ರಾಂಚಿ(ಜಾರ್ಖಂಡ್): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಜಾರ್ಖಂಡ್ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್(ಐಎಎಸ್ ಅಧಿಕಾರಿ)ರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಇವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಸಿಂಘಾಲ್ರನ್ನು 5 ದಿನ ಇಡಿ ವಶಕ್ಕೆ ಪಡೆದಿದೆ.
ಮನರೇಗಾ ಯೋಜನೆಯ ಅನುದಾನವನ್ನು ದರ್ಬಳಕೆ ಮಾಡಿಕೊಂಡಿರುವ ಸಿಂಘಾಲ್ ಹಾಗೂ ಆಕೆಯ ಪತಿ ಅಭಿಷೇಕ್ ಝಾ ಖಾಸಗಿ ಆಸ್ಪತ್ರೆ ನಿರ್ಮಾಣಕ್ಕೆ ಈ ಹಣವನ್ನು ವಿನಿಯೋಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ವಾಟ್ಸ್ಆ್ಯಪ್ ಚಾಟ್ಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಸಿಂಘಾಲ್ ಅವರ ಪತಿ ಅಭಿಷೇಕ್ ಝಾ ಅವರ ಒಡೆತನದಲ್ಲಿ ನಿರ್ಮಾಣವಾಗುತ್ತಿರುವ ಪಲ್ಸ್ ಖಾಸಗಿ ಆಸ್ಪತ್ರೆಗಾಗಿ ಜಮೀನು ಖರೀದಿಸಲು ಸರೋಗಿ ಬಿಲ್ಡರ್ಸ್ ಮತ್ತು ಪ್ರಮೋಟರ್ಸ್ ಲಿಮಿಟೆಡ್‌ಗೆ ಭಾರಿ ಮೊತ್ತವನ್ನು ಪಾವತಿಸಿರುವುದು ಸಿಂಘಾಲ್ ಅವರ ಫೋನ್‌ನ ವಾಟ್ಸ್ಆ್ಯಪ್ ಸಂಭಾಷಣೆಗಳಿಂದ ತಿಳಿದುಬಂದಿದೆ. ಸರೋಗಿ ಬಿಲ್ಡರ್ಸ್‌ಗೆ ಚೆಕ್, ಆರ್‌ಟಿಜಿಎಸ್, ನಗದು ಮೂಲಕ ಎಷ್ಟು ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಇಡಿ ಸಂಗ್ರಹಿಸುತ್ತಿದೆ.
ಕೋಲ್ಕತ್ತಾದಿಂದ ಸಿಂಘಾಲ್ ಪತಿ ಅಭಿಷೇಕ್ ಝಾ ಸಿಎಸ್‌ಎಸ್‌ಡಿ ಯಂತ್ರವನ್ನು ಖರೀದಿಸಿದ್ದಾರೆ. ಅದಕ್ಕಾಗಿ ನಕಲಿ ಬಿಲ್ ತಯಾರಿಸಿದೆ. ಆಸ್ಪತ್ರೆ ನಿರ್ಮಾಣದ ವೇಳೆ ಸಿಂಘಾಲ್ ಮತ್ತು ಅಭಿಷೇಕ್ ಝಾ ಅವರಿಂದ ಹಲವು ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.
ಸಹೋದರರ ಖಾತೆಯೂ ಬಳಕೆ: ಇನ್ನು ಭಾರಿ ಪ್ರಮಾಣದ ಹಣವನ್ನು ವರ್ಗಾಯಿಸಲು ಸಿಂಘಾಲ್ ತಮ್ಮ ಸಹೋದರರು ಸೇರಿದಂತೆ 13 ಇತರರ ಖಾತೆಗಳನ್ನೂ ಬಳಸಿಕೊಂಡಿದ್ದಾರೆ. ಎಲ್ಲರಿಗೂ ಪ್ರತ್ಯೇಕವಾಗಿ ಸಮನ್ಸ್ ಜಾರಿ ಮಾಡಲಾಗಿದೆ.
ಓದಿ: ಇದೇ ವಾರ ನೂತನ ಕ್ಯಾಬಿನೆಟ್, ಹೊಸ ಪ್ರಧಾನಿ ನೇಮಕ: ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ಭರವಸೆ