ETV Bharat / bharat

2014ರಲ್ಲಿಯೇ ಎಬಿಜಿ ಶಿಪ್​ಯಾರ್ಡ್​ ದಿವಾಳಿ ಘೋಷಣೆ: ಸಚಿವೆ ನಿರ್ಮಲಾ ಸೀತಾರಾಮನ್​ - ಕಾಂಗ್ರೆಸ್​ ವಿರುದ್ಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಆರೋಪ

ಇಂತಹ ದೊಡ್ಡ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲು ಬ್ಯಾಂಕುಗಳು ಸಾಮಾನ್ಯವಾಗಿ 55 ತಿಂಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ಈ ಪ್ರಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಶೋಧ ನಡೆಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

shipyard
ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Feb 14, 2022, 5:00 PM IST

ನವದೆಹಲಿ: ವಿವಿಧ ಬ್ಯಾಂಕ್​ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಎಬಿಜಿ ಶಿಪ್​ಯಾರ್ಡ್​ ಪ್ರಕರಣಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ. ಎಬಿಜಿ ಶಿಪ್​ಯಾರ್ಡ್​ ಕಂಪನಿ ಆರ್ಥಿಕ ನಷ್ಟದಿಂದ ದಿವಾಳಿಯಾಗಿದೆ ಎಂದು 2014 ರಲ್ಲಿಯೇ ಘೋಷಿಸಿಕೊಂಡಿದೆ. ಇದಕ್ಕೆ ಯುಪಿಎ ಸರ್ಕಾರವೇ ಹೊಣೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದಾರೆ.

ಎಬಿಜಿ ಶಿಪ್​ಯಾರ್ಡ್​ ವಂಚನೆ ಪ್ರಕರಣವನ್ನು ಕಡಿಮೆ ಅವಧಿಯಲ್ಲಿ ಪತ್ತೆ ಮಾಡಲಾಗಿದೆ. ಈ ವಿಚಾರದಲ್ಲಿ ಬ್ಯಾಂಕ್​ಗಳ ಕೆಲಸವನ್ನು ಮೆಚ್ಚಬೇಕು. ವಂಚನೆಯನ್ನು ಬಹುಬೇಗನೆ ಪತ್ತೆ ಮಾಡಿದ್ದಾರೆ ಎಂದು ಆರ್​ಬಿಐ ಮಂಡಳಿಯ ಸದಸ್ಯರನ್ನುದ್ದೇಶಿಸಿ ಮಾತನಾಡುವ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದರು.

ಇಂತಹ ದೊಡ್ಡ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲು ಬ್ಯಾಂಕುಗಳು ಸಾಮಾನ್ಯವಾಗಿ 55 ತಿಂಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ಈ ಪ್ರಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಶೋಧ ನಡೆಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

ಗುಜರಾತಿನ ದಹೇಜ್ ಮತ್ತು ಸೂರತ್‌ನಲ್ಲಿ ಶಿಪ್​ಯಾರ್ಡ್​ಗಳನ್ನು ಹೊಂದಿರುವ ಎಬಿಜಿ, 28 ಬ್ಯಾಂಕ್‌ಗಳಿಗೆ ₹ 22,842 ಕೋಟಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹ 2,925 ಕೋಟಿ, ಐಸಿಐಸಿಐ ಬ್ಯಾಂಕ್‌ಗೆ ₹ 7,089 ಕೋಟಿ, ಐಡಿಬಿಐ ಬ್ಯಾಂಕ್‌ಗೆ ₹ 3,634 ಕೋಟಿ, ಬ್ಯಾಂಕ್ ಆಫ್ ಬರೋಡಾಕ್ಕೆ ₹ 1,614 ಕೋಟಿ, ಪಿಎನ್‌ಬಿಗೆ ₹ 1,244 ಕೋಟಿ ರೂಪಾಯಿಯನ್ನು ಶಿಪ್​ಯಾರ್ಡ್​ ಕಂಪನಿ ಬಾಕಿ ಉಳಿಸಿಕೊಂಡಿದೆ ಎಂದು ಸಿಬಿಐ ಹೇಳಿದೆ.

ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್​ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದೂರು ದಾಖಲಿಸಿದೆ.

ಓದಿ: ಪ್ರೀತಿ ಜೊತೆಗೆ ಇರಲಿ ಆರ್ಥಿಕ ನೀತಿ.. ನವ ಜೋಡಿಗಳಿಗೆ ಆರ್ಥಿಕ ಯೋಜನೆ ರೂಪಿಸಲು ಇಲ್ಲಿವೆ ಕೆಲ ಸಲಹೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.