ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸುಕ್ಮಾದಲ್ಲಿ ಮೂರು ಆನೆಗಳ ಸಾವಿನ ಹೊಣೆಯನ್ನು ಭಾರತೀಯ ಸೇನೆ ಹೊತ್ತುಕೊಂಡಿದೆ. ಮಾರ್ಚ್ 13 ಮತ್ತು 14 ರಂದು ಸುಕ್ಮಾದಲ್ಲಿ ಭಾರತೀಯ ಸೇನೆ ಸಮರಾಭ್ಯಾಸ ನಡೆಸುವ ವೇಳೆ ಮೂರು ಆನೆಗಳು ಸಾವನ್ನಪ್ಪಿದ್ದವು. ಆನೆಗಳ ಸಾವಿಗೆ ಸೇನೆಯು ವಿಷಾದ ವ್ಯಕ್ತಪಡಿಸಿ ಈ ರೀತಿಯ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿರುವುದಾಗಿ ಅರಣ್ಯ ಇಲಾಖೆಯ ಮೂಲಗಳು ಬಹಿರಂಗಪಡಿಸಿವೆ.
ಈ ಅಹಿತಕರ ಘಟನೆಯ ಕುರಿತು ಚರ್ಚಿಸಲು ಭಾರತೀಯ ಸೇನೆ ಮತ್ತು ಪಶ್ಚಿಮ ಬಂಗಾಳ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಸುಕ್ನಾದಲ್ಲಿರುವ ವನ್ಯಜೀವಿ ವಾರ್ಡನ್ ಕಚೇರಿ ಮತ್ತು ಪ್ರಕೃತಿ ವ್ಯಾಖ್ಯಾನ ಕೇಂದ್ರದಲ್ಲಿ ಸಭೆ ನಡೆಯಿತು. ಆರ್ಟಿಲರಿಯ ಬ್ರಿಗೇಡಿಯರ್ ಮತ್ತು ಭಾರತೀಯ ಸೇನೆಯನ್ನು ಪ್ರತಿನಿಧಿಸುವ ಇಬ್ಬರು ಕರ್ನಲ್‌ಗಳು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ರಾಜೇಂದ್ರ ಜಖರ್, ಪ್ರಧಾನ ಮುಖ್ಯ ಅರಣ್ಯಾಧಿಕಾರಿ (ಉತ್ತರ ಬಂಗಾಳ) ಉಜ್ಜಲ್ ಘೋಷ್ ಮತ್ತು ಪಶ್ಚಿಮ ಬಂಗಾಳ ಅರಣ್ಯ ಇಲಾಖೆಯಿಂದ ಮುಖ್ಯ ಅರಣ್ಯಾಧಿಕಾರಿ ಎಸ್‌ಕೆ ಮೋಲ್ ಭಾಗವಹಿಸಿದ್ದರು. ಈ ಸಭೆಯಲ್ಲಿ ಸೇನಾ ಅಧಿಕಾರಿಗಳು ಆನೆಗಳ ಸಾವಿನ ಹೊಣೆ ಹೊತ್ತುಕೊಂಡು, ಕ್ಷಮೆಯಾಚಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ಅರಣ್ಯ ಸಚಿವೆ ಜ್ಯೋತಿಪ್ರಿಯಾ ಮಲ್ಲಿಕ್ ಮಾತನಾಡಿ, ಬೈಕುಂಠಪುರ ಅರಣ್ಯದಲ್ಲಿ ಆನೆಗಳ ಮೂರು ಮೃತದೇಹಗಳು ಪತ್ತೆಯಾಗಿವೆ, ಮಾರ್ಚ್ 13 ಮತ್ತು 14 ರಂದು ಈ ಪ್ರದೇಶದಲ್ಲಿ ಆರ್ಮಿ ಡ್ರಿಲ್ ನಡೆಯುತ್ತಿತ್ತು. ಆನೆಗಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವುಗಳ ದೇಹದಲ್ಲಿ ಗುಂಡುಗಳನ್ನು ಪತ್ತೆಯಾಗಿದ್ದವು ಎಂದು ತಿಳಿಸಿದೆ. ಆನೆಗಳು, ವನ್ಯಜೀವಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಅರಣ್ಯ ಪ್ರದೇಶಗಳಲ್ಲಿ ಡ್ರಿಲ್‌ಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ನಾವು ಭಾರತೀಯ ಸೇನೆಯ ಅಧಿಕಾರಿಗಳನ್ನು ಕೇಳಿದ್ದೇವೆ. ಅರಣ್ಯ ಇಲಾಖೆಯು ಫೈರಿಂಗ್ ರೇಂಜ್ ಅನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೇನೆಗೆ ಮನವಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ಕೇರಳದಲ್ಲಿ ಕೋವಿಡ್ ಉಲ್ಬಣ, ಹೈ ಅಲರ್ಟ್.. ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ
ಆನೆಗಳ ಸಾವು ತಡೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಗೆ ಮುಂದಾದ ಈಶಾನ್ಯ ರೈಲ್ವೆ: ರೈಲ್ವೆ ಹಳಿಯಲ್ಲಿ ಆನೆ ಮತ್ತು ರೈಲುಗಳ ನಡುವಿನ ಅಪಘಾತಗಳಿಗೆ ಕಡಿವಾಣ ಹಾಕಲು ಈಶಾನ್ಯ ಗಡಿನಾಡ ರೈಲ್ವೆ ಮುಂದಾಗಿದೆ. ಈ ಸಂಬಂಧ ಕೃತಕ ಬುದ್ಧಿಮತ್ತೆ ಆಧಾರಿತ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಐಡಿಎಸ್) ಅಳವಡಿಸುವ ನಿಟ್ಟಿನಲ್ಲಿ ಈಶಾನ್ಯ ಗಡಿನಾಡ ರೈಲ್ವೆಯು ರೈಲ್ಟೆಲ್ ಕಾರ್ಪೋರೇಷನ್ ಆಫ್ ಇಂಡಿಯಾದ ಜೊತೆ ಒಪ್ಪಂದ ಮಾಡಿಕೊಂಡಿದೆ. ಸೋಮವಾರ ಅಸ್ಸೋಂನ ಗುವಾಹಟಿಯ ಮಾಲಿಗಾಂವ್‌ನಲ್ಲಿ ಎನ್‌ಎಫ್‌ಆರ್ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಈಶಾನ್ಯ ಗಡಿ ರೈಲ್ವೆ ಸಿಪಿಆರ್ಓ ಸಬ್ಯಸಾಚಿ, ನಾವು ಕಾಡು ಪ್ರಾಣಿಗಳು ರೈಲ್ವೇ ಹಳಿಗಳ ಬಳಿ ಬರುವುದನ್ನು ತಡೆಯಲು ಹಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿಶೇಷವಾಗಿ ಆನೆಗಳು ರೈಲ್ವೆ ಹಳಿಗಳ ಬಳಿ ಬರುವುದನ್ನು ಮತ್ತು ಇರುವುದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೃತಕ ಬುದ್ಧಿ ಮತ್ತೆ ಆಧಾರಿತ ಐಡಿಎಸ್ ಅಳವಡಿಸುವುದು ನಮ್ಮ ಪ್ರಮುಖ ಕಾರ್ಯಗಳಲ್ಲಿ ಒಂದು ಎಂದು ಹೇಳಿದ್ದಾರೆ.