತಾರ್ಹವಾಗಿದೆ. ಸತ್ಯ ಹೊರಬರಬೇಕಿದೆ ಎಂದರು.
ಗಲಭೆ ಮಾಡಿದವರು, ಅವರನ್ನು ರಕ್ಷಿಸಿದವರು ಯಾರು ಎಂಬುದನ್ನು ವರದಿ ಹೊಂದಿದೆ. ಗಲಭೆಕೋರರ ವಿರುದ್ಧ ಕ್ರಮವೇನು. ಇದರ ಹಿಂದಿನ ಮರ್ಮವೇನು ಎಂಬ ಸತ್ಯ ಹೊರಬರಬೇಕಿದೆ ಎಂದು ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ವರದಿಯಿಂದ ಬಿಸಿಯೇರಿದ ಸದನ: ಮೊರಾದಾಬಾದ್‌ನಲ್ಲಿ ನಡೆದ ಗಲಭೆಯ ವರದಿಯ ಮಂಡನೆ ಬಳಿಕ ಮಳೆಗಾಲದ ಅಧಿವೇಶನದಲ್ಲಿ ಬಿಸಿ ಸೃಷ್ಟಿಸಿದೆ. ಮಂಗಳವಾರ ನಡೆದ ಕಲಾಪದಲ್ಲಿ ಈ ವರದಿಯನ್ನು ಮಂಡಿಸಲಾಯಿತು. ಈ ವರದಿಯಲ್ಲಿ ಯುಪಿ ಪೊಲೀಸರಿಗೆ ಕ್ಲೀನ್ ಚಿಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ 1980 ರ ಆಗಸ್ಟ್‌ನಲ್ಲಿ ಈ ಘಟನೆ ನಡೆದಿತ್ತು. ಅದರ ವರದಿಯನ್ನುಆಗಸ್ಟ್‌ನಲ್ಲಿಯೇ ಮಂಡಿಸಲಾಗಿದೆ.
15 ಸಿಎಂಗಳು ಬದಲಿ: ಗಲಭೆಯ ಬಳಿಕ ರಾಜ್ಯದಲ್ಲಿ 15 ಸಿಎಂಗಳು ಬದಲಾಗಿದ್ಧಾರೆ. ಆದರೆ, ಯಾರೊಬ್ಬರೂ ಈ ಕುರಿತ ವರದಿ ಬಿಡುಗಡೆಗೆ ಮುಂದಾಗಿರಲಿಲ್ಲ. ಈದ್ ಪ್ರಾರ್ಥನೆಯ ನಂತರ ಎರಡು ಗುಂಪುಗಳ ಮಧ್ಯೆ ಗಲಭೆ ನಡೆದು 83 ಜನರ ಸಾವು, ನೋವಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಅಸ್ಸೋಂ ರೈಫಲ್ಸ್‌ನ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ: ಸೇನೆ