ETV Bharat / bharat

ಮಹಾರಾಷ್ಟ್ರದಲ್ಲಿ ಯಾತ್ರಿಕರ ಬಸ್​-ಟ್ರಕ್ ಭೀಕರ​ ಅಪಘಾತ: 10ಕ್ಕೂ ಹೆಚ್ಚು ಮಂದಿ ಭಕ್ತರು ಸಾವು! - ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ

ಇಂದು ನಸುಕಿನ ಜಾವ ಮಹಾರಾಷ್ಟ್ರದ ಶಿರಡಿ ಕ್ಷೇತ್ರದ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Many people dies in Truck and Bus accident  Truck and Bus accident in Maharashtra  Truck and Bus accident in Shiradi  ದೇವಸ್ಥಾನದ ಬಳಿ ಬಸ್​ ಟ್ರಕ್​ ಮುಖಾಮುಖಿ ಡಿಕ್ಕಿ  ಭೀಕರ ರಸ್ತೆ ಅಪಘಾತ  ಸಾಯಿಬಾಬಾ ಭಕ್ತಾದಿಗಳು ಸಾವು  ಶಿರಡಿ ಕ್ಷೇತ್ರದಲ್ಲಿ ಭೀಕರ ರಸ್ತೆ ಅಪಘಾತ  10ಕ್ಕೂ ಹೆಚ್ಚು ಜನರು ಮೃತ  ಶಿರಡಿಯಲ್ಲಿ ಭೀಕರ ರಸ್ತೆ ಅಪಘಾತ  ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ  ಮುಂಬೈನಿಂದ ಶಿರಡಿಗೆ ಬರುತ್ತಿದ್ದ ಖಾಸಗಿ ಕಂಫರ್ಟ್ ಬಸ್
ಇಶಾನೇಶ್ವರ ದೇವಸ್ಥಾನದ ಬಳಿ ಬಸ್​-ಟ್ರಕ್​ ಮುಖಾಮುಖಿ ಡಿಕ್ಕಿ
author img

By

Published : Jan 13, 2023, 10:12 AM IST

Updated : Jan 13, 2023, 11:14 AM IST

ಶಿರಡಿ (ಮಹಾರಾಷ್ಟ್ರ): ಪ್ರಸಿದ್ಧ ಧಾರ್ಮಿಕ ಕೇತ್ರ ಶಿರಡಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಾಸಿಕ್ ಹೆದ್ದಾರಿಯ ಪಥರೆ ಬಳಿಯ ಇಶಾನೇಶ್ವರ ದೇವಸ್ಥಾನದ ಕಮಾನು ಬಳಿ ಇಂದು ಬೆಳಗ್ಗೆ ಯಾತ್ರಿಕರಿದ್ದ ಖಾಸಗಿ ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಸುಮಾರು 10ಕ್ಕೂ ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಏಳು ಮಂದಿ ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಓರ್ವ ಪುರುಷ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ನಲ್ಲಿ ಶಿರಡಿಗೆ ತೆರಳುತ್ತಿದ್ದ ಭಕ್ತರು: ಮುಂಬೈನಿಂದ ಶಿರಡಿಗೆ ಬರುತ್ತಿದ್ದ ಖಾಸಗಿ ಕಂಫರ್ಟ್ ಬಸ್ ಸಂಖ್ಯೆ MH04 SK 2751 ಮತ್ತು ಶಿರಡಿಬಾಜು ಕಡೆಯಿಂದ ಸಿನ್ನಾರ್ ಬಾಜು ಕಡೆಗೆ ಹೋಗುತ್ತಿದ್ದ ಸರಕು ಸಾಗಣೆ ಟ್ರಕ್ ಸಂಖ್ಯೆ MH48T 1295 ನಡುವೆ ಅಪಘಾತ ಉಂಟಾಗಿದೆ. ಡಿಕ್ಕಿಯ ರಭಸಕ್ಕೆ ಬಸ್​ ನೆಲಕ್ಕುರುಳಿದೆ. ಟ್ರಕ್​ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಖಾಸಗಿ ಬಸ್‌ನಲ್ಲಿ ಅಂಬರನಾಥ ಥಾಣೆಯಿಂದ ಸುಮಾರು 50 ಮಂದಿ ಪ್ರಯಾಣಿಕರು ಶಿರಡಿ ಸಾಯಿಬಾಬ ದರ್ಶನಕ್ಕೆ ತೆರಳುತ್ತಿದ್ದರು. ಆದ್ರೆ ಬಸ್​ ಇಶಾನೇಶ್ವರ ದೇವಸ್ಥಾನದ ಕಮಾನು ತಲುಪುತ್ತಿದ್ದಂತೆಯೇ ದುರಂತ ಘಟಿಸಿದೆ.

Many people dies in Truck and Bus accident  Truck and Bus accident in Maharashtra  Truck and Bus accident in Shiradi  ದೇವಸ್ಥಾನದ ಬಳಿ ಬಸ್​ ಟ್ರಕ್​ ಮುಖಾಮುಖಿ ಡಿಕ್ಕಿ  ಭೀಕರ ರಸ್ತೆ ಅಪಘಾತ  ಸಾಯಿಬಾಬಾ ಭಕ್ತಾದಿಗಳು ಸಾವು  ಶಿರಡಿ ಕ್ಷೇತ್ರದಲ್ಲಿ ಭೀಕರ ರಸ್ತೆ ಅಪಘಾತ  10ಕ್ಕೂ ಹೆಚ್ಚು ಜನರು ಮೃತ  ಶಿರಡಿಯಲ್ಲಿ ಭೀಕರ ರಸ್ತೆ ಅಪಘಾತ  ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ  ಮುಂಬೈನಿಂದ ಶಿರಡಿಗೆ ಬರುತ್ತಿದ್ದ ಖಾಸಗಿ ಕಂಫರ್ಟ್ ಬಸ್
ನೆಲಕ್ಕುರುಳಿದ ಯಾತ್ರಿಕರಿದ್ದ ಖಾಸಗಿ ಬಸ್‌

ಭರದಿಂದ ಸಾಗಿದ ರಕ್ಷಣಾ ಕಾರ್ಯ: ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಮೃತದೇಹಗಳನ್ನು ಬಸ್​ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಸಿನ್ನಾರ್​ ಗ್ರಾಮಾಂತರ ಆಸ್ಪತ್ರೆ ಮತ್ತು ಯಶವಂತ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಪೊಲೀಸರು ಮೃತಪಟ್ಟ ಸಂಬಂಧಿಕರ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಸಂತಾಪ ಸೂಚಿಸಿದ ಸಿಎಂ, ಪರಿಹಾರ ಘೋಷಣೆ: ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಕಚೇರಿ ಪ್ರಕಟಣೆ ಮೂಲಕ ತಿಳಿಸಿದೆ.

ಅಪಘಾತದ ವರದಿ ಕೇಳಿದ ಸಿಎಂ: ಮಹಾರಾಷ್ಟ್ರ ಸಿಎಂ ಶಿಂಧೆ ಅವರು ನಾಸಿಕ್ ವಿಭಾಗೀಯ ಆಯುಕ್ತರೊಂದಿಗೆ ಮಾತನಾಡಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ನಾಸಿಕ್ ಮತ್ತು ಶಿರಡಿಗೆ ಸ್ಥಳಾಂತರಿಸಲು ಸೂಚಿಸಿದ್ದಾರೆ. ಅಪಘಾತದ ಕಾರಣಗಳ ಬಗ್ಗೆ ವಿಚಾರಣೆ ನಡೆಸುವಂತೆಯೂ ಆದೇಶಿಸಿದ್ದಾರೆ.

ಇದನ್ನೂ ಓದಿ: ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ: ಕುರಿಗಾಹಿ ನೆರವಿಂದ ಮಗು ರಕ್ಷಣೆ, ಇಬ್ಬರು ನಾಪತ್ತೆ

Last Updated : Jan 13, 2023, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.