ETV Bharat / bharat

ಡ್ರಗ್ಸ್​ ನೀಡಿ ಪ್ರೇಯಸಿ ಮೇಲೆ ಅತ್ಯಾಚಾರವೆಸಗಿದ ಪ್ರಿಯಕರ.. ಆರೋಪಿ ಬಂಧನ - ಪ್ರೇಯಸಿ ಮೇಲೆ ಅತ್ಯಾಚಾರ

ಆರೋಪಿ ಸಮೀರ್ ಯುವತಿಯನ್ನು ಜೋಧ್‌ಪುರದ ಹೋಟೆಲ್‌ಗೆ ಕರೆಸಿಕೊಂಡು ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಯುವತಿ ಪ್ರಜ್ಞಾಹೀನಳಾದಾಗ ಹೆದರಿ ಆಕೆಯ ಸಹೋದರಿಯನ್ನು ಹೋಟೆಲ್‌ಗೆ ಕರೆಸಿ ಸಂತ್ರಸ್ತೆಯನ್ನು ಆಕೆಯೊಂದಿಗೆ ಆಸ್ಪತ್ರೆಗೆ ಕಳುಹಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

Accused Sameer
ಆರೋಪಿ ಸಮೀರ್​
author img

By

Published : Aug 8, 2022, 1:39 PM IST

Updated : Aug 8, 2022, 2:29 PM IST

ಜೋಧ್‌ಪುರ(ರಾಜಸ್ಥಾನ): ರಾಜಸ್ಥಾನದ ಜೋಧ್‌ಪುರದಲ್ಲಿ ತನ್ನ ಪ್ರೇಯಸಿಗೆ ಡ್ರಗ್ಸ್​ ನೀಡಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೈಪುರ ಮೂಲದ ಸಮೀರ್ ಎಂಬಾತ ಆರೋಪಿ. ಯುವತಿಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಮಾದಕ ದ್ರವ್ಯ ಸೇವನೆ ಆಕೆಯ ಸಾವಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿ ಬಾಲಕಿಯ ಸಂಬಂಧಿಯಾಗಿದ್ದು, ಆಕೆಯೊಂದಿಗೆ ಕಳೆದ ಐದು ವರ್ಷಗಳಿಂದ ಸಂಬಂಧ ಹೊಂದಿದ್ದನಂತೆ. ಇಬ್ಬರೂ ಮದುವೆಯಾಗಬೇಕು ಎಂದು ಬಯಸಿದ್ದು, ಆದರೆ ಕುಟುಂಬದವರು ಇದನ್ನು ವಿರೋಧಿಸಿದ್ದ ಕಾರಣ ಮದುವೆಯಾಗಿರಲಿಲ್ಲ. ಸಮೀರ್ ಶನಿವಾರ ಯುವತಿಯನ್ನು ಜೋಧ್‌ಪುರದ ಹೋಟೆಲ್‌ಗೆ ಕರೆಸಿಕೊಂಡು ಅಲ್ಲಿ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ. ಯುವತಿ ಪ್ರಜ್ಞಾಹೀನಳಾದಾಗ ಸಮೀರ್ ಹೆದರಿ ಯುವತಿಯನ್ನು ಸಹೋದರಿಯನ್ನು ಹೋಟೆಲ್‌ಗೆ ಕರೆಸಿ ಸಂತ್ರಸ್ತೆಯನ್ನು ಆಕೆಯೊಂದಿಗೆ ಆಸ್ಪತ್ರೆಗೆ ಕಳುಹಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೂರ್ವ ಡಿಸಿಪಿ ಅಮೃತಾ ದುಹಾನ್ ಮಾಹಿತಿ ನೀಡಿದರು.

ಡಿಸಿಪಿ ಅಮೃತಾ ದುಹಾನ್ ಮಾಧ್ಯಮಕ್ಕೆ ಮಾಹಿತಿ ನೀಡಿದರು

ಸಂತ್ರಸ್ತೆಯ ಸಹೋದರಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಸಂತ್ರಸ್ತೆಯನ್ನು ಪೌಟಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಆಕೆಯನ್ನು ಎಂಜಿಹೆಚ್‌ಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ಸಮೀರ್ ಜೈಪುರದಿಂದ ರೈಲಿನಲ್ಲಿ ಹೊರಟು ರಾತ್ರಿ 7.30ಕ್ಕೆ ವಿಶಾಖಪಟ್ಟಣಂ ಎಕ್ಸ್​ಪ್ರೆಸ್ ಹತ್ತಿದ್ದಾನೆ.

ಶನಿವಾರ ಮಧ್ಯಾಹ್ನ ಹೋಟೆಲ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮತ್ತು ಜಿಆರ್‌ಪಿ ಮತ್ತು ಆರ್‌ಪಿಎಫ್ ಸಹಾಯದಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಂತರ ಪೊಲೀಸರು ಆತನನ್ನು ಜೋಧಪುರಕ್ಕೆ ಕರೆತಂದಿದ್ದಾರೆ. ಆತನಿಂದ ಮದ್ಯದ ಬಾಟಲಿ ವಶಪಡಿಸಿಕೊಂಡಿದ್ದು, ಆರೋಪಿ ವಿಚಾರಣೆ ವೇಳೆ ಪ್ರೇಯಸಿಗೆ ಲೈಂಗಿಕ ಸಂಪರ್ಕದ ಮೊದಲು ಮಾದಕ ದ್ರವ್ಯ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮರಣೋತ್ತರ ಪರೀಕ್ಷೆಯಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಆದರೆ ಅದೇ ಸಾವಿಗೆ ಕಾರಣ ಎಂದು ದೃಢಪಡಿಸಿಲ್ಲ. ಯುವತಿಯ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗುತ್ತಿತ್ತು. ಆಕೆಯ ಬಟ್ಟೆಗಳಲ್ಲೂ ರಕ್ತದ ಕಲೆಗಳಾಗಿದ್ದು, ದೇಹದಲ್ಲಿ ಬೇರೆ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ಎಫ್‌ಎಸ್‌ಎಲ್ ತಂಡದ ಮೂಲಕ ತನಿಖೆಗಾಗಿ ಪೊಲೀಸರು ಕೊಠಡಿಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : ಬಂಜಾರ ಹಿಲ್ಸ್​​ನಲ್ಲಿ ಯುವತಿ ಮೇಲೆ ಅತ್ಯಾಚಾರ: ಆರೋಪಿ ವಶಕ್ಕೆ

Last Updated : Aug 8, 2022, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.