ಅನಂತನಾಗ್(ಜಮ್ಮು ಕಾಶ್ಮೀರ): ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಗರ್ಭಿಣಿಯೋರ್ವಳನ್ನು ರಕ್ಷಿಸಿ ಅನಂತನಾಗ್ ಆಸ್ಪತ್ರೆಗೆ ತಲುಪಿಸಿರುವ ಆರ್ಮಿ 2 ಸೆಕ್ಟರ್ ರಾಷ್ಟ್ರೀಯ ರೈಫಲ್ಸ್ ನ ಯೋಧರು ಮಾನವೀಯತೆ ಮೆರೆದಿದ್ದಾರೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಹಿಮ ಸಂಗ್ರಹವಾಗಿದ್ದು, ಈ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಈ ಮಧ್ಯೆ ಬನಿಹಾಲ್‌ನ ಮಹಿಳೆಯೊಬ್ಬರು ಹೆರಿಗೆ ರಜೆಗಾಗಿ ಅನಂತನಾಗ್‌ಗೆ ತೆರಳುತ್ತಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್‌ನಿಂದ ಗರ್ಭಿಣಿ ತನ್ನ ಕುಟುಂಬ ಸದಸ್ಯರೊಂದಿಗೆ ಉಜ್ರು ಖಾಜಿಗುಂಡ್‌ನಲ್ಲಿ ಸಿಲುಕಿದ್ದರು.
ವಿಷಯ ತಿಳಿದ ಸೈನಿಕರು ರಕ್ಷಣಾ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ. ಸೇನೆಯ ಸಮಯೋಚಿತ ನೆರವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಓದಿ: ರಾಷ್ಟ್ರಪತಿ ಅಭ್ಯರ್ಥಿ ವಿಚಾರ: ಊಹಾಪೋಹ ತಳ್ಳಿ ಹಾಕಿದ ನಿತೀಶ್ ಕುಮಾರ್