ETV Bharat / bharat

ಥಾಯ್ಲೆಂಡ್‌ನಿಂದ ಕಳ್ಳ ಮಾರ್ಗದಲ್ಲಿ ಮಲೇಷ್ಯಾ ತಲುಪಿಸಿದ ವಂಚಕ; ವೀಸಾ ಇಲ್ಲದೆ ಕೇರಳ ಯುವಕರ ಸಂಕಷ್ಟ

ಉದ್ಯೋಗ ಕೊಡಿಸುವ ಆಸೆ ತೋರಿಸಿ ಕೇರಳದ ಯುವಕರನ್ನು ಥಾಯ್ಲೆಂಡ್‌ನಿಂದ ಕಳ್ಳ ಮಾರ್ಗದ ಮೂಲಕ ಮಲೇಷ್ಯಾಕ್ಕೆ ತಲುಪಿಸಿದ ವಂಚಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

kerala-man-held-for-defrauding-job-seekers-now-stranded-in-malaysia-without-visas
ಥಾಯ್ಲೆಂಡ್‌ನಿಂದ ಕಳ್ಳ ಮಾರ್ಗವಾಗಿ ಮಲೇಷ್ಯಾಕ್ಕೆ ತಲುಪಿಸಿದ ವಂಚಕ.. ವೀಸಾಗಳಿಲ್ಲದೆ ಸಿಲುಕಿಕೊಂಡ ಕೇರಳದ ಯುವಕರು
author img

By

Published : Apr 12, 2023, 5:17 PM IST

ಇಡುಕ್ಕಿ (ಕೇರಳ): ಉದ್ಯೋಗ ಕೊಡಿಸುವ ನೆಪದಲ್ಲಿ ಇಡುಕ್ಕಿ ಮೂಲದ ವ್ಯಕ್ತಿಯೊಬ್ಬ ಯುವಕರ ತಂಡವನ್ನು ಮಲೇಷ್ಯಾಕ್ಕೆ ಕಳುಹಿಸಿದ್ದು, ಆ ಯುವಕರು ತಮ್ಮಲ್ಲಿ ಯಾವುದೇ ಸೂಕ್ತ ದಾಖಲೆ ಮತ್ತು ವೀಸಾಗಳಿಲ್ಲದೆ ಅಲ್ಲಿಯೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಸಂತ್ರಸ್ತ ಯುವಕರ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ನೆಡುಂಕಂಡಂ ಮೂಲದ ಅಗಸ್ಟಿನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ 30 ಜನರಿಗೆ ಪಂಗನಾಮ: ಮಂಗಳೂರು ಪೊಲೀಸರಿಂದ ವಂಚಕ ಅರೆಸ್ಟ್

ಅಗಸ್ಟಿನ್ ವಿದೇಶಿದಲ್ಲಿ 80 ಸಾವಿರ ರೂಪಾಯಿ ಸಂಬಳದವರೆಗಿನ ಉದ್ಯೋಗ ಕೊಡಿಸುವುದಾಗಿ ಹೇಳಿ ಯುವಕರನ್ನು ನಂಬಿಸಿದ್ದಾನೆ. ಯುವಕರಿಂದ ತಲಾ 1 ಲಕ್ಷದಿಂದ 2 ಲಕ್ಷ ರೂ.ವರೆಗೂ ಹಣ ಕೂಡ ಪಡೆದಿದ್ದ. ಚೆನ್ನೈ ತಲುಪಿದಾಗ ವೀಸಾ ಒದಗಿಸುವುದಾಗಿ ಯುವಕರಿಗೆ ಭರವಸೆ ನೀಡಿದ್ದ. ಆದರೆ, ನೇರವಾಗಿ ಥಾಯ್ಲೆಂಡ್‌ಗೆ ಕಳುಹಿಸಿದ್ದು, ಅಲ್ಲಿಂದ ರಹಸ್ಯ ಮಾರ್ಗದ ಮೂಲಕ ಮಲೇಷ್ಯಾಕ್ಕೆ ಕರೆದೊಯ್ಯಲಾಗಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಒಬ್ಬ ಯುವಕ ಮಲೇಷ್ಯಾ ತಲುಪಿದ ನಂತರ ತನ್ನ ಕುಟುಂಬವನ್ನು ಸಂಪರ್ಕಿಸಿದ್ದು, ಮಲೇಷ್ಯಾ ತಲುಪಿದಾಗಲೇ ಮೋಸ ಹೋಗಿರುವುದು ಗೊತ್ತಾಗಿದೆ. ಎಂಟು ಗಂಟೆಗಳ ಕಾಲ ಕಾಡಿನಲ್ಲಿ ನಡೆದುಕೊಂಡು ನಂತರ ಮುಚ್ಚಿದ ಕಂಟೈನರ್ ಲಾರಿಗಳು ಮತ್ತು ದೋಣಿಗಳೊಂದಿಗೆ ಕಳ್ಳದ ಮಾರ್ಗದ ಮೂಲಕ ಯುವಕರನ್ನು ಮಲೇಷ್ಯಾಕ್ಕೆ ತಲುಪಿಸಿದ್ದರು. ಮೊಬೈಲ್ ಫೋನ್ ಮತ್ತು ಇತರ ಸೌಲಭ್ಯಗಳು ಲಭ್ಯವಾಗದ ಕಾರಣ ಕುಟುಂಬವನ್ನು ತಕ್ಷಣಕ್ಕೆ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆಗಸ್ಟಿನ್ ತನ್ನ ಮಗನೊಂದಿಗೆ ಸೇರಿಕೊಂಡು ವಂಚಿಸಿದ್ದಾನೆ ಎಂದು ಮೋಸಹೋದ ಯುವಕರ ಪೋಷಕರು ದೂರಿನಲ್ಲಿ ವಿವರಿಸಿದ್ದಾರೆ.

ಅಧಿಕಾರಿಗಳ ಮುಂದೆ ಶರಣಾದ ಯುವಕರು: ಸದ್ಯ ಯುವಕರ ತಂಡದಲ್ಲಿದ್ದ ಆರು ಜನರು ಮಲೇಷ್ಯಾ ಭದ್ರತಾ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಆದರೆ, ತಮ್ಮ ಪಾಸ್‌ಪೋರ್ಟ್‌ಗಳು ಇಲ್ಲದಿರುವ ಕಾರಣಕ್ಕೆ ಮಲೇಷ್ಯಾ ಸರ್ಕಾರದಿಂದ ಸಹಾಯ ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅಲ್ಲಿ ಸಿಲುಕಿರುವವರ ಸಂಖ್ಯೆಯೆಷ್ಟು ಎಂಬ ನಿಖರ ಮಾಹಿತಿ ಸಿಕ್ಕಿಲ್ಲ. ಪ್ರವಾಸಿ ವೀಸಾ ಕೂಡ ಇಲ್ಲದೆ ಮಲೇಷ್ಯಾದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಅಗಸ್ಟಿನ್ ವಿರುದ್ಧ ಮಾನವ ಕಳ್ಳಸಾಗಣೆ ಮತ್ತು ಉದ್ಯೋಗ ವಂಚನೆಗಾಗಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ತೆಲಂಗಾಣದಲ್ಲಿ ವಂಚಕರ ಜಾಲ: ಗಲ್ಫ್‌ ದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ನಿರುದ್ಯೋಗಿ ಯುವಕರನ್ನು ವಂಚಿಸುತ್ತಿದ್ದ ನಕಲಿ ಜಾಲವೊಂದು ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯಲ್ಲಿ ಕಳೆದ ಜನವರಿಯಲ್ಲಿ ಪತ್ತೆಯಾಗಿತ್ತು. ವಂಚನೆ ಜಾಲದ ಮೂಲಕ 500ಕ್ಕೂ ಹೆಚ್ಚು ಯುವಕರಿಂದ ಎರಡು ಕೋಟಿ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಲಾಗಿತ್ತು. ಉದ್ಯೋಗದ ಜಾಹೀರಾತು ನೀಡಿ ವೀಸಾ ಮತ್ತು ಇತರ ದಾಖಲೆಗಳಿಗಾಗಿ ಪ್ರತಿಯೊಬ್ಬರಿಂದ ಕನಿಷ್ಠ 20 ಸಾವಿರದಿಂದ 50 ಸಾವಿರದವರೆಗೂ ಹಣ ಪಡೆದಿರುವುದು ಬಯಲಾಗಿತ್ತು.

ಇದನ್ನೂ ಓದಿ: ಗಲ್ಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ 500ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ವಂಚನೆ: ರಾತ್ರೋರಾತ್ರಿ ಏಜೆಂಟ್​ ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.