ETV Bharat / bharat

ಮಕ್ಕಳ ಮೇಲಿನ ಲೈಂಗಿಕ ಅಪರಾಧ: 'ಪಿ-ಹಂಟ್​ 'ಮೂಲಕ ಗೊತ್ತಾಗಿದ್ದು ಭಯಾನಕ ಮಾಹಿತಿ ! - ಮಕ್ಕಳ ಮೇಲಿನ ಲೈಂಗಿಕ ಅಪರಾಧ

ಮಕ್ಕಳ ಅಶ್ಲೀಲ ವಿಷಯವನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ವಾಟ್ಸ್​​ಆ್ಯಪ್​ ಮತ್ತು ಟೆಲಿಗ್ರಾಮ್ ಅನ್ನು ಬಳಸಿದ ನಂತರ ಪಿ-ಹಂಟ್ ಹೆಸರಿನಲ್ಲಿ ಕೇರಳ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

kerala-police-nabs-28-people-for-promoting-child-pornography

author img

By

Published : Jun 7, 2021, 8:23 PM IST

ತಿರುವನಂತಪುರಂ: ಮಕ್ಕಳ ಅಶ್ಲೀಲ ಚಿತ್ರಗಳ ವಿರುದ್ಧ' ಆಪರೇಷನ್ ಪಿ-ಹಂಟ್' ಅಂಗವಾಗಿ ಕನಿಷ್ಠ 28 ಜನರನ್ನು ಬಂಧಿಸಲಾಗಿದ್ದು, 370 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಪೊಲೀಸರ ಪ್ರಕಾರ, ವಾಟ್ಸ್​ಆ್ಯಪ್​ ಮತ್ತು ಟೆಲಿಗ್ರಾಮ್ ಬಳಸಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಇನ್ನು ಬಂಧನಕ್ಕೊಳಗಾದವರು ಹೆಚ್ಚಾಗಿ ಐಟಿ ವಲಯದೊಂದಿಗೆ ಸಂಬಂಧ ಹೊಂದಿದ್ದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಶಪಡಿಸಿಕೊಂಡ ಮೊಬೈಲ್​ ಹಾಗೂ ಇತರ ಸಾಧನಗಳಿಂದ ಚಾಟ್‌ಗಳನ್ನು ಪರಿಶೀಲಿದಾಗ, ಮಕ್ಕಳ ಕಳ್ಳಸಾಗಣೆಯಲ್ಲಿ ಅನೇಕರು ಭಾಗಿಯಾಗಿದ್ದಾರೆ ಎಂಬ ಸೂಚನೆಗಳಿವೆ ಎಂದು ತಿರುವನಂತಪುರಂ ಶ್ರೇಣಿಯ ಹೆಚ್ಚುವರಿ ಮಹಾನಿರ್ದೇಶಕ ಮನೋಜ್ ಅಬ್ರಹಾಂ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇವುಗಳಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳ ವಿಡಿಯೋಗಳು ಸೇವೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಡಿಯೋ ತುಣುಕುಗಳನ್ನು ಕಂಡುಹಿಡಿದು ಅವನ್ನು ಅಳಿಸಲಾಗಿದೆ. ಇನ್ನು ವಶಪಡಿಸಿಕೊಂಡ ಸಾಧನಗಳಲ್ಲಿ ಪ್ರತಿ ಮೂರು ದಿನಗಳಿಗೊಮ್ಮೆ ಫಾರ್ಮ್ಯಾಟ್ ಮಾಡಲಾಗುತ್ತಿತ್ತಂತೆ.

ಅಶ್ಲೀಲ ವಿಷಯವನ್ನು ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಬಳಸುತ್ತಿದ್ದ ಫೋನ್‌ಗಳು, ಹಾರ್ಡ್ ಡಿಸ್ಕ್​ಗಳು, ಮೆಮೊರಿ ಕಾರ್ಡ್‌ಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ 429 ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇರಳ ಪೊಲೀಸರು ಇದೇ ರೀತಿಯ ಕಾರ್ಯಾಚರಣೆ ನಡೆಸಿದ್ದು, ಆ ಸಮಯದಲ್ಲಿ ಪ್ರಕರಣ ದಾಖಲು ಮಾಡಿದ್ದು, ಬಂಧನ ಕೂಡ ಮಾಡಲಾಗಿದೆ. ಆಪರೇಷನ್ ಪಿ-ಹಂಟ್ ಮೂಲಕ ಇಲ್ಲಿಯವರೆಗೆ ಸುಮಾರು 500 ಜನರನ್ನು ಬಂಧಿಸಲಾಗಿದೆ.

ಭಾರತ ಮಕ್ಕಳ ಸಂರಕ್ಷಣಾ ನಿಧಿ (ಐಸಿಪಿಎಫ್) ಪ್ರಕಾರ, ದೇಶದಲ್ಲಿ ಕೊರೊನಾ-19 ಲಾಕ್‌ಡೌನ್ ಜಾರಿಗೊಳಿಸಿದಾಗಿನಿಂದ ಮಕ್ಕಳ ಅಶ್ಲೀಲ ಚಟುವಟಿಕೆಗಳಲ್ಲಿ ಆತಂಕಕಾರಿಯಾದ ಏರಿಕೆ ಅಕ್ರಮ ಪ್ರಕರಣಗಳು ಕಂಡು ಬಂದಿವೆ. 'ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಾಧನ' ಎಂಬ ಶೀರ್ಷಿಕೆಯ ವರದಿಯ ಪ್ರಕಾರ, 2019 ರ ಡಿಸೆಂಬರ್‌ನಲ್ಲಿ ಸಾರ್ವಜನಿಕ ವೆಬ್‌ನಲ್ಲಿ 100 ನಗರಗಳಲ್ಲಿ ಮಕ್ಕಳ ಅಶ್ಲೀಲತೆಯ ಒಟ್ಟಾರೆ ಬೇಡಿಕೆ ತಿಂಗಳಿಗೆ ಸರಾಸರಿ ಐದು ಮಿಲಿಯನ್ ಇತ್ತು, ಅದು ಈಗ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.