ETV Bharat / bharat

ದೇಶದಲ್ಲಿ ಮತ್ತೆ ಏರಿದ COVID: ಕಳೆದ 24 ಗಂಟೆಯಲ್ಲಿ 38,792 ಹೊಸ ಕೇಸ್​ ಪತ್ತೆ

ಕಳೆದ 24 ಗಂಟೆಗಳಲ್ಲಿ 38,792 ಕೊರೊನಾ ಕೇಸ್​ಗಳು ಪತ್ತೆಯಾಗಿವೆ. ಸದ್ಯ ದೇಶದಲ್ಲಿ 4,29,946 ಕೇಸುಗಳು ಸಕ್ರಿಯವಾಗಿದ್ದು, ಇದುವರೆಗೆ 38,76,97,935 ಮಂದಿಗೆ ವ್ಯಾಕ್ಸಿನ್​ ನೀಡಲಾಗಿದೆ.

India Corona
ಕೊರೊನಾ ಪ್ರಕರಣ
author img

By

Published : Jul 14, 2021, 10:17 AM IST

ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 38,792 ಕೊರೊನಾ ಕೇಸ್​ಗಳು ಪತ್ತೆಯಾಗಿದ್ದು, ಒಟ್ಟು 41,000 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಭಾರತದಲ್ಲಿ ಈವರೆಗೆ 3,01,04,720 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯ ತನಕ 4,11,408 ಮಂದಿ ಸೋಂಕಿತರು ಕೋವಿಡ್​ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಸೋಂಕಿಗೆ 624 ಮಂದಿ ಕೊನೆಯುಸಿರೆಳೆದಿದ್ದಾರೆ.

ಇದನ್ನು ಓದಿ: ಗರ್ಭಿಣಿಯರಿಗೆ ಝಿಕಾ ಸೋಂಕು ತಗುಲಿದರೆ ಹುಟ್ಟುವ ಮಗುವಿಗೆ ಅಪಾಯ: ದ.ಕನ್ನಡ ಡಿಹೆಚ್​ಒ

ದೇಶದಲ್ಲಿ ಇಲ್ಲಿಯವರೆಗೆ 3,09,46,074 ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಸದ್ಯ ದೇಶಾದ್ಯಂತ 4,29,946 ಕೇಸ್​ಗಳು ಸಕ್ರಿಯವಾಗಿವೆ. ಇದುವರೆಗೆ 38,76,97,935 ಮಂದಿಗೆ ವ್ಯಾಕ್ಸಿನ್​ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 37,14,441 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR)​ ತಿಳಿಸಿದೆ.

ಕಳೆದ 118 ದಿನಗಳ ಬಳಿಕ ಅತಿ ಕಡಿಮೆ ಕೇಸ್​ ಎಂಬಂತೆ ಮಂಗಳವಾರ 31,443 ಕೊರೊನಾ ಪ್ರಕರಣಗಳು ಕಂಡುಬಂದಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.