ಅಯೋಧ್ಯೆ (ಉತ್ತರ ಪ್ರದೇಶ) : ಭಗವಾನ್ ಶ್ರೀರಾಮ ಸಮಾಜವಾದಿ ಪಕ್ಷ (ಎಸ್‌ಪಿ)ಕ್ಕೆ ಸೇರಿದವನು. ನಾವೆಲ್ಲಾ ರಾಮ ಮತ್ತು ಕೃಷ್ಣನ ಭಕ್ತರು ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ.
ಯುಪಿಯ ಅಜಮ್ಗಡ್ನಿಂದ ಲಖನೌಗೆ ಹಿಂದಿರುಗುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಿಗೆ ಪೂಜೆ ಸಲ್ಲಿಸಲು ಶೀಘ್ರದಲ್ಲೇ ನನ್ನ ಕುಟುಂಬ ಸಮೇತ ಅಯೋಧ್ಯೆಗೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮ್ ಮಂದಿರ: 1,000 ವರ್ಷ ಸದೃಢವಾಗಿ ನಿಲ್ಲುವಂತ ಬುನಾದಿಗೆ ಪ್ಲಾನ್
ಇದೇ ವೇಳೆ ತಾವು ಉತ್ತರಪ್ರದೇಶದ ಸಿಎಂ ಆಗಿದ್ದಾಗ ಅಯೋಧ್ಯೆಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಹೇಳಿಕೊಂಡರು. ಸರಯೂ ನದಿ ದಂಡೆಯಲ್ಲಿ ದೀಪಗಳ ವ್ಯವಸ್ಥೆ, ರಾಮನನ್ನು ಪೂಜಿಸಲು ಭಜನಾ ಸ್ಥಳದಲ್ಲಿ ಧ್ವನಿವರ್ಧಕದ ವ್ಯವಸ್ಥೆ ಮಾಡಿದ್ದೇನೆ ಎಂದರು.
2022ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮಾಜವಾದಿ ಪಕ್ಷವು 403 ಕ್ಷೇತ್ರಗಳ ಪೈಕಿ 351 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.