ETV Bharat / bharat

ನಿತೀಶ್ ಸರ್ಕಾರದ ಮೊದಲ ಅಧಿವೇಶನ ಆರಂಭ: ವಿಂಟೇಜ್ ಕಾರ್​​ನಲ್ಲಿ ಆಗಮಿಸಿದ ಜೆಡಿಯು ನಾಯಕರು - ಸಿಎಂ ನಿತೀಶ್ ಕುಮಾರ್

ಬಿಹಾರ ಸರ್ಕಾರದ ಮೊದಲ ಅಧಿವೇಶನ ಇಂದು ಆರಂಭವಾಗಿದೆ. ಮೊದಲ ದಿನದ ವಿಶೇಷ ಎಂಬಂತೆ ಜೆಡಿಯು ನಾಯಕರಾದ ಸಂಜಯ್ ಕುಮಾರ್ ಝಾ ಮತ್ತು ದೇವೇಶ್ ಚಂದ್ರ ಠಾಕೂರ್ ವಿಂಟೇಜ್ ಕಾರಿನಲ್ಲಿ ಸದನಕ್ಕೆ ವಿಭಿನ್ನವಾಗಿ ಆಗಮಿಸಿ ಗಮನಸೆಳೆದರು.

mlcs-sanjay-kumar-jha-and-devesh-chandra-cames-in-vintage-car
ನಿತೀಶ್ ಸರ್ಕಾರದ ಮೊದಲ ಅಧಿವೇಶನ ಆರಂಭ
author img

By

Published : Nov 23, 2020, 1:20 PM IST

Updated : Nov 23, 2020, 1:57 PM IST

ಪಾಟ್ನಾ (ಬಿಹಾರ): ಬಿಹಾರ ಫಲಿತಾಂಶ ಹೊರಬಿದ್ದು, ಮತ್ತೆ ಸಿಎಂ ಗದ್ದಿಗೆ ಏರಿರುವ ಎನ್​​ಡಿಎ ಬೆಂಬಲಿತ ನಿತೀಶ್ ಕುಮಾರ್ ಸರ್ಕಾರದ ಮೊದಲ ಅಧಿವೇಶನ ಇಂದು ಆರಂಭಗೊಂಡಿದೆ.

ಜೆಡಿಯುನ ಸಂಜಯ್ ಕುಮಾರ್ ಝಾ ಮತ್ತು ದೇವೇಶ್ ಚಂದ್ರ ಠಾಕೂರ್ ಅವರು ಅಧಿವೇಶನದ ಮೊದಲ ದಿನದಂದು ವಿಧಾನಸಭೆಗೆ ವಿಂಟೇಜ್ ಕಾರಿನಲ್ಲಿ ಆಗಮಿಸಿದ್ದಾರೆ. ಬಿಹಾರವನ್ನು ಮಾಲಿನ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ಸಿಎಂ ನಿರ್ಧರಿಸಿದ್ದಾರೆ. ನಾವು ಈ ನಿರ್ಣಯಕ್ಕೆ ಬೆಂಬಲವಾಗಿ ಈ ರೀತಿ ವಿಂಟೇಜ್ ಕಾರಿನಲ್ಲಿ ಬಂದಿದ್ದೇವೆ ಎಂದು ಸಿ.ದೇವೇಶ್ ಠಾಕೂರ್ ತಿಳಿಸಿದ್ದಾರೆ.

ವಿಂಟೇಜ್ ಕಾರ್​​ನಲ್ಲಿ ಆಗಮಿಸಿದ ಜೆಡಿಯು ನಾಯಕರು

ಇವರಲ್ಲದೆ ವಿಧಾನ ಸಭೆಯ ಮುಂಭಾಗ ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ತೇಜ್ ಪ್ರತಾಪ್​ ಯಾದವ್​​​​​ ಕಾಣಿಸಿಕೊಂಡಿದ್ದಾರೆ. 5 ದಿನಗಳ ವರೆಗೆ ನಡೆಯಲಿರುವ ಅಧಿವೇಶನಕ್ಕೆ ವಿರೋಧ ಪಕ್ಷ ನಾಯಕರು ಹಾಜರಾಗಿದ್ದಾರೆ.

tejaswi yadav, tej prathap yadav
ವಿಧಾನ ಸಭೆಯ ಮುಂಭಾಗ ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್​

ಯುವತಿಯೋರ್ವಳ ಸಜೀವ ದಹನ ಪ್ರಕರಣ ಸಂಬಂಧ ಸದನದ ಹೊರಭಾಗದಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು. ಇಲ್ಲಿನ ವೈಶಾಲಿ ಜಿಲ್ಲೆಯಲ್ಲಿ ತಿಂಗಳ ಆರಂಭದಲ್ಲಿ 20 ವರ್ಷದ ಯುವತಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಡಲಾಗಿತ್ತು.

congres protest
ಕಾಂಗ್ರೆಸ್ ಶಾಸಕರ ಪ್ರತಿಭಟನೆ

Last Updated : Nov 23, 2020, 1:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.