ಅಂಬಿಕಾಪುರ, ಛತ್ತೀಸ್ಗಢ : ಇತ್ತೀಚೆಗಷ್ಟೇ ತ್ಯಾಜ್ಯ ಮುಕ್ತವಾಗುವತ್ತ ದಿಟ್ಟ ಹೆಜ್ಜೆ ಇಟ್ಟು ಪ್ರಖ್ಯಾತಿಯಾಗಿದ್ದ ಛತ್ತೀಸ್ಗಢದ ಅಂಬಿಕಾಪುರ ನಗರಸಭೆ ಈಗ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.
ಸರ್ಕಾರಿ ಜಮೀನಿನಲ್ಲಿ ಔಷಧೀಯ ಗುಣವುಳ್ಳ ಲೆಮನ್ ಗ್ರಾಸ್ ಅನ್ನು ಬೆಳೆಯಲು ಮುಂದಾಗಿದೆ. ಇದನ್ನು ಸಿಟ್ರೋನೆಲ್ಲಾ, ಮಲಬಾರ್ ಹುಲ್ಲು ಎಂದು ಹಲವು ಹೆಸರುಗಳಿಂದ ಕರೆಯಲಾಗುತ್ತದೆ.
ಅಂಬಿಕಾಪುರ ನಗರಸಭೆಯ ಈ ಕ್ರಮದಿಂದ ತ್ಯಾಜ್ಯದಿಂದ ಕೂಡಿರುತ್ತಿದ್ದ ರೋಗಗಳನ್ನು ಹರಡಲು ಕಾರಣವಾಗುತ್ತಿದ್ದ ಜಮೀನು ಈಗ ಔಷಧೀಯ ಗುಣಗಳನ್ನು ಹೊಂದಿರುವ ಲೆಮನ್ ಗ್ರಾಸ್ ಅನ್ನು ಬೆಳೆಯುತ್ತಿದ್ದು, ಸ್ವಚ್ಛ ಪ್ರದೇಶವಾಗಿ ಮಾರ್ಪಟ್ಟಿದೆ.
ಉದ್ಯಾನವನವಾಗಿ ಮಾರ್ಪಟ್ಟ ಖಾಲಿ ಜಮೀನು
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ತ್ಯಾಜ್ಯವನ್ನು ಹಾಕಲಾಗುತ್ತಿದ್ದ ಸುಮಾರು 16 ಎಕರೆ ಜಮೀನನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪ್ರದೇಶ ಈಗ ಸುಂದರ ಉದ್ಯಾನವನವಾಗಿ ಮಾರ್ಪಟ್ಟಿದೆ. ಪಾಲಿಕೆಯ ಉದ್ಯಾನವನ ಇರುವ ಸ್ಥಳದಲ್ಲೇ ಈ ಲೆಮನ್ ಗ್ರಾಸ್ ಬೆಳೆಯುತ್ತಿರುವ ಕಾರಣದಿಂದ ಆಕರ್ಷಕವಾಗಿ ಕಾಣಿಸುತ್ತಿದೆ. ಈ ಕಾರ್ಯದಿಂದಾಗಿ ಅಂಬಿಕಾಪುರಕ್ಕೆ ಸಾಕಷ್ಟು ಲಾಭವಾಗಲಿದೆ.
ಅಂಬಿಕಾಪುರಕ್ಕೆ ಆದಾಯ ಹೇಗೆ?
ಲೆಮನ್ ಗ್ರಾಸ್ನಿಂದ ತೈಲವನ್ನ ಹೊರತೆಗೆಯಲಾಗುತ್ತದೆ. ಇಲ್ಲಿ ಎಣ್ಣೆ ತೆಗೆಯುವ ಘಟಕವನ್ನೂ ಸ್ಥಾಪನೆ ಮಾಡಲಾಗಿದೆ. ಸದ್ಯಕ್ಕೆ ಈ ಎಣ್ಣೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿಲ್ಲ. ತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಈ ಎಣ್ಣೆಯನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುವ ಉದ್ದೇಶವಿದೆ.
ಲೆಮನ್ ಗ್ರಾಸ್ನಲ್ಲಿರುವ ಔಷಧೀಯ ಗುಣಗಳು
ಲೆಮನ್ ಗ್ರಾಸ್ನಿಂದ ತೆಗೆದ ಎಣ್ಣೆಯು ಔಷಧೀಯ ಗುಣಗಳನ್ನು ಹೊಂದಿದೆ. ಈ ಎಣ್ಣೆಯು ವಿಟಮಿನ್ ಇ ಅನ್ನು ಹೊಂದಿದೆ. ಇದನ್ನು ಕಣ್ಣಿನ ಔಷಧಿಗಳಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲ, ಸುಗಂಧ ದ್ರವ್ಯಗಳು, ಅಗರಬತ್ತಿಗಳು, ಸೊಳ್ಳೆ ನಿವಾರಕ ವಸ್ತುಗಳಲ್ಲೂ ಇದನ್ನು ಬಳಲಾಗುತ್ತದೆ. ವಿವಿಧ ಸೋಪುಗಳಲ್ಲೂ ಈ ಎಣ್ಣೆಯನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಗುಟ್ಕಾ ವ್ಯಾಪಾರಿ ನಿವಾಸದ ಮೇಲೆ ಜಿಎಸ್ಟಿ ಅಧಿಕಾರಿಗಳಿಂದ ದಾಳಿ