ಭೋಪಾಲ್(ಮಧ್ಯಪ್ರದೇಶ): ಕಾಲಿಗೆ ಹಗ್ಗ ಕಟ್ಟಿ ಪಿಕ್ವಾಹನದ ಮೂಲಕ ಎಳೆದೊಯ್ದು ವ್ಯಕ್ತಿ ಮೃತಪಟ್ಟಿರುವ ಅಮಾನವೀಯ ಘಟನೆ ನೀಮುಚ್ನಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್ನಿಲ್ಲದ ಟೀಕೆ ವ್ಯಕ್ತವಾಗುತ್ತಿದೆ.
45 ವರ್ಷದ ವ್ಯಕ್ತಿಯ ಮೇಲೆ ಕಳ್ಳತನದ ಆರೋಪ ಮಾಡಿರುವ ಗುಂಪೊಂದು ಆತನಿಗೆ ಹಿಗ್ಗಾಮುಗ್ಗ ಥಳಿಸಿ, ಈ ಕೃತ್ಯವೆಸಗಿದೆ. ಬನದಾ ಹಳ್ಳಿಯ ನಿವಾಸಿ ಕನ್ಹಾ ಅಲಿಯಾಸ್ ಕನ್ಹಿಯಾ ಭೀಲ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಮಗೊಬ್ಬ ಕಳ್ಳ ಸಿಕ್ಕಿದ್ದಾನೆಂದು ಟ್ರಕ್ ಚಾಲಕ, ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆಗಾಗಲೇ ವ್ಯಕ್ತಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
-
ये मध्यप्रदेश में हो क्या रहा है…?
— Kamal Nath (@OfficeOfKNath) August 28, 2021 " class="align-text-top noRightClick twitterSection" data="
अब नीमच ज़िले के सिंगोली में कन्हैयालाल भील नाम के एक आदिवासी व्यक्ति के साथ बर्बरता की बेहद अमानवीय घटना सामने आयी है ?
मृतक को चोरी की शंका पर बुरी तरह से पीटने के बाद उसे एक वाहन से बांधकर निर्दयता से घसीटा गया, जिससे उसकी मौत हो गयी ? pic.twitter.com/96r1zUQBDs
">ये मध्यप्रदेश में हो क्या रहा है…?
— Kamal Nath (@OfficeOfKNath) August 28, 2021
अब नीमच ज़िले के सिंगोली में कन्हैयालाल भील नाम के एक आदिवासी व्यक्ति के साथ बर्बरता की बेहद अमानवीय घटना सामने आयी है ?
मृतक को चोरी की शंका पर बुरी तरह से पीटने के बाद उसे एक वाहन से बांधकर निर्दयता से घसीटा गया, जिससे उसकी मौत हो गयी ? pic.twitter.com/96r1zUQBDsये मध्यप्रदेश में हो क्या रहा है…?
— Kamal Nath (@OfficeOfKNath) August 28, 2021
अब नीमच ज़िले के सिंगोली में कन्हैयालाल भील नाम के एक आदिवासी व्यक्ति के साथ बर्बरता की बेहद अमानवीय घटना सामने आयी है ?
मृतक को चोरी की शंका पर बुरी तरह से पीटने के बाद उसे एक वाहन से बांधकर निर्दयता से घसीटा गया, जिससे उसकी मौत हो गयी ? pic.twitter.com/96r1zUQBDs
ಗುರುವಾರ ಜೆತಿಯಾ ಗ್ರಾಮದಲ್ಲಿ ನಡೆದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆದಿವಾಸಿ ವ್ಯಕ್ತಿಯನ್ನು 8 ಜನರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸುತ್ತಿದೆ. ಕನ್ಹಾ ಹೊಡೆಯಬೇಡಿ ಎಂದು ಎಷ್ಟೇ ಮನವಿ ಮಾಡಿದೂ, ಗುಂಪು ಕ್ಯಾರೆ ಎಂದಿಲ್ಲ.
ಇದನ್ನೂ ಓದಿ: ಸ್ಕೇಟಿಂಗ್ ಚಕ್ರದ ಬೋಲ್ಟ್ನಲ್ಲಿ ಚಿನ್ನ ಸಾಗಾಟ: ₹16 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೀಮುಚ್ನ ಎಸ್ಪಿ ಸೂರ್ಜ್ ವರ್ಮಾ, ವಿಡಿಯೋ ಆಧರಿಸಿ ಐವರನ್ನು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು. ಬಂಧಿತರ ವಿರುದ್ಧ ಕೊಲೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, ಇತರೆ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಟ್ವೀಟ್ ಮಾಡಿದ್ದು, ಮಧ್ಯಪ್ರದೇಶದಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.