ETV Bharat / bharat

ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ..ನಿಗದಿತ ಅವಧಿಗೂ ಒಂದು ದಿನ ಮೊದಲೇ ಮುಗಿದ ಸಂಸತ್​ ಚಳಿಗಾಲದ ಅಧಿವೇಶನ - ಸಂಸತ್​ ಅಧಿವೇಶನ ಅವಧಿಗೂ ಮೊದಲೇ ಮುಕ್ತಾಯ

ಅಧಿವೇಶನ ಆರಂಭವಾದಾಗಿನಿಂದಲೂ ಪ್ರತಿಪಕ್ಷಗಳು ನಿರಂತರವಾಗಿ ಆಡಳಿತ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಲೇ ಇವೆ. ಹೀಗಾಗಿ ಕಲಾಪ ಫಲಪ್ರದವಾಗದ ಕಾರಣ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ನಿರ್ಧರಿಸಿದ್ದಾರೆ.

Lok Sabha winter session
ಸಂಸತ್​ ಚಳಿಗಾಲದ ಅಧಿವೇಶನ
author img

By

Published : Dec 22, 2021, 8:21 PM IST

ನವದೆಹಲಿ: ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗಿಂತಲೂ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ, ಗದ್ದಲ, ವಾಕ್ಸಮರವೇ ಅಧಿಕವಾಗಿತ್ತು. ಇಂದು ಕೂಡ ಹೋರಾಟ, ಗದ್ದಲ ಮುಂದುವರಿದ ಕಾರಣ ಕಲಾಪವನ್ನು ಮುಂದೂಡುವುದರೊಂದಿಗೆ ಅಧಿವೇಶನವನ್ನು ಮೊಟಕುಗೊಳಿಸಲಾಯಿತು. ಹೀಗಾಗಿ ಅಧಿವೇಶನ ಕೊನೆಗೊಳ್ಳಲು ಇನ್ನೂ ಒಂದು ಬಾಕಿ ಇರುವಾಗಲೇ ಮುಕ್ತಾಯಗೊಂಡಂತಾಗಿದೆ.

ಅಧಿವೇಶನ ಆರಂಭವಾದಾಗಿನಿಂದಲೂ ಪ್ರತಿಪಕ್ಷಗಳು ನಿರಂತರವಾಗಿ ಆಡಳಿತ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಲೇ ಇವೆ. ಹೀಗಾಗಿ ಕಲಾಪ ಫಲಪ್ರದವಾಗದ ಕಾರಣ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ನಿರ್ಧರಿಸಿದ್ದಾರೆ.

ವಿಪಕ್ಷಗಳ ಪ್ರತಿಭಟನೆಗಳ ಮಧ್ಯೆಯೇ ಕೇಂದ್ರ ಸರ್ಕಾರ ಕೃಷಿ ಕಾನೂನುಗಳ ರದ್ದತಿ ಮಸೂದೆ, ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ, ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, ಹೈಕೋರ್ಟ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ತಿದ್ದುಪಡಿ) ಮಸೂದೆ ಸೇರಿದಂತೆ 11 ಪ್ರಮುಖ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.

ಇದನ್ನೂ ಓದಿ: ಸದನದಲ್ಲಿ ಶಾಸಕರ ಶಿಸ್ತು ಪಾಠದ ಬಗ್ಗೆ ನಾಯಕರ ಚರ್ಚೆ : ಗರಂ ಆದ ಬಿಎಸ್​​​ವೈ, ಭಾವುಕರಾದ ಸ್ಪೀಕರ್

ಇನ್ನು ಕಲಾಪಗಳ ಉತ್ಪಾದಕತೆ ಲೋಕಸಭೆಯಲ್ಲಿ ಶೇಕಡಾ 82 ರಷ್ಟಿದ್ದರೆ, ರಾಜ್ಯಸಭೆಯಲ್ಲಿ 39 ರಷ್ಟು ಇದೆ. ಇದು ಕೆಳ ಸದನಕ್ಕಿಂತಲೂ ಅರ್ಧದಷ್ಟು ಕಡಿಮೆಯಾಗಿದೆ. ಇನ್ನು 15 ದಿನದ ಕಲಾದಲ್ಲಿ ರಾಜ್ಯಸಭೆಯು 39 ಗಂಟೆಗಳ ಕಾಲ ಮಾತ್ರ ನಡೆದಿದ್ದು, ವಿವಿಧ 9 ಮಸೂದೆಗಳನ್ನು ಮಾತ್ರ ಅಂಗೀಕರಿಸಿದೆ. ಪ್ರತಿಪಕ್ಷಗಳ ಪ್ರತಿಭಟನೆಯಿಂದಲೇ ಮೇಲ್ಮನೆಯ ಕಲಾಪದ ಹೆಚ್ಚಿನ ಸಮಯ ಹಾಳಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಮಂಗಳವಾರ ಮಂಡಿಸಿದ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ ಸೇರಿದಂತೆ 6 ಮಸೂದೆಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ. ಧ್ವನಿ ಮತದ ಮೂಲಕ ರಾಜ್ಯಸಭೆಯಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಅನ್ನು ಲಿಂಕ್ ಮಾಡುವ ಮಸೂದೆಯನ್ನು ಅಂಗೀಕರಿಸಿತು.

ಕಳೆದ ಅಧಿವೇಶನದಲ್ಲಿ ದುರ್ವರ್ತನೆ ಆರೋಪದಡಿ 12 ರಾಜ್ಯಸಭೆ ಸಂಸದರನ್ನು ಅಮಾನತುಗೊಳಿಸಿರುವುದು ಮತ್ತು ಲಖೀಂಪುರ ಖೇರಿಯ ರೈತರ ಹತ್ಯಾಕಾಂಡ ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಗೆ ಕಾರಣವಾಗಿದ್ದವು. ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 29 ರಂದು ಪ್ರಾರಂಭವಾಗಿದ್ದು, ಡಿಸೆಂಬರ್ 23 ರಂದು ಅಂದರೆ ನಾಳೆ ಮುಕ್ತಾಯಗೊಳ್ಳಬೇಕಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.