ETV Bharat / bharat

ದೆಹಲಿ ಲಾಕ್​ಡೌನ್.. ವಲಸೆ ಕಾರ್ಮಿಕರು ನಗರ ಬಿಡದಂತೆ ಲೆಫ್ಟಿನೆಂಟ್ ಗವರ್ನರ್ ಮನವಿ - ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ವಲಸೆ ಕಾರ್ಮಿಕರಿಗೆ ಮನವಿ

ಹದಗೆಡುತ್ತಿರುವ ಕೋವಿಡ್​-19 ಪರಿಸ್ಥಿತಿಯ ಮಧ್ಯೆ ದೆಹಲಿಯಲ್ಲಿ ಆರು ದಿನಗಳ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ. ಸೋಮವಾರ ಸಂಜೆ ಆನಂದ್ ವಿಹಾರ್ ಬಸ್ ಟರ್ಮಿನಲ್‌ನಲ್ಲಿ ನೂರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸೇರಿದ್ದ ದೃಶ್ಯ ಕಂಡು ಬಂತು..

Lt Governor Anil Baijal
ಅನಿಲ್ ಬೈಜಾಲ್
author img

By

Published : Apr 20, 2021, 3:12 PM IST

ನವದೆಹಲಿ : ದೆಹಲಿಯಲ್ಲಿ ಲಾಕ್​ಡೌನ್ ಹೇರಿದ ಬಳಿಕ ಅನೇಕ ವಲಸೆ ಕಾರ್ಮಿಕರು ನಗರ ಬಿಟ್ಟು ಹೋಗುತ್ತಿದ್ದಾರೆ. ಈ ಸಂದರ್ಭ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕಾರ್ಮಿಕರಿಗೆ ನಗರವನ್ನು ಬಿಟ್ಟು ಹೋಗದಂತೆ ಮನವಿ ಮಾಡಿದ್ದಾರೆ. ಲಾಕ್​ಡೌನ್ ಜಾರಿಯಲ್ಲಿರುವಾಗ ತಮ್ಮ ಅಗತ್ಯತೆಗಳನ್ನು ನೋಡಿಕೊಳ್ಳಲು ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.

ದೆಹಲಿ ಬಿಟ್ಟು ಹೋಗಲು ವಲಸೆ ಕಾರ್ಮಿಕರು ಬಸ್​ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಜಮಾಯಿಸಿರುವ ದೃಶ್ಯ ಹಾಗೂ ವರದಿಗಳ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಪರಿಸ್ಥಿತಿ ನಿಭಾಯಿಸಲು ಮತ್ತು ಹಿಮ್ಮುಖ ವಲಸೆ ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದರು.

ಮೂಲಗಳ ಪ್ರಕಾರ, ಸದ್ಯ ಪ್ರಧಾನ ಕಾರ್ಯದರ್ಶಿ ಗೃಹ ಮತ್ತು ವಿಶೇಷ ಪೊಲೀಸ್ ಆಯುಕ್ತರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಹದಗೆಡುತ್ತಿರುವ ಕೋವಿಡ್​-19 ಪರಿಸ್ಥಿತಿಯ ಮಧ್ಯೆ ದೆಹಲಿಯಲ್ಲಿ ಆರು ದಿನಗಳ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ. ಸೋಮವಾರ ಸಂಜೆ ಆನಂದ್ ವಿಹಾರ್ ಬಸ್ ಟರ್ಮಿನಲ್‌ನಲ್ಲಿ ನೂರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸೇರಿದ್ದ ದೃಶ್ಯ ಕಂಡು ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.