ಪನ್ನಾ(ಮಧ್ಯಪ್ರದೇಶ): ಮಧ್ಯಪ್ರದೇಶದ ಪನ್ನಾ ವಜ್ರಗಳಿಗೆ ಹೆಸರುವಾಸಿ. ಇಲ್ಲಿ ಹಲವಾರು ವಜ್ರದ ಗಣಿಗಳಿವೆ. ಇವುಗಳಲ್ಲಿ ಒಂದಾದ ಹೀರಾಪುರ್ ತಪರಿಯನ್ ಎಂಬ ಗಣಿಯಲ್ಲಿ ಕಾರ್ಮಿಕನೊಬ್ಬನಿಗೆ ಭಾರೀ ಬೆಲೆ ಬಾಳುವ ವಜ್ರ ದೊರೆತಿದೆ.
ವಿವರ:
ಹೀರಾಪುರದ ತಪರಿಯನ್ನಲ್ಲಿ ಕೆಲಸ ಮಾಡುವ ಶಂಶೇರ್ಖಾನ್ ಎಂಬ ಕಾರ್ಮಿಕನಿಗೆ ಕೆಲಸದ ವೇಳೆ 6 ಕ್ಯಾರೆಟ್ 66 ಸೆಂಟ್ಸ್ನ ವಜ್ರ ಸಿಕ್ಕಿತು. ಇದು ಕನಿಷ್ಠ 20 ಲಕ್ಷ ರೂಪಾಯಿಗೂ ಅಧಿಕ ಮೌಲ್ಯವುಳ್ಳದ್ದಾಗಿದೆ ಎಂದು ಅಂದಾಜಿಸಲಾಗಿದೆ. ವಜ್ರದ ಪತ್ತೆಯಿಂದ ಕಾರ್ಮಿಕನಿಗೆ ಲಾಟರಿ ಹೊಡೆದಂತಾಗಿದೆ. ಸಿಕ್ಕ ವಜ್ರವನ್ನು ಈ ಕಾರ್ಮಿಕ ಹರಾಜಿಗಿಟ್ಟಿದ್ದಾನೆ.
'ನನ್ನ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಬಂದ ಹಣವನ್ನು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಇದು ನನ್ನ ಮತ್ತು ಕುಟುಂಬದ ಜೀವನವನ್ನೇ ಬದಲಿಸಲಿದೆ' ಎಂದು ಶಂಶೇರ್ಖಾನ್ ಹೇಳಿದ್ದಾನೆ.
ಪನ್ನಾದಲ್ಲಿ ಪಚ್ಚೆಯ ವಜ್ರಗಳು ಕಂಡುಬರುತ್ತವೆ. ಇವು ಯಾರಿಗೆ ದೊರಕುತ್ತವೆಯೋ ಅವರ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗಿದೆ. ಶಂಶೇರ್ಖಾನ್ಗೆ ಸಿಕ್ಕ ವಜ್ರವನ್ನು ಮುಂದಿನ ಹರಾಜಿನಲ್ಲಿ ಬಿಡ್ ಮಾಡಲಾಗುವುದು ಎಂದು ವಜ್ರ ವ್ಯಾಪಾರಿ ಅನುಪಮ್ ಸಿಂಗ್ ಹೇಳಿದ್ದಾರೆ.