ETV Bharat / bharat

ಕೇರಳದಿಂದ ಆಗಮಿಸುವ ಪ್ರತಿಭಾನ್ವಿತ ಬಾಕ್ಸರ್‌ಗಳಿಗೆ ಉಚಿತ ತರಬೇತಿ: ಮೇರಿ ಕೋಮ್

author img

By

Published : May 1, 2022, 10:03 AM IST

ಕೇರಳದಿಂದ ಆಗಮಿಸುವ ಪ್ರತಿಭಾನ್ವಿತ ಬಾಕ್ಸರ್‌ಗಳಿಗೆ ಉಚಿತ ತರಬೇತಿ ನೀಡುವುದಾಗಿ ಭಾರತೀಯ ಮಹಿಳಾ ಬಾಕ್ಸರ್ ಮೇರಿ ಕೋಮ್ ಘೋಷಿಸಿದ್ದಾರೆ. ಕೇರಳ ಒಲಿಂಪಿಕ್ ಅಸೋಸಿಯೇಷನ್ ಅಯೋಜಿಸಿದ್ದ ಕೇರಳ ಗೇಮ್ಸ್ 2022 ಉದ್ಘಾಟನೆಗೆ ಅವರು ಆಗಮಿಸಿದ್ದರು.

mary-kom-welcomes-young-boxing-talents-from-kerala-to-her-academy
ಕೇರಳದಿಂದ ಆಗಮಿಸುವ ಪ್ರತಿಭಾನ್ವಿತ ಬಾಕ್ಸರ್ ಗಳಿಗೆ ಉಚಿತ ತರಬೇತಿ : ಮೇರಿ ಕೋಮ್

ತಿರುವನಂತಪುರಂ (ಕೇರಳ) : ಕೇರಳ ಒಲಿಂಪಿಕ್ ಅಸೋಸಿಯೇಷನ್ ಭಾರತೀಯ ಮಹಿಳಾ ಬಾಕ್ಸರ್ ಎಮ್.ಸಿ.ಮೇರಿ ಕೋಮ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ವಿತ್ತಮಂತ್ರಿ ಕೆ.ಎನ್.ಬಾಲಗೋಪಾಲ್ ಪ್ರಶಸ್ತಿ ಪ್ರದಾನ ಮಾಡಿದರು.

2020ರ ಟೋಕಿಯೋ ಒಲಿಂಪಿಕ್‌ನಲ್ಲಿ ಪದಕ ಗೆದ್ದ ಪಿ.ಆರ್.ಶ್ರೀಜೇಶ್, ರವಿಕುಮಾರ್ ದಹಿಯಾ, ಭಜರಂಗ್ ಪೂನಿಯಾ ಅವರಿಗೂ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗಿದೆ. 10 ದಿನಗಳ ಕಾಲ ನಡೆಯುವ ಕೇರಳ ಗೇಮ್ಸ್ ಮೇ 1ಆರಂಭಗೊಂಡು ಮೇ 10 ಸಮಾರೋಪಗೊಳ್ಳಲಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮೇರಿ ಕೋಮ್‌, ಕೇರಳದಿಂದ ಬರುವ ಪ್ರತಿಭಾನ್ವಿತ ಬಾಕ್ಸರ್ಸ್‌ಗೆ ತಮ್ಮ ಬಾಕ್ಸಿಂಗ್ ಅಕಾಡೆಮಿಯಲ್ಲಿ ಉಚಿತ ತರಬೇತಿ ನೀಡುವುದಾಗಿ ಹೇಳಿದರು. ಕೇರಳವು ಹಲವು ಬಾಕ್ಸರ್‌ಗಳನ್ನು ದೇಶಕ್ಕೆ ನೀಡಿತ್ತು. ಆದರೆ ಇಂದು ಉದಯೋನ್ಮುಖ ಅಂತಾರಾಷ್ಟ್ರೀಯ ಬಾಕ್ಸರ್‌ಗಳು ಕೇರಳದಿಂದ ಬರುತ್ತಿಲ್ಲ. ಒಂದು ವೇಳೆ ಕೇರಳದಿಂದ ಪ್ರತಿಭಾನ್ವಿತ ಯುವ ಬಾಕ್ಸರ್‌ಗಳು ಬಂದರೆ ಅವರಿಗೆ ತಮ್ಮ ಅಕಾಡೆಮಿಯಲ್ಲಿ ಉಚಿತ ತರಬೇತಿ ನೀಡುವುದಾಗಿ ಹೇಳಿದರು.

ಈ ಬಗ್ಗೆ ಕೇರಳ ಒಲಿಂಪಿಕ್ ಅಸೋಸಿಯೇಷನ್‌ನಂತಹ ಸಂಘಟನೆಗಳು ಯುವ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಬೆಳೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಇದೇ ವೇಳೆ ಸಲಹೆ ನೀಡಿದರು. ಜುಲೈ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್‌ಗೆ ಸದ್ಯ ತಯಾರಿ ನಡೆಸುತ್ತಿರುವುದಾಗಿಯೂ ಕೋಮ್ ತಿಳಿಸಿದರು.

ಇದನ್ನೂ ಓದಿ : IPL 2022 MI vs RR: ಮುಂಬೈ ಇಂಡಿಯನ್ಸ್‌ಗೆ ಮೊದಲ ಗೆಲುವಿನ ಖುಷಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.